ರಾಜ್ಯ ಸರ್ಕಾರ ಇಸ್ಲಾಮೀಕರಣಕ್ಕೆ ಶರಣಾಗಿದೆ-ಜಗದೀಶ್ ಕಾರಂತ್

ಸುದ್ದಿಲೈವ್/ಶಿವಮೊಗ್ಗ

ನಾಳೆಯಿಂದ ಹಿಂದೂ ರಕ್ಷಣೆಯ ಬಗ್ಗೆ ಜಾಗೃತಿಗಾಗಿ ರಾಜಕೀಯ ರಹಿತ ಹಿಂದೂ ಚಳುವಳಿ ಆರಂಭಿಸಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯದ ಸಂಘಟಕ ಜಗದೀಶ್ ಕಾರಂತ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಸ್ಲಾಮೀಕರಣ ದಿಂದ ಹಿಂದೂಗಳು ಮನೆ ಮಠ ಆಸ್ತಿ ಪಾಸ್ತಿಯನ್ನ ತೊರೆದು ವಲಸೆ ಹೊರಡುವ ಸ್ಥಿತಿ ನಿರ್ಮಾಣವಾಗಿದೆ. ರಾಗಿಗುಡ್ಡದಲ್ಲಿ ಮನೆಗಳಿಗೆ ಕಲ್ಲು ತೂರಾಟ, ಮನೆಗೆ ನುಗ್ಗಿ ಆಸ್ತಿ ಹಾನಿ ಮಾಡುವ ಘಟನೆಗಳು ನಡೆದಿದೆ ಎಂದರೆ ಹಿಂದೂ ಸಮಾಜ ತನ್ನ ರಕ್ಷಣೆ ತಾನು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು
ಆತ್ಮರಕ್ಷಣೆ ಮೂಲಭೂತ ಅಧಿಕಾರ, ಮಕ್ಕಳು ಆಸ್ತಿಯ ರಕ್ಷಣೆ, ಕೈಹಿಡದ ಹೆಂಡತಿ, ಕುಟುಂಬದಲ್ಲಿನ ಅಕ್ಕ, ತಂಗಿ ಹಾಗೂ ಹೆಣ್ಣಿನ ರಕ್ಷಣೆಗಾಗಿ ಜಾಗರಣ ವೇದಿಕೆ ನಾನ್ ಪೊಲಿಟಿಕಲ್ ಹಿಂದೂ ಮೂವ್ ಮೆಂಟ್ ಆರಂಭವಾಗಲಿದೆ. ಇದು ಬೀದಿಯ ಮೇಲಾದರೆ ಬೀದಿಯ ಮೇಲೆ ನಡೆಸಲು ಸಿದ್ದ ಎಂದು ಗುಡುಗಿದರು.
25%ರಷ್ಟು ಮುಸ್ಲೀಂರ ಜನಸಂಖ್ಯೆ ಶಿವಮೊಗ್ಗದಲ್ಲಿ ದಾಟಿದೆ ಇದರಿಂದ ಹಿಂದೂ ಸಮಾಜ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಪಲಾಯನ ಮಾಡಬೇಕೋ ಅಥವ ಎದುರಿಸಿ ನಿಲ್ಲಬೇಕೋ ಎಂಬ ಭಯಭೀತಿಗೆ ಹಿಂದೂ ಸಮಾಜ ಬಂದು ನಿಂತಿದೆ. ಸಾವರ್ಕರ್ ಅವರ ಭಾವಚಿತ್ರಕ್ಕೆ ಮಾಡಿದ ಅವಮಾನ ಮಾಡುವ ದಾಷ್ಟ್ಯ ಏನಿತ್ತು? ಅಂತಹ ವ್ಯಕ್ತಿಯ ಬಗ್ಗೆ ಗದಿಗರಿದೆರಿರುವ ಇಸ್ಲಾಮಿಕರಣವೇ ಮೊನ್ನೆ ರಾಗಿಗುಡ್ಡದ ಹಿಂದೂ ಮನೆಗಳ ಮೇಲೆ ನಡೆದ ಅಟ್ಯಾಕ್ ನಲ್ಲೂ ಅಡಗಿದೆ ಎಂದರು.
