ಕ್ರೈಂ ನ್ಯೂಸ್
ಹಾನಿಗೊಳಗಾದ ಮನೆನೋಡಿ ಮಹಿಳೆ ಕಣ್ಣೀರು

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ 8ನೇ ಕ್ರಾಸ್ ನಲ್ಲಿ ವೆಂಕಟೇಶ ಅವರ ಮನೆ ಮೇಲೆ ಕಲ್ಲು ಪ್ರಕರಣದಲ್ಲಿ ಮನೆಗೆ ಬಂದ ಪತ್ನಿ ರಾಜೇಶ್ವರಿ ಮನೆಯ ಸ್ಥಿತಿ ನೋಡಿ ದಿಗಿಲುಪಟ್ಟಿದ್ದಾರೆ.
ಸ್ಥಿತಿನೋಡಿ ರಾಜೇಶ್ವರಿ ಕಣ್ಣೀರು ಹಾಕಿದ್ದಾರೆ. ಬೆವರಿಳಿಸಿ ದುಡಿದ ಹಣ ಹೋಮದಂತಾಗಿದೆ ಎಂದು ಗೋಳಿಟ್ಟಿದ್ದಾರೆ. ಸಾಲ ಮಾಡಿ ಕಟ್ಟಿದ ಮನೆಯನ್ನು ಈ ರೀತಿ ಮಾಡಿದ್ದಾರೆ. ಅನಾರೋಗ್ಯ ಪೀಡಿತ ಮಗಳನ್ನು ನೋಡಲು ಬೆಂಗಳೂರಿಗೆ ಹೋಗಿದ್ದ ರಾಜೇಶ್ವರಿ ಇಂದು ಮನೆಗೆ ಬಂದಿದ್ದಾರೆ.
ಮನೆಯಲ್ಲಿ ಗಂಡ ಮಾತ್ರ ಇದ್ರು ಬರೋದರೊಳಗೆ ಹೀಗೆ ಮಾಡಿದ್ದಾರೆ. ನಾವು ಬದುಕೋದಾದ್ರೂ ಹೇಗೆ? ಎಂದು ಮಾಧ್ಯಮದವರ ಬಳಿ ಅಳಲು ತೋಡಿಕೊಂಡಿದ್ದಾರೆ. ಇಙದು ಮನೆಯ ಮುಂದೆ ಬಿದ್ದ ಗಾಜಿನ ಚೂರನ್ನ ಪತಿ ವೆಂಕಟೇಶ್ ಗ್ಲಾಜು ಗುಡಿಸುವ ದೃಶ್ಯ ಲಭ್ಯವಾಗಿದೆ. ಹಾನಿಗೊಳಗಾದ ಮನೆಗಳ ಮಾಲೀಕರ ಹೇಳಿಕೆಗಳನ್ನ ಪಡೆಯಲಾಗುತ್ತಿದೆ.
ಇದನ್ನೂ ಓದಿ-https://suddilive.in/2023/10/03/451/
