ಕ್ರೈಂ ನ್ಯೂಸ್

ಮತ್ತೊಮ್ಮೆ ವೈರಲ್ ಆಗುತ್ತಿದೆ ವಿಡಿಯೋ-ವಿಡಿಯೋ ವೈರಲ್ ಮಾಡುವ ವಿರುದ್ಧ ಖಾಕಿ ಖಡಕ್ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಗಲಭೆ ನಡೆದು ಮನೆಗಳ ಮೇಲೆ ಕಲ್ಲುತೂರಲಾಗಿದೆ. ಕೆಲವರಿಗೆ ಗಾಯಗಳಾಗಿದ್ದು ಅವರೆಲ್ಲಾ ಡಿಸ್ಚಾರ್ಜ್ ಆಗಿದ್ದಾರೆ.  ಆದರೆ ಇದೇ ಘಟನೆಗೆ ಹೊಂದಾಣಿಕೆ ಮಾಡಿಕೊಂಡು ವಿಡಿಯೋ ವೊಂದು ವೈರಲ್ ಮಾಡಲಾಗುತ್ತಿದ್ದು ವೈರಲ್ ಮಾಡುವವರಿಗೆ ಖಾಕಿ ಪಡೆ ವಾರ್ನ್ ಮಾಡಿದೆ.

ರಕ್ತಸಿಕ್ತನಾಗಿರುವ ವ್ಯಕ್ತಿಯು ಸಹರ ಪೆಟ್ರೋಲ್ ಬಂಕ್ ಬಳಿ ಶಿವಮೊಗ್ಗದ ಇರ್ಫಾನ್, ಜುಲ್ಫಿ,  ಸಾತು ಅಟ್ಯಾಕ್ ಮಾಡಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದೆ. ಇದು ರಾಗಿಗುಡ್ಡದಲ್ಲಿ ನಡೆದ ದಾಳಿಯಲ್ಲಿ ರಕ್ತಸಿಕ್ತನಾಗಿದ್ದಾನೆ  ಎಂದು ವೈರಲ್ ಮಾಡಲಾಗುತ್ತಿದೆ. ಆದರೆ ರಾಗಿಗುಡ್ಡದಲ್ಲಿ ಯಾರಿಗೂ ಆಯುಧಗಳಿಂದ ದಾಳಿಯಾಗಿರುವ ಪ್ರಕರಣ ದಾಖಲಾಗಿಲ್ಲ.

ನಿನ್ನೆಯ ದಿವಸ ಶಿವಮೊಗ್ಗದಲ್ಲಿ ಹಿಂದೂ ಯುವಕನ ಮೇಲೆ ಮುಸ್ಲಿಂ ಮತಾಂದಿಗಳು ಮಾರ ಕಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವಿಡಿಯೋ ವೈರಲ್‌ ಆಗುತ್ತಿದೆ, ಇದು ೩ ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳೀ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಘಟನೆಯಾಗಿದ್ದು ಇದರ ಸಂಬಂದ ಐವರು ಆರೋಪಿಗಳನ್ನು ಬಂದಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟ ಮಾಡಿದ್ದಾರೆ.

ಆದರೆ  ಈ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ. ಈ ಹಿಂದೆಯೂ ವಿಡಿಯೋ ವೈರಲ್ ಮಾಡಲಾಗಿತ್ತು. ಆಗಲೂ ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಎಂದು ವೈರಲ್ ಮಾಡಲಾಗಿತ್ತು. ಆಗಲೂ ಎಸ್ಪಿಯವರು ಸ್ಪಷ್ಟನೆ ನೀಡಿ ಇದು ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈಗ ಮತ್ತೆ ವೈರಲ್ ಆಗುತ್ತಿರುವುದರಿಂದ ಯಾರಾದರೂ ಈ ವಿಡಿಯೋ ವೈರಲ್ ಮಾಡಿದರೆ ಎಫ್ಐಆರ್ ದಾಖಲಿಸಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.‌

ಇದನ್ನೂ ಓದಿ-https://suddilive.in/archives/792

Related Articles

Leave a Reply

Your email address will not be published. Required fields are marked *

Back to top button