ರಾಜಕೀಯ ಸುದ್ದಿಗಳು

ಮಳೆಗಾಲ ಮುಗಿದ ನಂತರ ವಡ್ರಕಪ್ಪೆ ಕೂಗು ಕೇಳಿಸೊಲ್ಲ ಎಂದು ಆಯನೂರು ಹೇಳಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಶುಗರ್ ಫ್ಯಾಕ್ಟರಿ ಜಾಗದಲ್ಲಿ ಬಿಎಸ್ ವೈ ಕುಟುಂಬದ ಪಾತ್ರವಾಗಲಿ ಅಥವಾ ಸಚಿವ ಮಧು ಬಂಗಾರಪ್ಪನವರ ಪಾತ್ರವೂ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬ್ಯಾಟ್ ಬೀಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವ ಕಾರಣ ಶುಗರ್ ಫ್ಯಾಕ್ಟರಿ ವಿಷಯ ಎದ್ದಿದೆ. ಇದು ರಾಜಕಾರಣಕ್ಕೆ ತಿರುಗಿಕೊಂಡಿರುವುದು ಯಾಕೆ ಎಂಬುದು ಗೊತ್ತಿಲ್ಲ. ಆದರೆ ಸಂಸದರು ಈ ಜಾಗದಲ್ಲಿ ಕಣ್ಣು ಹಾಕಿರುವುದು ಕಂಡು ಬಂದಿಲ್ಲ. ಅದರಂತೆ ಸಚಿವರು ಆ ಜಾಗಕ್ಕೆ ಕಂಡು ಬಂದಿಲ್ಲವೆಂದು ಹೇಳಿದರು.

ಶುಗರ್ ಫ್ಯಾಕ್ಟರಿ ವಿಷಯದಲ್ಲಿ ನನ್ನ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಆದರೆ ಶುಗರ್ ಫ್ಯಾಕ್ಟರಿ ಬಂದ್ ಆದ ವೇಳೆ  ಕಾರ್ಮಿಕರು ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಯಾರೂ ಅವರ ಅತ್ಮಸ್ಥೈರ್ಯ ಕೆಲಸ ಮಾಡಲಿಲ್ಲ. ನಾನು ಮಾಡಿದ್ದೇನೆ. ಈಗ ನನ್ನ ವಿರುದ್ಧ ಟೀಕೆ ಟಿಪ್ಪಣಿ ಮಾಡುವವರು ಆಗ ಎಲ್ಲಿ ಹೋಗಿದ್ದರು ಎಂದು  ಗುಟರ್ ಹಾಕಿದರು.

ಶುಗರ್ ಫ್ಯಾಕ್ಟರಿಯ 1380 ಎಕರೆ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆಯಬಗ್ಗೆಯೂ ಆರೋಪ ಕೇಳಿ ಬಂದಿದೆ.‌  ಯಾರಾದರೂ ಸೈಟ್ ಮಾಡಿ ಮಾರಾಟ ಮಾಡುದ್ರೆ, 945 ಕಾರ್ಮಿಕ ಕುಟುಂಬರನ್ನ ಕರೆದುಕೊಂಡು ಹೋಗಿ ಕಾರ್ಮಿಕರಿಗೂ ಭೂಮಿ ಕೊಡಿ ಎಂದು ಆಗ್ರಹಿಸುವೆ. ರಿಯಲ್ ಎಸ್ಟೇಟ್ ಆಗಲಿ ಅಂತ ಕಾಯ್ತಾಇದ್ದೀನಿ ಎಂದರು.

ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಯಾಕೆ ರಾಜಕಾರಣ ಬೆರೆಯಿತು ಗೊತ್ತಿಲ್ಲ. ಆದರೆ ಮಳೆಗಾಲ ಮುಗಿದ ನಂತರ ವಡರೆಗೊಪ್ಪ, ಕೂಗುವುದೆಲ್ಲ ಬಂದ್ ಆಗುತ್ತೆ ಚುನಾವಣೆ ನಂತರ ಈ ವಿಷಯಗಳು ಮುಗಿಯಲಿದೆ. ಸಂಸದರು ಯಾರು ಆ ಜಾಗಕ್ಜೆ ಕೈಹಾಕಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಸಚಿವರು  ವಿರುದ್ಧದ ಆರೋಪವೂ ಸರಿಯಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಧೀರಾಜ್, ಐಡಿಯಲ್ ಗೋಪಿ, ಆಯನೂರು ಮಂಜುನಾಥ್ ಅವರ ಪುತ್ರ ಹಾಗೂ ಆರ್ಕಿಟೆಕ್ಟ್ ಸಂತೋಷ್, ಹಿರಣಯ್ಯ, ಶಿ.ಜು ಪಾಶ, ಪದ್ಮನಾಭ್  ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5776

Related Articles

Leave a Reply

Your email address will not be published. Required fields are marked *

Back to top button