ಕ್ರೈಂ ನ್ಯೂಸ್

ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಿಮ್ಸ್ ಕಾಲೇಜಿನ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌ ಆತ್ಮಹತ್ಯೆಗೆ ಹಲವು ಗುಮಾನಿಗಳು ಕೇಳಿಬರುತ್ತಿದೆ.

ಸಿಮ್ಸ್ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವಿದ್ಯಾರ್ಥಿ ನಿನ್ನೆ ರಾತ್ರಿ ಕೊನೆ ಉಸಿರು ಎಳೆದಿದ್ದಾನೆ.

ಈತನ ಸಾವಿನ ಬಗ್ಗೆ ಹಲವು ಗುಮಾನಿಗಳು ಕೇಳಿ ಬಂದರೂ ಮೃತ ವಿದ್ಯಾರ್ಥಿಯ ಕುಟುಂಬ ಯಾವ ರೀತಿ ದೂರು ದಾಖಲಿಸಲಿದೆ ಕಾದು ನೋಡಬೇಕಿದೆ.

ಮೂಲತಃ ಮಳವಳ್ಳಿಯ ನಿವಾಸಿಯಾಗಿರುವ ಯುವಕ ಶಿವಮೊಗ್ಗದ ಸಿಮ್ಸ್ ಹಾಸ್ಟೆಲ್ ನಲ್ಲಿಯೇ ಉಳಿದುಕೊಂಡಿದ್ದನು.

ಇದನ್ನೂ ಓದಿ-https://suddilive.in/archives/11720

Related Articles

Leave a Reply

Your email address will not be published. Required fields are marked *

Back to top button