ರಾಗಿಗುಡ್ಡದ ರಹಸ್ಯ ಯಾರಿಗೆ ಲಾಭ?

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಗಲಭೆ ಪ್ರಕರಣ ನಡೆದು 4ದಿನಗಳು ಕಳೆದಿವೆ. ಈ ಕೋಮು ದಳ್ಳುರಿಯ ಲಾಭ ಮಾತ್ರ ಬಿಜೆಪಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಕಲ್ಲು ತೂರಾಟದಲ್ಲಿ ಹಾನಿಗೊಳಗಾದ ಮನೆಗಳು, ವಾಹನಗಳಲ್ಲಿ ಹಿಂದೂಗಳೇ ಹೆಚ್ಚು ಹಾನಿ ಅನುಭವಿಸಿದ್ದಾರೆ. ಈ ಹಾನಿಯ ಹಿನ್ಬಲೆಯಲ್ಲಿ ಬಿಜೆಪಿಯ ನಿಯೋಗ ನಾಳೆ ರಾಗಿಗುಡ್ಡಕ್ಕೆ ಭೇಟಿ ನೀಡುತ್ತಿವೆ.
ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದೂಗಳ ಮನೆಯ ಮೇಲೆ ಅಟ್ಯಾಕ್ ಆದರೂ, ಮುಸ್ಲೀಂರ ಮೇಲೆ ಅಟ್ಯಾಕ್ ಆದರೂ ಬಿಜೆಪಿಗೆ ಹೆಚ್ಚಿನ ರಾಜಕೀಯ ಲಾಭವಾಗುತ್ತದೆ ಎಂಬ ಮಾತು ಸುಳ್ಳಲ್ಲ. ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನ ಕಿತ್ತೊಗೆದ ಮತದಾರರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಭೂತಪೂರವಾಗಿ ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಆದರೆ ಈ ಕೋಮು ಸಂಘರ್ಷ ಮಾತ್ರ ಕಾಂಗ್ರೆಸ್ ಗೆ ಆಡಳಿತ ವಿರೋಧಿ ಅಲೆ ಹುಟ್ಟಿಸುವಲ್ಲಿ ಅನುಮಾನವೇ ಇಲ್ಲ.
ರಾಜ್ಯದಲ್ಲಿ ಬಿಜೆಪಿ ಸೋತರು, ಶಿವಮೊಗ್ಗ ನಗರದಲ್ಲಿ ಬಿಜೆಪಿನೇ ಗೆದ್ದಿದೆ. ಕಾರಣ ಹಿಂದೂತ್ವದ ಗಟ್ಟಿ ಬುನಾದಿ ಬಿಜೆಪಿಯನ್ನ ಕೈಬಿಟ್ಟಿಲ್ಲ. ಜೈಶ್ರೀರಾಮ್ ಎಂಬ ಘೋಷಣೆ ಕೂಗಿಯೇ ಅಧಿಕಾರ ಹಿಡಿಯುವ ಬಿಜೆಪಿಗರಿಗೆ ರಾಗಿಗುಡ್ಡದ ಪ್ರಕರಣ ಬಲವಾದ ಅಸ್ತ್ರ ನೀಡಿದಂತಾಗಿದೆ. ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರ ಮತ್ತು ಬೈಂದೂರು ವಿಧಾನ ಸಭೆ ಕ್ಷೇತ್ರದ ಲೋಕ ಸಭಾ ಕ್ಷೇತ್ರದಲ್ಲಿ ರಾಗಿಗುಡ್ಡದ ಕೋಮು ದಳ್ಳುರಿ ಮಾತ್ರ ಬಿಜೆಪಿಗೆ ಮತ್ತಷ್ಟು ಭದ್ರಬುನಾದಿ ಹಾಕಿದಂತಾಗಿದೆ.
ಸಿಟಿ ರವಿಯವರ ಖಡ್ಗದ ಬದಲು ಗದೆ, ಉರಿಗೌಡ ನಂಜೇಗೌಡರ ವಿಷಯದಿಂದ ಬಿಜೆಪಿಗರು ಹಿಂದೂ ಸಮಾಜವನ್ನ ಸಾಕಷ್ಟು ಹತ್ತಿರವನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ಕಳೆದ ಮೂರು ವರೆ ವರ್ಷದ ಆಡಳಿತದಲ್ಲಿ ಹಿಂದೂ ಸಮಾಜಕ್ಕೆ ಏನು ಮಾಡದಿದ್ದರು ಈ ಕೋಮು ಗಲಭೆ ಮಾತ್ರ ಹಿಂದೂಗಳನ್ನ ಬಿಜೆಪಿ ತನ್ನ ಬಳಿಯೇ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮುಸ್ಲೀಂ ಸಮಾಜ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮುಸ್ಲೀಂ ಸಮಾಜವನ್ನ ಆಕ್ರಮಣ ಶೈಲಿಯಿಂದ ಹೊರಬಂದು ತನ್ನ ಸ್ಟ್ರ್ಯಾಟಜಿ ಬದಲಾಯಿಸಿಕೊಳ್ಳದೆ ಇದ್ದರೆ ಇದು ಬಿಜೆಪಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ನಮ್ಮ ಪರವಾಗಿ ಇದೆ ಎಂಬ ಮಾತಿದ್ದರೂ ರಾಜಕೀಯ ಸ್ಟ್ರ್ಯಾಟಜಿ ಬದಲಾಗದ ಹೊರತು ಬಿಜೆಪಿ ಇದರ ಲಾಭ ಮಾಡಿಕೊಳ್ಳುತ್ತಲೇ ಇರುತ್ತದೆ.
ಇದನ್ನೂ ಓದಿ-https://suddilive.in/archives/497
