ಸ್ಥಳೀಯ ಸುದ್ದಿಗಳು

ಶನಿವಾರ ಬಂತು ಎಂದರೆ ಎಪಿಎಂಸಿ ಮಾರುಕಟ್ಟೆ ಕಸದ ತೊಟ್ಟಿ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಸ್ವಚ್ಛತೆ ಕುರಿತು ಜಾಗೃತೆ ಇದ್ದರೂ ಕೆಲವೊಂದು ಕಡೆ ಜಾಣ್ಮೆಯ ಸ್ವಚ್ಛತೆಗಳು ಕಂಡು ಬರುತ್ತವೆ. ದಿನಾ ಸಾಯುವವರಿಗೆ ಅಳುವವರು ಯಾರು ಎಂಬ ನಾಣ್ನುಡಿಯಂತೆ ಎಪಿಎಂಸಿ ತರಕಾರಿ ಮಾರುಕಟ್ಟೆ ನಿರ್ಮಾಣವಾಗಿದೆ.

ಎಪಿಎಂಸಿ ತರಕಾರಿ ಮಾರುಕಟ್ಟೆ ವಾರದ 6 ದಿನಗಳು ಬೆಳಿಗ್ಗೆ ಹೊತ್ತು ಜನಜಂಗುಳಿಯಿಂದ ಕೂಡಿರುತ್ತವೆ. ಶನಿವಾರ ರಜೆ ಇರುತ್ತದೆ. ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಸ್ವಚ್ಛ ಮಾಡಲೆಂದೇ ಟೆಂಡರ್ ಸಹ ನೀಡಲಾಗಿರುತ್ತದೆ. ಆದರೆ ಶನಿವಾರವೇ ಸ್ವಚ್ಛ ಮಾಡುವ‌ಗುತ್ತಿಗೆದಾರನಿಂದ ಸ್ವಚ್ಚ ನಡೆಯುತ್ತಿಲ್ಲವೆಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತದೆ.

ತರಕಾರಿ ಮಾರುಕಟ್ಟೆಯನ್ನ ನೀರಿನಲ್ಲಿ ತೊಳೆದು ಸ್ವಚ್ಛ ಮಾಡುವ ಗುತ್ತಿಗೆಯನ್ನ ಟೆಂಡರ್ ದಾರ ಹಿಡಿದಿರುತ್ತಾನೆ. ಆದರೆ ಶನಿವಾರವೇ ಸ್ವಚ್ಛತಾ ಸಿಬ್ಬಂದಿಗಳು ರಜೆ ಮಾಡಿರುತ್ತಾರೆ. ಇದರಿಂದ ಶನಿವಾರ ಬಹುತೇಕ ಅಂಗಡಿ ಮುಂಭಾಗದಲ್ಲಿ ತರಕಾರಿಯ ಕಸದ ರಾಶಿಗಳು ಕಂಡು ಬರುತ್ತವೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಎಪಿಎಂಸಿ ಕಾರ್ಯದರ್ಶಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿನ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು ಎಂಬುದು ಸಾರ್ವಜನಿಕರ ಮತ್ತು ಅಂಗಡಿ ಮಾಲೀಕರ ಆಗ್ರಹವಾಗಿದೆ.

ಇದನ್ನೂ ಓದಿ-https://suddilive.in/archives/4548

Related Articles

Leave a Reply

Your email address will not be published. Required fields are marked *

Back to top button