ರಾಜಕೀಯ ಸುದ್ದಿಗಳು

ಡಿಕೆಶಿ ರಾಜೀನಾಮೆ ಪಡೆಯಿರಿ, ಇಲ್ಲದಿದ್ದರೆ ಕ್ಯಾಬಿನೆಟ್ ‌ನಿಂದ ವಜಾ ಮಾಡಿ-ಈಶ್ವರಪ್ಪ ಗುಡುಗು

ಸುದ್ದಿಲೈವ್/ಶಿವಮೊಗ್ಗ

ಕಲ್ಬುರ್ಗಿಯಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಬರೆದಿಟ್ಟು ಬಿಜೆಪಿ ಕಾರ್ಯಕರ್ತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರಿತಂತೆ ಮಾಜಿ ಡಿಸಿಎಂ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಅವರು ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿದ್ದಾಗ ಒಂದು ಚೀಟಿ ಸಿಕ್ತು. ನನ್ನ ಸಾವಿಗೆ ಈಶ್ವರಪ್ಪ ‌ಕಾರಣ ಅಂತಾ ಒಬ್ಬ ಆತ್ಮಹತ್ಯೆ ಮಾಡಿಕೊಂಡ. ನನ್ನ ವಿರುದ್ದ ಸಿದ್ದರಾಮಯ್ಯ, ಡಿಕೆಶಿ ದೊಡ್ಡ ಪ್ರತಿಭಟನೆ ಮಾಡಿದ್ರು. ನನ್ನ ರಾಜೀನಾಮೆ ಕೇಳಿದ್ರು. ನಾನು ನನ್ನ ಪಕ್ಷದ ವರಿಷ್ಠರ ಗಮನಕ್ಕೆ ತಂದು ರಾಜೀನಾಮೆ ಕೊಟ್ಟೆ. ಈಗ ನಿಮಗೆ ಮರೆತು ಹೋಯ್ತಾ. ನನ್ನದು ಆದ್ರೂ ಟೈಫ್ಡ್ ಕಾಫಿ. ಆದ್ರೆ ಬಿಜೆಪಿ ಕಾರ್ಯಕರ್ತ ಆಡಿಯೋ ಮಾಡಿ ಸಚಿವರ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊದಲು ಮುಖ್ಯಮಂತ್ರಿ ಸಚಿವ ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಪಡೆಯಬೇಕು ಎಂದು ಗುಡುಗಿದ್ದಾನೆ.

ರಾಜೀನಾಮೆ ಪಡೆಯದಿದ್ದರೆ ಇದು ಕೊಲೆ ಅಂತಾಗುತ್ತದೆ. ಸಚಿವರು ರಾಜೀನಾಮೆ ಕೊಡದಿದ್ದರೆ ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಗುಡುಗಿದರು.

ಡಿಕೆಶಿ ಜೈಲಿಗೆ ಹೋಗೋದು ಗ್ಯಾರೆಂಟಿ

ಡಿಕೆಶಿ ವಿರುದ್ದ ಮೂರು ತಿಂಗಳಲ್ಲಿ ವರದಿ ಕೊಡುವಂತೆ ಕೋರ್ಟ್ ಹೇಳಿದೆ. ಡಿಕೆಶಿ ಅವರದ್ದು ಈಗಾಗಲೇ 90 ರಷ್ಟು ತನಿಖೆ ಆಗಿದೆ. ನಾನು ಸತ್ಯ ಹರಿಶ್ಚಂದ್ರ ಅಂತಾ ತೋರಿಸುವ ಪ್ರಯತ್ನ ಮಾಡಿದ್ರು. ಡಿಕೆಶಿ ವಿರುದ್ದ ಬಂಡಲ್ ಗಟ್ಟಲೇ ದಾಖಲೆ ಸಿಕ್ಕಿದೆ. ಅದೆಷ್ಟು ಕೋಟಿ ಅಕ್ರಮ ಹಣ ಸಿಕ್ಕಿದೆಯೋ ಗೊತ್ತಿಲ್ಲ. ಈ ಕೇಸಲ್ಲಿ ಡಿಕೆಶಿ ಮತ್ತೊಮ್ಮೆ ಜೈಲಿಗೆ ಹೋಗುವುದರಲ್ಲಿ ಯಾವ ಅನುಮಾನ ಇಲ್ಲ ಎಂದರು.

ನಾನು ಜಡ್ಜಲ್ಲಾ ಸರಿ.. ಹಾಗಾದರೆ ಲಕ್ಷ್ಮೀ ಹೆಬ್ಬಾಳ್ಕರ್ ಜಡ್ಜಾ?

