ರಾಜ್ಯ ಸುದ್ದಿಗಳು

ವಿಮಾನ‌ ನಿಲ್ದಾಣದ ಸಮಸ್ಯೆಯ ಬಗ್ಗೆ ಮಾತನಾಡುವ ವೇಳೆ ಮಧು ಬಂಗಾರಪ್ಪ ಕಷ್ಟ ಎಂದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿದೆ. ಬೆಂಗಳೂರು, ಹೈದ್ರಾಬಾದ್, ಗೋವಾ, ತಿರುಪತಿಗೆ ಈಗಾಗಲೇ ಇಡಿಗೋ ಮತ್ತು ಸ್ಟಾರ್ ಏರ್ ಲೈನ್ಸ್ ಹಾರಾಟ ಆರಂಭಿಸಿದೆ. ಈ ನಡುವೆ ವಿಮಾನ ಹಾರಾಟಕ್ಕೆ ನೈಟ್ ಲ್ಯಾಂಡಿಂಗ್ ಸಮಸ್ಯೆಯಾಗಿದೆ.

ಇವೆಲ್ಲದರ ನಡುವೆ ಬೀದರ್ ವಿಮಾನ‌ನಿಲ್ದಾಣ ಬಂದ್ ಆಗಿವೆ. ಇದೇ ರೀತಿಯಲ್ಲಿಯೇ ಶಿವಮೊಗ್ಗ ವಿಮಾನ ನಿಲ್ದಾಣ ಬಂದ್ ಆಗಲಿದೆಯಾ ಅಥವಾ ಯಶಸ್ವಿಯಾಗಿ ಮುಂದುವರೆಯಲಿದೆಯಾ ಎಂಬ ಅನುಮಾನಕ್ಕೆ ಹಲವು ಸಮಸ್ಯೆಗಳು ಕಸರಣವಾಗಿದೆ. ಇದರಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆಯೂ ಸಹ‌ ಒಂದಾಗಿದೆ.

ಆದರೆ ನೈಟ್ ಲ್ಯಾಂಡಿಂಗ್ ಸಮಸ್ಯೆ ಶೀಘ್ರದಲ್ಲಿಯೇ ಮುಕ್ತಿ ಹೊಂದಲಿದೆ ಎಂಬ ಭರವಸೆ ದೊರೆತಿದೆ. ಆದರೆ ಸಚಿವ ಮಧು ಬಂಗಾರಪ್ಪ ಮತ್ತೊಂದು ಸಮಸ್ಯೆ ಯಾಗಿದ್ದನ್ನ ಸ್ಥಳದಲ್ಲಿಯೇ ಸಚಿವ ಎಂಬಿ ಪಾಟೀಲ್ ಗೆ ವಿಷಯ ಮುಟ್ಟಿಸಿದ್ದಾರೆ. ಇಂಧನ ತುಂಬಿಸಿಕೊಳ್ಳುವ ವ್ಯವಸ್ಥೆ ಇದ್ದರೆ ವಿಮಾನ ಹಾರಾಟವೂ ಹೆಚ್ಚಾಗಲಿದೆ ಎಂದು‌ ಮುಗಳ್ನಕ್ಕಿದ್ದು ಮಾತ್ರ ಕುತೂಹಲ ಮೂಡಿಸಿದೆ‌.

ಇವೆಲ್ಲಾ ಕಷ್ಟ ಎಂದು ಮುಗಳ್ನಕ್ಕಿದ್ದು ಮಾತ್ರ ವಿಮಾನ ಹಾರಾಟದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಪರಿಹಾರನಾ ಅಥವಾ 600 ಕೋಟಿ ರೂ. ಹಣವನ್ನ ತಂದು ಅತಿದೊಡ್ಡ ವಿಮಾನ ನಿಲ್ದಾಣ ಎಂದು ಹೇಳಿಕೊಳ್ಳುವ ಬಿಜೆಪಿಗರಿಗೆ ಗುನ್ನಾ ಇಡುವ ಮಾತನ್ನಾಡುದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಎಲ್ಲವನ್ನೂ  ಸ್ವಲ್ಪ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/6242

Related Articles

Leave a Reply

Your email address will not be published. Required fields are marked *

Back to top button