ರಾಜ್ಯ ಸರ್ಕಾರದ ನಿಲುವು ಸಹ ಇಸ್ಲಾಮೀಕರಣಕ್ಕೆ ಮಾರಿಹೋದಂತೆ ಇದೆ. ಡಿಸಿಎಂ ಸಿಎಂ ಗೃಹಸಚಿವರು ಡಿಜೆ ಹಳ್ಳಿ ಕೆಜೆಹಳ್ಳಿ ಹುಬ್ಬಳಿ ಗಲಭೆಯ ಆರೋಪಿಯ ಮೇಲೆ ದಾಖಲಾದ ಎಲ್ಲಾ ಮೊಕದ್ದಮೆಯನ್ನ ಹಿಂಪಡೆಯಲು ಬರೆದಿರುವ ಪತ್ರ ಇಸ್ಲಾಮೀಕರಣಕ್ಕೆ ಸರ್ಕಾರ ಶರಣಾಗಿದೆ. ಸಿದ್ದರಾಮಯ್ಯ ಸರ್ಕಾರ ದೇಶ ವಿಭಜಿಕ ಶಕ್ತಿಯ ಜೊತೆ ಕೈಜೋಡಿಸಿದೆ. ಇದರಿಂದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಕೋಮು ಸಂಘರ್ಷ ಮುಂದು ವರೆದಿದೆ ಎಂದರು.
ಭವಿಷತ್ತಿನಲ್ಲಿ ಹಿಂದೂ ಸುರಕ್ಷಿತ ಸಮಾಜ ಹೇಗಿರಬೇಕು ಎಂದು ಹಿಂದು ಜಾಗೃತಿಯ ಜಾಗರಣ ವೇದಿಕೆ ಆರಂಭಿಸಿದೆ. 1982 ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ವೇಳೆ ನಿರ್ಮಿದಿದ್ದ ಶಿವಾಜಿ ಮಹಾರಾಜನ ಕಟೌಟ್ ನಿರ್ಮಿಸಿದ್ದಕ್ಕೆ ನಡೆದ ಕೋಮು ಗಲಭೆಯಲ್ಲಿ ಹಿಂದೂ ಲೆಕ್ಚರರ್ ನನ್ನಕಡಿದು ಹಾಕಿದ ಪ್ರಕರಣ ಭಯಾನಕ ಹುಟ್ಟಿಸಿತ್ತು.
ಹಿಂದಿನಿಂದಲೂ ನಡೆದು ಬಂದ ಕೋಮು ಗಲಭೆಯನ್ನ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಹಿಂದಿನ ಕೋಮುಗಲಭೆ, ಮೊನ್ನೆ ಹರ್ಷನ ಹತ್ಯೆ, ಇಂದಿನ ರಾಗಿಗುಡ್ಡದ ಪ್ರಕರಣದ ವರೆಗೆ ಪ್ರತ್ಯೇಕಿಸಿ ನೋಡುವುದಲ್ಲ. ಭಾರತದಲ್ಲಿ ಇಸ್ಲಮೀಕರಣ ಪಾರ್ಟ್ ಬೈ ಪಾರ್ಟ್ ನಡೆಯುತ್ತಿದೆ. ಇದರ ಹಿಂದೆ ಇಸ್ಲಾಮೀಕರಣದ ಬಯೋಗ್ರಫಿ ಅಡಗಿದೆ. ಹಿಂದೂಗಳು ವಲಸೆ ಹೋಗುವಂತೆ ಮಾಡುವುದು ಮತ್ತು ಆ ಜಾಗವನ್ನ ಕಬ್ಜ ಮಾಡಿಕೊಳ್ಳುವುದು ಈ ಇಸ್ಲಾಮೀಕರಣದ ಮುಖ್ಯ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಾತ್ಯ ಪ್ರಮುಖ ಉಲ್ಲಾಸ್, ಕಲ್ಲುತೂರಾಟದ ಹಿಂದಿನ ಉದ್ದೇಶವೇನಿದೆ. ಪ್ರತಿಭಟನೆಯ ನೆಪದಲ್ಲಿ ದಂಗೆ ಎದ್ದಿದೆ. ಭಯೋತ್ಪಾದಕನ ಭಯೋತ್ಪಾದಕ ಕೃತ್ಯ ನಡೆದಿದೆ. ಹಿಂದೂಗಳೆ ಇವರಿಗೆ ಟಾರ್ಗೆಟ್ ಆಗಿದ್ದಾರೆ ಎಂದು ದೂರಿದರು.
