ಸ್ಥಳೀಯ ಸುದ್ದಿಗಳು
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ದುಗ್ಗಪ್ಪಗೌಡ ಅವಿರೋಧ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ನ ಶಿವಮೊಗ್ಗ ಉಪವಿಭಾಗದ ಮಾರಾಟ ಹಾಗೂ ಸಂಸ್ಕರಣಾ ಸಹಕಾರ ಸಂಸ್ಥೆ ಕ್ಷೇತ್ರದ ನಿರ್ದೇಶಕರಾಗಿ ದುಗ್ಗಪ್ಪಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಸ್ಥಾನಕ್ಕೆ ಅ.11ರಂದು ಚುನಾವಣೆ ನಡೆಯಲು ದಿನಾಂಕ ನಿಗದಿ ಮಾಡಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ನಿನ್ನೆಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇಂದು ನಾಮ ಪತ್ರ ವಾಪಸ್ಸು ಪಡೆಯಲು ದಿನಾಂಕ ನಿಗದಿ ಮಾಡಲಾಗಿತ್ತು,
ಆರ್ ಎಮ್ ಮಂಜುನಾಥ ಗೌಡ, ದುಗ್ಗಪ್ಪಗೌಡ, ವಿಜಯಕುಮಾರ (ದನಿ) ಅರ್ಜಿ ಸಲ್ಲಿಸಿದ್ದರು. ಆರ್ ಎಮ್ ಎಮ್ ಮತ್ತು ದನಿ ಅರ್ಜಿ ವಾಪಸ್ಸು ಪಡೆದಿದ್ದರಿಂದ ದುಗ್ಗಪ್ಪಗೌಡರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣ ಅಧಿಕಾರಿಯಾಗಿ ಎಸಿ ಕರ್ತವ್ಯ ನಿರ್ವಾಹಿಸಿದ್ದಾರೆ.
ಇದನ್ನೂ ಓದಿ-https://suddilive.in/archives/533
