ಸ್ಥಳೀಯ ಸುದ್ದಿಗಳು

8 ಕ್ಕೆ ಏರಿದ ಕೊರೋನ ಸೋಂಕಿತರ ಸಂಖ್ಯೆ

ಸುದ್ದಿಲೈವ್/ಶಿವಮೊಗ್ಗ/25/12/2023

ಕೊರೋನದ ಆರ್ಭಟ ಮುಂದು ವರೆದಿದೆ. ಇಂದು  ಒಬ್ವರಲ್ಲಿ ಸೋಂಕು ಪತ್ತೆಯಾಗಿದೆ. ಓರ್ವರು ಭದ್ರಾವತಿಯ ತಾಲೂಕಿಗೆ ಸೇರಿವರು  ಎಂದು ಹೆಲ್ತ್ ಬುಲಿಟಿನ್ ತಿಳಿಸಿದೆ.

ಇವತ್ತು 103 ಜನರಿಗೆ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. 103 ಜನರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.

ನಿನ್ನೆ 7 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 8 ಕ್ಕೆ ಏರಿದೆ.   ಸೋಂಕು ಪತ್ತೆಯಾದ 6 ಜನರಿಗೆ ಹೋಂ‌ ಐಸೋಲೇಷನ್ ಗೆ ಒಳಪಡಲು ಸೂಚಿಸಲಾಗಿದೆ. ಉಳಿದಿಬ್ಬರಿಗೆ ನಿಗದಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು  ಇಂದು ಬಿಡುಗಡೆಯಾದ ಕೊರೋನ ಹೆಲ್ತ್ ಬುಲಿಟಿನ್ ಪ್ರಕಟಪಡಿಸಿದೆ.‌

ಇದನ್ನೂ ಓದಿ-https://suddilive.in/archives/5460

Related Articles

Leave a Reply

Your email address will not be published. Required fields are marked *

Back to top button