ಅಖಂಡ ಭಾರತದ ನಿರ್ಮಾಣದ ಹಿನ್ನಲೆಯಲ್ಲಿ ಔರಂಗ ಜೇಬ್ ನ ದ್ವಾರ ನಿರ್ಮಿಸಲಾಗಿದೆ. ಕಾಶಿ ದೇವಸ್ಥಾನದ ಮೇಲೆ ದಾಳಿ ನಡೆಸಿದವನು ಔರಂಗಜೇಬ್ ಆಗಿದ್ದಾನೆ. ರಾಗಿಗುಡ್ಡದಲ್ಲಿ ಟಿಪ್ಪುವಿನ ಕಟೌಟ್ ನಲ್ಲಿ ಹಿಂದೂ ಸೈನಿಕನ ಕೊಲೆಯ ಚಿತ್ರ ನಿರ್ಮಿಸಲಾಗಿದೆ. ಟಿಪ್ಪು, ಖಡ್ಗ, ಔರಂಗ ಜೇಬ್ ನಿರ್ಮಿಸಿರುವುದೇ ಭಯೋತ್ಪಾದಕ ಕೃತ್ಯಗಳಾಗಿದೆ ಎಂದರು.
ಪಿಎಫ್ಐನ ಮಾನಸಿಕತೆ ಇಲ್ಲಿ ಎದ್ದುಕಾಣುತ್ತಿದೆ. ಎಸ್ಪಿ ಸ್ಟೇಟ್ ಮೆಂಟ್ ಎರಡು ಸಮುದಾಯದ ನಡುವೆ ಎಸೆದ ಕಲ್ಲುತೂರಾಟವಾಗಿದೆ ಎಂದಿದ್ದಾರೆ. ಒಂದು ಸಮಾಜವನ್ನ ಬಜಾವ್ ಮಾಡುವ ಯತ್ನ ಇದರಲ್ಲಿ ಅಡಗಿದೆ. 2015 ರಲ್ಲಿ ಮಡಿಕೇರಿಯಲ್ಲಿ ಪುಟ್ಟಪ್ಪನವರ ಹತ್ಯೆಯಾಗಿತ್ತು. ಗಾಯಗೊಂಡ ಹಿಂದುಗಳ ಮೇಲೆ 307 ಹಾಕಲಾಗಿದೆ ಒಂದು ಕಡೆ ನಡೆದ ಗಲಭೆ ಮುಸ್ಲೀಂ ಭಯೋತ್ಪಾದನೆಯನ್ನ ಹುಟ್ಟುಹಾಕುವ ಶಕ್ತಿಗಳಿಂದ ಕೃತ್ಯ ನಡೆದಿದೆ. ಇಲ್ಲಿನ ಸಮಾಜದ ಸುರಕ್ಷತೆಗೆ ದಕ್ಕೆ ಬರಲಿದೆ ಎಂದರು.
ಇದನ್ನೂ ಓದಿ-https://suddilive.in/archives/504