ಡಿಕೆಶಿ ಅದ್ಕೆ ಈಶ್ವರಪ್ಪ ಏನು ಜಡ್ಜಾ ಅಂತಂದ್ರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿಕೆಶಿ ಈ ಆರೋಪದಿಂದ ಮುಕ್ತವಾಗಿ ಹೊರಗೆ ಬರುತ್ತಾರೆ ಅಂದ್ರು. ಹಾಗಾದರೆ ಲಕ್ಷ್ಮಿ ಹೆಬ್ಬಾಳ್ಕರ್ ಜಡ್ಜಾ..?ಸಣ್ಣ ಸಣ್ಣ ಆರೋಪಗಳಿಗೆ ಸಚಿವರ ರಾಜೀನಾಮೆ ಪಡೆಯುತ್ತಾರೆ. ಆದರೆ ಡಿಕೆಶಿ ರಾಜೀನಾಮೆ ಏಕಿಲ್ಲ. ಮುಖ್ಯಮಂತ್ರಿ ಏಕೆ ಮೌನವಾಗಿದ್ದಾರೆ

ಡಿಕೆಶಿ ರಾಜೀನಾಮೆ ಪಡೆಯಿರಿ, ಇಲ್ಲದಿದ್ದರೆ ಕ್ಯಾಬಿನೆಟ್ ‌ನಿಂದ ವಜಾ ಮಾಡಿ. ಗೂಂಡಾನೋ, ಕೊಲೆಗಡುಕನೋ ನಾನು ಕ್ಯಾಬಿನೆಟ್ ನಲ್ಲಿ ಮುಂದುವರಿಸಿಕೊಂಡು‌ ಹೋಗುವವನೇ ಎಂಬ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ಟೀಕಿಸಿದರು.

ಪ್ರಕರಣ ಸಿಬಿಐಗೆ ವಹಿಸಿ

ಕಾಂಗ್ರೆಸ್ ಸರಕಾರದಲ್ಲಿ ಪ್ರಜಾಪ್ರಭುತ್ವದಲ್ಲಿ ಏನೇನು ನಡೆಯಬಾರದು ಅದೆಲ್ಲಾ ನಡೆಯುತ್ತಿದೆ. ಸಚಿವ ಭೈರತಿ ಸುರೇಶ್ ಆಪ್ತ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಕಾರ್ಡ್ ಮಾಡ್ತಿದ್ದರು. ಸಿಸಿಬಿಯವರು ಅವರನ್ನು ಬಂಧಿಸಿದ್ದಾರೆ. ಇದು ಯಾವಾಗನಿಂದ ನಡೆದುಕೊಂಡು ಬಂದಿದೆ. ಸಚಿವರಿಗೆ ಈ ವಿಷಯ ಗೊತ್ತಾ, ಇಲ್ವಾ? ಸಚಿವರಿಗೆ ಈ ವಿಷಯ ಗೊತ್ತಿದ್ದರೆ ಅವರನ್ನು ಬಂಧಿಸಬೇಕು. ಎಷ್ಟು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಪಂಚ ರಾಜ್ಯಗಳ ಚುನಾವಣೆಗೆ ಏನಾದರೂ ಇದು ರೆಡಿ ಆಗ್ತಿತಾ? ಲೋಕಸಭಾ ಚುನಾವಣೆಗೆ ಏನಾದರೂ ನಡೆಯುತಿತ್ತಾ?ಹಿಂದೆ ನಡೆದ ಯಾವುದಾದರೂ ಚುನಾವಣೆಗೆ ಬಳಕೆ ಆಗಿತ್ತಾ?ಈ ಬಗ್ಗೆ ಸಿಎಂ ಹೇಳಿಕೆ ಕೊಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದು ರಾಜ್ಯಕ್ಕೆ ಕಳಂಕವಾದ ಪ್ರಕರಣ

ಕ್ಯಾಬಿನೆಟ್ ಬಗ್ಗೆ ಒಬ್ಬೊಬ್ವರು ಒಂದೊಂದು ಹೇಳಿಕೆ

ಕ್ಯಾಬಿನೆಟ್ ಬಗ್ಗೆ ಒಬ್ಬೊಬ್ಬ ಒಂದೊಂದು ಹೇಳಿಕೆ ಒಡುತ್ತಿದ್ದಾರೆ. ಎರಡೂವರೆ ವರ್ಷದ ನಂತರ ಹಳಬರು ತೆಗೆದು ಹೊಸಬರು ಹಾಕ್ತೀವಿ ಅಂತಾರೆ. ಅಶೋಕ್ ಪಟ್ಟಣ್ ಕ್ಯಾಬಿನೆಟ್ ಬಗ್ಗೆ ಮಾತನಾಡ್ತಾರೆ. ಇದಕ್ಕೆ ಎಂ.ಬಿ.ಪಾಟೀಲ್ ಅಶೋಕ್ ಪಟ್ಟಣ್ ಯಾರು ಹೇಳೋದಕ್ಕೆ ಕೇಂದ್ರದ ನಾಯಕರು ಹೇಳ್ತಾರೆ ಅಂತಾರೆ. ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ಕೊಡೋದು ಒಳ್ಳೆಯದಲ್ಲ. ಮುಖ್ಯಮಂತ್ರಿಗಳು ಗಮನ ಹರಿಸಲಿ ಈ ರೀತಿ ಸಚಿವರು ಹೇಳಿಕೆ ಕೊಡೋದು ನಿಲ್ಲಿಸಲಿ

