ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಳುವು ಪ್ರಕರಣ 17 ಕ್ಕೆ ಏರಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲವೆಂದು ಸುದ್ದಿಲೈವ್ ಕಳೆದ 6 ತಿಂಗಳಿಂದ ಪ್ರಕಟಿಸುತ್ತಿದ್ದರೂ ಯಾವುದೇ ಸುರಕ್ಷಿತ ಕ್ರಮಗಳು ಜರುಗದ ಕಾರಣ ಪ್ರಯಾಣಿಕರ ಗೋಳು ಮುಂದು ವರೆದಿದೆ.
ಇಲ್ಲಿನ ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣ ಕ್ರಮ ಜರುಗಿಸಬೇಕಿತ್ತು. ಯಾವ ಕ್ರಮವೂ ಇಲ್ಲದ ಕಾರಣ ನಿಲ್ದಾಣದಲ್ಲಿ ಕಳುವಾಗುವ ಪ್ರಕರಣಗಳ ಹೆಚ್ಚುತ್ತಿವೆ. ಈಗ ಕಳುವಿನ ಪ್ರಕರಣ 17ಕ್ಕೆ ಏರಿಕೆಯಾಗಿದೆ. 2023 ನೇ ಸಾಲಿನಲ್ಲಿ ಕಳುವಿನ ಸಂಖ್ಯೆ ಸರಿಸುಮಾರು 16 ಪ್ರಕರಣ ದಾಖಲಾಗಿವೆ.
16 ಪ್ರಕರಣದಲ್ಲಿ ಇದುವರೆಗೂ ಬೆರಳೆಣಿಕೆಯಷ್ಟು ಪತ್ತೆಯಾಗಿವೆ. ಬಾಕಿ ಎಲ್ಲವೂ ಸಿಸಿ ಟಿವಿಯ ಕೊರತೆಯಿಂದಾಗಿ ಪತ್ತೆಯಾಗಿಲ್ಲ. ಇದರಿಂದ ಪ್ರಯಾಣಿಕರ ಗೋಳು ಮುಂದು ವರೆದಿದೆ. ಗಮನ ಹರಿಸಬೇಕಾದ ಅಧಿಕಾರಿಗಳು, ಇವರಿಗೆ ಎಚ್ಚರಿಕೆ ನೀಡುವ ರಾಜಕಾರಣಿಗಳು ಮಾತನಾಡದೆ ಇರುವುದು ಸಹ ಈ ಎಲ್ಲಾ ಪ್ರಕರಣಕ್ಕೆ ಕಾರಣವಾಗಿದೆ.
ಪ್ರಾಣಿಗಳ ಟ್ರೋಫಿ ಇಟ್ಟುಕೊಳ್ಳುವವರ, ಗ್ರಾಮಾಂತರ ಭಾಗದಲ್ಲಿ ಅರಣ್ಯ ಇಲಾಖೆಗಳ ಜೊತೆ ಗುದ್ದಾಡುವವರ ಕಣ್ಣಿಗೂ ಈ ಕೆಎಸ್ ಆರ್ ಟಿ ಸಿ ಬೀಳದಿರುವುದು ವಿಪರ್ಯಾಸವಾಗಿದೆ. ದಕ್ಷಿಣ ಕನ್ನಡದ ಮೂಡಬಿದರೆಯಿಂದ ಬಂದ ಮಹಿಳೆಯೊಬ್ಬರು ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಚಿತ್ರದುರ್ಗ ತೆರಳಿದ್ದರು.ದುರ್ಗದಲ್ಲಿರುವ ತಂಗಿ ಮನೆವತಲುಪಿದ ವೇಳೆ ತಮ್ಮ ವ್ಯಾನಿಟಿ ಬ್ಯಾಗ್ ನೋಡಿಕೊಂಡಾಗ ಬ್ಯಾಗ್ ನಲ್ಲಿದ್ದ 2,92,000 ರೂ ಮೌಲ್ಯದ 97 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಮೂಡಬಿದರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿರುವ ಸುರೇಖಾ ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದಾರೆ.
ಇದನ್ನೂ ಓದಿ-https://suddilive.in/archives/2481
