ಕ್ರೈಂ ನ್ಯೂಸ್
ಮರಕಡಿಯುವಾಗ ನಡೆದ ಘಟನೆ-ಓರ್ವ ಬೈಕ್ ಸವಾರ ಸಾವು

ಸುದ್ದಿಲೈವ್/ಶಿವಮೊಗ್ಗ

ಯಲವಟ್ಟಿ ಗ್ರಾಮದಲ್ಲಿ ಮರಕಡಿಯುವ ವೇಳೆ ಬಂದ ಬೈಕ್ ಮೇಲೆ ಬಿದ್ದ ಕಾರಣ ಬೈಕ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು ಓರ್ವ ಸಾವು ಕಂಡಿದ್ದಾರೆ.
ಯಲವಟ್ಟಿಯ ಖಾಸಗಿ ತೋಟದಲ್ಲಿದ್ದ ಮರ ಕಡಿಯಲು ಮುಂದಾಗಿದ್ದಾರೆ. ಮರ ಕಡಿಯುವ ವೇಳೆ ಮುಂಜಾಗೃತ ಕ್ರಮ ಕೈಗೊಳ್ಳದ ಪರಿಣಾಮ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ನಲ್ಲಿದ್ದ ಮೂವರಿಗೂ ಹೊಡೆತ ಬಿದ್ದಿದೆ.
ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಮೂವರಲ್ಲಿ ಓರ್ವ ಸಾವು ಕಂಡಿದ್ದಾನೆ. ಆತನನ್ನ ರಾಜೇಶ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ-https://suddilive.in/archives/467
