ಸ್ಥಳೀಯ ಸುದ್ದಿಗಳು

ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಜೂಜಾಟ-ಮೂವರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಜಾತ್ರಾ ಮಹೋತ್ಸವದಲ್ಲಿ ಜೂಜಾಟದ ಕಳಂಕ ಕೇಳಿಬಂದಿದೆ. ಬಾಲ್ ಬಾಕ್ಸ್ ಆಟದ ಜೂಜಾಟ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಸೂಡಿ ಗ್ರಾಮದ ಜಾತ್ರೆಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹೀರವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಬಾಲ್ ಬಾಕ್ಸ್ ಆಟ ನಡೆಸುತ್ತಿದ್ದ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಇವರನ್ನ ಬಂಧಿಸಲಾಗಿಲ್ಲ.

ಬಾಲ್ ಬಾಕ್ಸ್ ನ ಆಟದಲ್ಲಿ 03 ಬಣ್ಣದ ಗುಂಡಿಗಳಿದ್ದು ಕೆಂಪು ಹಳದಿ ಗುಂಡಿಗಳಿಗೆ ಬಾಲ್ ಬಿದ್ದಲ್ಲಿ 50 ರೂ ಗೆ 50 ರೂ ಗಳು, ಬಿಳಿ ಬಣ್ಣದ ಗುಂಡಿಗೆ ಬಾಲ್ ಬಿದ್ದಲ್ಲಿ 50 ರೂ ಗೆ 150 ರೂ ಹಣ ನೀಡುತ್ತೇವೆ ಎಂದು ಸಾರ್ವಜನಿಕರನ್ನು ಕೂಗಿ ಕರೆಯಲಾಗುತ್ತಿತ್ತು.

ಇದರಲ್ಲಿ ಒಬ್ಬ ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದನು. ಇನ್ಬೊಬ್ಬರು ಬಾಲನ್ನು ಬಾಕ್ಸ್ ಗೆ ಹಾಕಲು ಸಾರ್ವಜನಿಕರಿಗೆ ಬಾಲನ್ನು ನೀಡಿ ಜೂಜಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕ್ರೈಂ ಪೊಲೀಸರು ಕಲ್ಲನ್ ಗೌಡರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಕ್ರಮ‌ ಜೂಜಾಟ ನಡೆಸುತ್ತಿರುವುದು ತಿಳಿದು ಬಂದಿದೆ.

ಅಕ್ರಮ ಜೂಜಾಟದ ವಿರುದ್ಧ ಸುಮೋಟೋ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/10735

Related Articles

Leave a Reply

Your email address will not be published. Required fields are marked *

Back to top button