ರಾಜಕೀಯ ಸುದ್ದಿಗಳು

ಆರೋಪದ ಬೆನ್ನಲ್ಲೇ ಈಡಿಗರ ಶಕ್ತಿ ಪ್ರದರ್ಶನಕ್ಕೆ ಮುಂದಾಯ್ತಾ ಬಿಜೆಪಿ?

ಶಾಸಕ ಬೇಳೂರನ್ನ ಆಹ್ವಾನಿಸಲಾಗುವುದಾ‌ಎಂಬ ಪ್ರಶ್ನೆಗೆ ತಡಬಡಾಯಿಸಿದ್ರಾ ಮಾಜಿ ಸಚಿವರು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಈಡಿಗರ ಮತ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಮತಭೇಟೆಗೆ ಬಿಜೆಪಿ ಮುಂದಾಗಿದೆ. ಜಿಲ್ಲಾ ಬಿಜೆಪಿಯಲ್ಲಿ ಈಡಿಗ ಸಮುದಾಯದವರಿಗೆ ಸ್ಥಾನ ಮಾನ ನೀಡಿಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಬಿಜೆಪಿ ಸಮುದಾಯದ ಶಕ್ತಿ ಪ್ರದರ್ಶಕ್ಕೆ ಮುಂದಾದಂತೆ ಕಂಡು ಬಂದಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ‌ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ, ಮಾ. 5 ರಂದು‌ಸಾಗರದ ಧ್ವಜ ಸ್ಥಂಭದಲ್ಲಿ ದೀವರ, ಬಿಲ್ಲವ ಸೇರಿದಂತೆ ಈಡಿಗರ 26 ಸಮುದಾಯದವರ ಶಕ್ತಿ ಸಾಗರ ಸಂಗಮ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.

ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ಸಹ ರಚಿಸಲಾಗಿದೆ. ನಾನು ಅಧ್ಯಕ್ಷನಾದರೆ ಕೋಟಾ ಶ್ರೀನಿವಾಸ ಪೂಜಾರಿ ಉಪಾಧ್ಯಕ್ಷ‌ರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸನೀಲ್ ಕುಮಾರ್ ಆಗಿದ್ದಾರೆ. ಮಾಲಕಯ್ಯ ಗುತ್ತೇದಾರ್ ಸಹ ಸಮಿತಿಯಲ್ಲಿದ್ದಾರೆ ಎಂದರು.

ಶಕ್ತಿಸಾಗರ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನ ಸನ್ಮಾನಿಸಲಾಗುತ್ತಿದೆ. ಬಿಎಸ್ ವೈ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಮೊದಲಬಾರಿಗೆ ಜಿಲ್ಲೆಯ ಸಮುದಾಯ ಭವನಕ್ಕೆ ಸರ್ಕಾರದಿಂದ ಹಣಕೊಡಿಸಿದವರು ಬಿಎಸ್ ವೈ ಆಗಿದ್ದಾರೆ ಎಂದರು.

ಆ ದೃಷ್ಠಿಯಿಂದ ಸಮಾವೇಶ ನಡೆಸಲಾಗುತ್ತಿದೆ. ಮಾಜಿ ಶಾಸಕರು ಹಾಲಿ ಶಾಸಕರು, ಜನಾಂಗದ ಸ್ವಾಮೀಜಿಗಳನ್ನೂ ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ 60 ಸಾವಿರ ಜನ ಸೇರಲಿದ್ದಾರೆ.
ಬಿಎಸ್ ವೈ ಅವರನ್ನ ಸನ್ಮಾನಕ್ಕಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರ‌ ಜೊತೆಗೆ ರಾಜಕಾರಣಿಗಳಾದ ನಾವುಗಳು ಸರ್ಕಾರಕ್ಕೆ ಬೇಡಿಕೆನೂ ಇಡುತ್ತದೆ ಎಂದರು.

ಕೊಪ್ಪ, ತೀರ್ಥಹಳ್ಳಿ, ಸಾಗರ ಶಿವಮೊಗ್ಗದಲ್ಲಿ ಭವ್ಯ ಈಡಿಗರ ಸಮಾಜ ನಿರ್ಮಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಮಂದಿರ ಕಟ್ಟಲಾಗುತ್ತಿದೆ. ಇದಕ್ಕೆಲ್ಲಾ ಬಿಎಸ್ ವೈ ಮೊದಲಬಾರಿಗೆ ಸಿಎಂ ಆದಾಗ 5 ಕೋಟಿ ಹಣ ನೀಡಿದ್ದು ಗಮನಾರ್ಹವಾಗಿದೆ ಎಂದರು.

ಹಲವರಿಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗುತ್ತಿದೆ. ರಾಜಕೀಯ ಸಾಮಾಜಿಕ, ಜಾತಿ ಉದ್ದಾರಕ್ಕಾಗಿ ಸಮಸವೇಶ ನಡೆಸಲಾಗುತ್ತಿದೆ ಎಂದರು‌. ಈ ವೇಳೆ ಕಾರ್ಯಕ್ರಮದ ಬ್ಯಾನರ್ ಸಹ ಬಿಡುಗಡೆ ಮಾಡಾಯಿತು.

ಸ್ಥಳೀಯ ಶಾಸಕರನ್ನ ಆಹ್ವಾನಿಸುತ್ತೀರಾ?

ಎಲ್ಲಾ ಹಾಲಿ ಮಾಜಿ ಶಾಸಕರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಾ ಎಂಬ ಮಾಧ್ಯಮದವರ ಪ್ರಶ್ನೆಗೆ ತಡಬಡಾಯಿಸಿದ ಮಾಜಿ ಸಚಿವರು, ಸಮಿತಿ ಈ ಬಗ್ಗೆ ಚರ್ಚಿಸಲಿದೆ ಎಂದರು. ಇದಕ್ಕೂ ಮೊದಲು ಬ್ಯಾನರ್ ಉಲ್ಟಾ ಹಿಡಿದಿಲ್ಲ ಅಲ್ವಾ ಎನ್ನುವ ಮೂಲಕ ಪ್ರಶ್ನೆಗೆ ಉತ್ತರ ನೀಡುವ ಬದಲು ಟಾಂಗ್ ನೀಡಲು ಯತ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಡಾ.ರಾಜನಂದಿನಿ ಕಾಗೋಡು, ಮಾಜಿ ಶಾಸಕ ಸ್ವಾಮಿರಾವ್, ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಹರಿಕೃಷ್ಣ, ಅಶೋಕ್ ಮೂರ್ತಿ, ರಾಜಶೇಖರ್ ಗಾಳೀಪುರ, ರೂಪ, ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಉಪ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9594

Related Articles

Leave a Reply

Your email address will not be published. Required fields are marked *

Back to top button