ದಸರಾಕ್ಕೆ ಹಣವಿಲ್ಲದಿದ್ದರೆ ಹೇಳಿ ನಾವು ಚಂದಾ ಎತ್ತಿ ಆಚರಿಸುತ್ತೇವೆ

ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ವೈಭವವಾಗಿ ನಡೆಯುತ್ತದೆ. ಆದರೆ ದಸರಾ ಆಚರಣೆಗೆ ಕೇವಲ 20 ಲಕ್ಷ ಅಷ್ಟೇ ಕೊಟ್ಟಿದೆ. ಏಕೆ ಸರಕಾರಕ್ಕೆ ಬಡತನ ಇದೆಯಾ? ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೀವು ಹಣ ಕೊಡದಿದ್ದರೆ ಹೇಳಿ ನಾವು ಸಾರ್ವಜನಿಕರ ಬಳಿ ಚಂದಾ ಎತ್ತಿ ದಸರಾ ಆಚರಣೆ ಮಾಡ್ತೀವಿ. ನಿರುದ್ಯೋಗಿ ಯುವಕರಿಗೆ ಹಣ ಕೊಟ್ಟೇ ಇಲ್ಲ. ಗೃಹಲಕ್ಷ್ಮಿ ಯೋಜನೆ ಹಣ ಕೊಟ್ಟಿಲ್ಲ. ಗ್ರಾಮೀಣ ಭಾಗದಲ್ಲಿ ಸರಕಾರಿ‌ ಬಸ್ ಗಳೇ ಇಲ್ಲ. ಸರಕಾರ ಸಂಪೂರ್ಣ ದಿವಾಳಿ ಆಯ್ತು. ನಿಮ್ಮ ಐದು ಯೋಜನೆಗಳು ದಿವಾಳಿ ಆಗಿ ಹೋಯ್ತು.

ಎಂ.ಬಿ ಪಾಟೀಲ್ ಕ್ಷಮೆ ಕೇಳವೇಕು

ಈಶ್ವರಪ್ಪ ಕಾಂಗ್ರೆಸ್ ಬರುತ್ತಾರೆ ಅಂತಾ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನನ್ನನ್ನು ಬೆಳೆಸಿದ್ದು ಲಕ್ಷಾಂತರ ಜನ ಕಾರ್ಯಕರ್ತರು. ಒಂದು ಕಡೆ ಹಿಂದುತ್ವ ಬೆಳೆಯಬೇಕು, ಒಂದು ಕಡೆ ದೇಶ ಬೆಳೆಯಬೇಕು. ಇದಕ್ಕಾಗಿ ಲಕ್ಷಾಂತರ ಜನರು ತಪ್ಪಸ್ಸು ಮಾಡ್ತಿದ್ದಾರೆ. ಕಾಂಗ್ರೆಸ್ ಗೆ ಹೋಗುವ ಬಗ್ಗೆ ನನಗೆ ಕನಸು ಸಹ ಬೀಳುವುದಿಲ್ಲ. ನಾನೇನಾದರೂ ಕಾಂಗ್ರೆಸ್ ಹೋಗ್ತೀನಿ ಅಂದ್ರೆ ನನ್ನ ತಾಯಿಗೆ  ದ್ರೋಹ ಮಾಡಿದಂತೆ

ಪಕ್ಷ ನನಗೆ ಶಿಸ್ತು‌ ಕಳುಹಿಸಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂದಾಗ ತಕ್ಷಣ ಕೊಟ್ಟೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ತಗೋಬೇಕು ಅಂದಾಗ ಪಕ್ಷದ ಸೂಚನೆಗೆ ಗೌರವ ಕೊಟ್ಟೆ. ಎಂ.ಬಿ.ಪಾಟೀಲ್ ಇನ್ನೊಂದು ಸರಿ ಈ ರೀತಿ ಹೇಳಿಕೆ ಕೊಟ್ಟರೆ ನಾನು‌ ಬೇರೆ ಭಾಷೆ ಉಪಯೋಗಿಸಬೇಕಾಗುತ್ತದೆ. ತಕ್ಷಣ ಈ‌ ಬಗ್ಗೆ ಕ್ಷಮೆ ಕೇಳಬೇಕು ಎಂದು ಗುಡುಗಿದರು.

ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ

ಬೆಳಗಾವಿಯವರು‌ ಯಾರು ಶಕ್ತಿವಂತರೋ ಏನೋ ಗೊತ್ತಿಲ್ಲ. ಜನ ಅಧಿಕಾರ ಮಾಡಿ ಅಂತಾ ಅಧಿಕಾರ ಕೊಟ್ಟಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿ, ಯಾರು ಶಕ್ತಿವಂತರೋ, ಶಕ್ತಿವಂತರು ಅಲ್ವೋ ಅನ್ನುವುದನ್ನು ಆಮೇಲೆ ಸಾಬೀತುಪಡಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/1640

Related Articles

Leave a Reply

Your email address will not be published. Required fields are marked *

Back to top button