ಸ್ಥಳೀಯ ಸುದ್ದಿಗಳು

ಹಬ್ಬದ ಹೋರಿ ಮಿಸ್ಸಿಂಗ್-ಸಿಕ್ಕುದ್ರೆ ದಯಮಾಡಿ ತಿಳಿಸಿ

ಸುದ್ದಿಲೈವ್/ಶಿವಮೊಗ್ಗ

ಈ ಸುದ್ದಿ ಹೋರಿ ಪ್ರಿಯರಿಗೆ ನೋವುತರುವ ವಿಷಯವಾಗಿದೆ. ಹೋರಿಹಬ್ಬದಲ್ಲಿ ಬಿಟ್ಟ ಹೋರಿಯೊಂದು ಕಾಣೆಯಾಗಿದೆ. ಇದು ಮಾಲೀಕರಿಗೆ ಅತೀವ ದುಖತಂದಿದೆ. ಹೋರಿಗಾಗಿ ಮಾಲೀಕರ‌ ಹುಡುಕಾಟ ತೀವ್ರಗೊಂಡಿದೆ.

ಶಿಕಾರಿಪುರ ತಾಲೂಕಿನ ನರಸಾಪುರದಲ್ಲಿ ಯಳಗೇರಿ ಚಿನ್ಮಯ್ ಭಾಗಿಯಾಗಿದ್ದ, ಹೋರಿಯನ್ನ ಬಿಡಲು ಮಾಲೀಕ ಶರತ್ ಗೇಟ್ ಬಳಿ ನಿಂತಿದ್ದಾಗ ಓಡಿ ಹೋದ ಹೋರಿ ಯಾರ ಕೈಗೂ ಸೇರದೆ ಕಾಣೆಯಾಗಿದೆ. ಇದನ್ನ ಶರತ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮಲೆನಾಡ ಗೂಳಿ, ನೆಲಗವಾಡಿ ಕೇಸರಿ, ಹರಗುವಳ್ಳಿ ಹುಲಿ, ಅಂಬಾರಗೊಪ್ಪದ ಮಾಲಾಶ್ರೀ, NTC ಸಾಮ್ರಾಜ್ಯ, ಹೀಗೆ ಹೋರಿ ಹಬ್ಬದ ಹಸುಗಳಿಗೆ ನಾನಾ ಹೆಸರು ಕರೆಯಲಾಗುತ್ತದೆ. ಹೆಸರುಗಳು ರೋಚಕತೆಯನ್ನ ತೋರುವಂತೆ ಹೆಸರಿಡಲಾಗುತ್ತದೆ. ಯಳಗೇರಿಯ ಚಿನ್ಮಯ್ ಎಂಬ ಹೋರಿ ಹಬ್ಬದಿಂದಲೇ ನಾಪತ್ತೆಯಾಗಿದೆ.

ಮೂರು ವರ್ಷದಿಂದ ಹಬ್ಬದಲ್ಲಿ ಈ‌ ಚಿನ್ಮಯ್ ಭಾಗಿಯಾಗಿದ್ದಾನೆ. 23 ಹಬ್ಬದಲ್ಲಿ ಪಾಲ್ಗೊಂಡು‌ ಹಲವು ಹಬ್ಬವನ್ನ ಗೆದ್ದುಕೊಟ್ಟಿದ್ದಾನೆ ಎಂದು ಮಾಲೀಕ ಶರತ್ ಕಣ್ಣೀರು ಹಾಕಿದ್ದಾನೆ. ಡಿ.7 ರಂದು ಶಿಕಾರಿಪುರದ ನರಸಪುರ ಹಬ್ವದಿಂದ ನಾಪತ್ತೆಯಾಗಿದೆ.

ಮಾಮೂಲಿಯಾಗಿ ಶರತ್ ನ ಸಹೋದರ ಗೇಟ್ ಬಳಿ ನಿಂತು‌ಹೋರಿ ಬಿಟ್ಟರೆ ಶರತ್ ಕೊನೆಯಲ್ಲಿ ನಿಂತು ಹಿಡಿಯುತ್ತಿದ್ದರು. ಮೊನ್ನೆ ಶರತ್ ಸಹೋದರನಿಗೆ ಗಾಯವಾಗಿದ್ದರಿಂದ ಗೇಟ್ ಬಳಿ ನಿಂತಿದ್ದ ಶರತ್ ಹೋರಿ ಬಿಟ್ಟಿದ್ದಾರೆ. ಬಿಟ್ಟ ಹೋರಿ ಇದುವರೆಗೂ ವಾಪಾಸ್ ಆಗಿಲ್ಲ.

ಹಬ್ಬದಲ್ಲಿ ಹೋರಿ ತಿವಿಯೋದು, ಗಾಯವಾಗೋದು ಹೋರಿ ಓಡಿಹೋಗೋದು ಮಾಮೂಲಿ ಆದರೆ ಹೋರಿ ಪ್ರಿಯರಿಗೆ ಇದು ಸಂಕಟ ತರುತ್ತದೆ. ಶರತ್ ಈ ಹೋರಿಯನ್ನ ತಮುಳುನಾಡಿನಿಂದ ತಂದಿದ್ದರು. ಹಬ್ಬಕ್ಕಾಗೊಯೇ ಬೆಳೆಸಿದ್ದಾರೆ. ಯಾರಿಗಾದರೂ ಪತ್ತೆಯಾದರೆ ದಯಮಾಡಿ 7022089365 ಅಥವಾ 6360920763 ಗೆ ದಯಮಾಡಿ ಸಂಪರ್ಕಿಸಿ

ಇದನ್ನೂ ಓದಿ-https://suddilive.in/archives/4636

Related Articles

Leave a Reply

Your email address will not be published. Required fields are marked *

Back to top button