ರಾಜ್ಯ ಸುದ್ದಿಗಳು

ಅದು ಉಪ್ಪೋ… ಸೊಪ್ಪೋ… ಎಫ್ ಎಸ್ ಎಲ್ ವರದಿಗೆ ಯಾಕೆ ಕಾಯಲಿಲ್ಲ? ಶಾಸಕ ಚೆನ್ನಬಸಪ್ಪ ಹೇಗೆ ಹೇಳಲು ಕಾರಣವೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ದೊರೆತ ಪೆಟ್ಟಿಗೆ ಕುರಿತು ಇಂದು ಶಾಸಕ ಚೆನ್ನಬಸಪ್ಪ ಮತ್ತೆ ಪ್ರಸ್ತಾಪಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ 60 ಶಾಲೆಗಳಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನಲೆಯಲ್ಲಿ  ಸರ್ಕಾರಕ್ಕೆ ಚಾಟಿ ಬೀಸಿದ್ದು ಹೀಗಿತ್ತು.

ಗೃಹ ಸಚಿವ ಡಾ.ಪರಮೇಶ್ವರ್ ಅವರು ಈ ಹಿಂದೆ ಉಗ್ರರು ಸಿಕ್ಕಾಗ ಅವರನ್ನೆಲ್ಲಾ ಅಮಾಯರು ಎಂದು ಬಿಂಬಿಸಿದ್ದರು. ಅದಾದ ನಂತರ ಶಿವಮೊಗ್ಗದಲ್ಲಿ ದೊರೆತ ವೈಟ್ ಪೌಡರ್ ನ್ನ ತಕ್ಷಣಕ್ಕೆ ಉಪ್ಪಿನ ಪುಡಿ ಎಂದು ಹೇಳಲಾಯಿತು. ಉಪ್ಪೋ… ಸೊಪ್ಪೋ…ಎಫ್ ಎಸ್ ಎಲ್ ವರದಿಗೆ ಯಾಕೆ ಕಾಯಲಿಲ್ಲ.  ಆತುರಕ್ಕೆ ಈ ಹೇಳಿಕೆ ಬೇಕಿತ್ತಾ? ಪರಿಶೀಲನೆ ನಡೆಸಿ ತದನಂತರ ಹೇಳಿಕೆ ಕೊಡಬಹುದಿತ್ತು ಎಂದು ಹೇಳಿದರು.

ಹಾಗಾಗಿ ಆರೋಪಿಗಳನ್ನ‌ ಹಿಡಿದರೂ ಸರ್ಕಾರ ಆರೋಪಿಗಳ ಬೆಂಬಲಕ್ಕೆ ನಿಲ್ಲುತ್ತೆ. ಹಾಗಾಗಿ ಆರೋಪಿಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆ ಬರುತ್ತೆ.‌ಆರೋಪಿಗಳ ಹೆಡೆ ಮುರಿಕಟ್ಟಬೇಕಿತ್ತು ಆ ಕೆಲಸ ಕಾಂಗ್ರೆಸ್ ಮೊದಲಿನಿಂದಲೂ ಮಾಡಲಿಲ್ಲ. ಸದನದಲ್ಲಿ ಈ ಬಗ್ಗೆ ಮಾತಬಾಡುವೆ ಎಂದರು.

ಇದನ್ನೂ ಓದಿ-https://suddilive.in/archives/4118

Related Articles

Leave a Reply

Your email address will not be published. Required fields are marked *

Back to top button