ಅವರು ಮಾತ್ರ ಮತಹಾಕಿಲ್ಲ ಹಿಂದೂಗಳೂ ಮತಹಾಕಿದ್ದಾರೆ-ವೆಂಕಟಲಕ್ಷ್ಮೀ ಅಳಲು

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ಕಲ್ಲುತೂರಾಟ ನಡೆದಿರುವ ಬಗ್ಗೆ ಸ್ಥಳೀಯರು ಕಣ್ಣೀರು ಹಾಕಿದ್ದಾರೆ. ಶಂಕರ್ ಎಂಬುವವನನ್ನ ಪೊಲೀಸರು ಕಲ್ಲುತೂರಾಟದಲ್ಲಿ ಬಂಧಿಸಿರುವ ಬಗ್ಗೆ ತಾಯಿ ವೆಂಕಟಲಕ್ಷ್ಮಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿ ಭಟನೆಯಲ್ಲಿ ಕಣ್ಣೀರು ಹಾಕಿದ್ದಾರೆ.
ನನಗೆ ಗಂಡ ಇಲ್ಲ. ನಾವು ನಮ್ಮಮಗನ ಜೊತೆ ಬದುಕುತ್ತಿದ್ದೇನೆ. ದುಡಿಯುವ ಕೈ ಒಂದೇ ಮೊನ್ನೆ ರಾಗಿಗುಡ್ಡದಲ್ಲಿ ಹಿಂದೂಗಳ ಮನೆಯನ್ನ ಟಾರ್ಗೆಟ್ ಮಾಡಿಕೊಂಡು ನಡೆದ ಕಲ್ಲು ತೂರಾಟದಲ್ಲಿ ಮಗ ಶಂಕರನನ್ನ ಪೊಲೀಸರು ಬಂಧಿಸಿದ್ದಾರೆ. ನನ್ನಮಗ ಏನೂ ಮಾಡಿಲ್ಲವೆಂದು ವೆಂಕಟಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿವೆ. ಈ ವೇಳೆ ರಾಗಿಗುಡ್ಡದ ಗಲಭೆಯಲ್ಲಿ ಸಂತ್ರಸ್ತ್ರು ಭಾಗಿಯಾಗಿದ್ದರು. ವೆಂಕಟಲಕ್ಷ್ಮೀ ಸಹ ಭಾಗಿಯಾಗಿ ರಾಗಿಗುಡ್ಡದ ಗಲಭೆಯಲ್ಲಿ ಹಿಂದೂ ಮಕ್ಕಳು ಯಾರೂ ಭಾಗಿಯಾಗಿಲ್ಲವೆಂದು ನೋವು ತೋಡಿಕೊಂಡಿದ್ದಾರೆ.
ಅವರು ಮತಹಾಕಿದ್ದಕ್ಕೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಹಿಂದೂಗಳು ಮತ ಹಾಕಿದ್ದಕ್ಕೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಹ ಮಹಿಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾಳೆ. ಈ ಎಚ್ಚರಿಕೆ ಸರ್ಕಾರ ಕೇಳಿಸಿಕೊಳ್ಳಲಿದೆಯಾ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ-https://suddilive.in/archives/983
