ಶೀಘ್ರದಲ್ಲಿಯೇ ತಿಳಿಯಲಿದೆ ಪೆಟ್ಟಿಗೆಯ ರಹಸ್ಯ

ಸುದ್ದಿಲೈವ್/ಶಿವಮೊಗ್ಗ

ಆತಂಕ ಹೆಚ್ಚಿಸಿದ್ದ ಪೆಟ್ಟಿಗೆಯಲ್ಲಿ ಏನಿರ ಬಹುದು ಎಂದು ತಿಳಿಯಲು ಬೆಂಗಳೂರಿನಿಂದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ಮಿನಿ ಬಸ್ ನಲ್ಲಿ ಬಂದ ಬಾಂಬ್ ಸ್ಕ್ವಾಡ್ ನ 6 ಜನ ತಂಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ರೈಲ್ವೆ ಆರೋಗ್ಯ ಕೇಂದ್ರದ ಕಾಂಪೌಂಡ್ ಬಳಿ ಪೆಟ್ಟಿಗೆಗೆ ಮರಳಿನ ಚೀಲ ತುಂಬಲಾಗಿತ್ತು. ಒಂದು ಪೆಟ್ಟಿಗೆಗೆ ಮೂರು ಬೀಗ ಹಾಕಲಾಗಿದೆ ಒಟ್ಟು ಆರು ಬೀಗಳನ್ನ ತೆಗೆಯಲು ಬಾಂಬ್ ಪತ್ತೆ ಮತ್ತು ಸಿಷ್ಕ್ರಿಯ ದಳ ಮುಂದಾಗಿದೆ. ಸ್ಥಳದಲ್ಲಿಯೇ ಪೆಟ್ಟಿಗೆಯ ಬಾಗಿಲು ತೆರೆಯಲಿದೆಯಾ ಎಂಬುದು ಸಹ ಸಧ್ಯದಲ್ಲಿಯೇ ತಿಳಿದು ಬರಲಿದೆ.
ಪೆಟ್ಟಿಗೆಯಲ್ಲಿ ಅಪಾಯಕಾರಿ ವಸ್ತು ಪತ್ತೆಯಾಗಿದೆಯಾ ಎಂಬ ಕುತೂಹಲಕ್ಕೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ಓರ್ವ ಅಧಿಕಾರಿ ಉಪಕರಣ ಸಮೇತ ಪೆಟ್ಟಿಗೆ ಇರುವ ಜಾಗದ ಬಳಿ ತೆರಳಿದ್ದಾರೆ.
ಎರಡು ದಿನಗಳ ಹಿಂದೆನೆ ಅಂದರೆ ನ.03 ಮಧ್ಯಾಹ್ನ ಈ ಪೆಟ್ಟಿಗೆಇದೇ ಜಾಗದಲ್ಲಿತ್ತು. ಇಂದು ಬೆಳಿಗ್ಗೆ ಆಟೋ ಚಾಲಕ ಸಮೀರ್ ಕಂಡು ಪೆಟ್ಟಿಗೆ ಬಗ್ಗೆ ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅಲರ್ಟ್ ಆಗಿದ್ದಾರೆ. ರೈಲ್ವೆ ರಕ್ಷಣ ದಳ ಮತ್ತು ರೈಲ್ವೆ ಪೊಲೀಸರು ಇದ್ದರೂ ಹೊರಗಡೆ ಅವರ ವ್ಯಾಪ್ತಿಬರೊಲ್ಲವೆಂಬುದು ಅವರ ಅಂಬೋಣ.
ಇದನ್ನೂ ಓದಿ-https://suddilive.in/archives/2516
