ಕ್ರೈಂ ನ್ಯೂಸ್

ಶಕ್ತಿ ಯೋಜನೆಗೆ ಬೈದು KSRTC ಬಸ್ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿ ಪಡಿಸುದ್ರಾ ಖಾಸಗಿ ಬಸ್ ನ ಮಾಲೀಕರು?

ಸುದ್ದಿಲೈವ್/ತೀರ್ಥಹಳ್ಳಿ

ಶಿವಮೊಗ್ಗ-ತೀರ್ಥಹಳ್ಳಿ KSRTC ಬಸ್ ಚಾಲಕನ ಮೇಲೆ ಖಾಸಗಿ ಬಸ್ ನ ಮಾಲೀಕ ದರ್ವರ್ತನೆ ನಡೆಸಿ ದರ್ಪ ತೋರಿದ್ದಾನೆ. ಶಕ್ತಿ ಯೋಜನೆಯನ್ನ ಬೈದುಕೊಂಡು KSRTC ಬಸ್ ನ ಕೀ ಕಿತ್ತುಕೊಂಡು ಘಟನೆ ವರದಿಯಾಗಿದೆ.

ಕುಮಾರ್ ಎಂಬುವರು ಕೆಎಸ್‌ಆರ್ ಟಿಸಿ ಶಿವಮೊಗ್ಗ ಡಿಪೋದಲ್ಲಿ ಬಸ್ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಡಿ.07 ರಂದು  ಶಿವಮೊಗ್ಗ, ಘಟಕದಿಂದ ಕೆಎ-17-ಎಫ್-1883 ಕೆಎಸ್‌ಆರ್ ಟಿಸಿ ಬಸ್ ಗೆ ನಿರ್ವಾಹಕ ನಾಗಿ ಶಿವಮೊಗ್ಗ ದಿಂದ ತೀರ್ಥಹಳ್ಳಿ ಮಾರ್ಗವಾಗಿ ತಾಲೂಕಿನ ಕೊರನಕೋಟೆಯಲ್ಲಿ ತಂಗಿದ್ದರು.

ಡಿ.8 ರಂದು ಬೆಳಿಗೆ ಕೊರನಕೋಟೆಯಿಂದ ಬಸ್ ನ ಚಾಲಕರಾದ ಪ್ರದೀಪ ರವರು ಬಸ್ ನ್ನ ಬೆಳಿಗ್ಗೆ 9-10 ಕ್ಕೆ ಚಾಲನೆ ಮಾಡಿಕೊಂಡು ತೀರ್ಥಹಳ್ಳಿಯ ಮುಖ್ಯ  ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ತೀರ್ಥಹಳ್ಳಿ ಯ ಬಸ್ ನಿಲ್ದಾಣದಲ್ಲಿ ಶೋಭಿತ್ ಎಂಬ ಹೆಸರಿನ ಬಸ್ಸಿನ ಮಾಲೀಕರಾದ ಮಧು ಎಂಬುವವರು ksrtc ಬಸ್ ನ್ನ ಅಡ್ಡಕಟ್ಟಿದ್ದಾರೆ.

ಕೆಎಸ್‌ಆರ್ಟಿಸಿ ಬಸ್ ಗೆ ಅಡ್ಡಲಾಗಿ ಬಸ್ ನ್ನ ನಿಲ್ಲಿಸಿ  ಡ್ರೈವ‌ರ್ ನ್ನು ಕೆಳಗೆ ಇಳಿಸಿ ಬಸ್ ನ ಕೀಯನ್ನು ತೆಗೆದುಕೊಂಡು ಕುಮಾರ್ ಮತ್ತು ಪ್ರದೀಪ್  ಗೆ ಅವಾಚ್ಯವಾಗಿ ಬೈದು ಶಕ್ತಿ ಯೋಜನೆ ಉಪಯೋಗಿಸಿಕೊಂಡು ನಮ್ಮ ಬಸ್ ಗೆ ನಷ್ಟ ಉಂಟು ಮಾಡುತ್ತಿದ್ದೀರಾ ಎಂದು ನಿಂದಿಸಿದ್ದಾರೆ. ಹಾಗೂ ಕಾಲುಗಳಿಂದ ಕುಮಾರ್ ಗೆ ಹಲ್ಲೆ ನಡೆಸಿದ್ದಾರೆ.  ಆಗ ಬಸ್ ನ ಡ್ರೈವರ್ ರವರು ಬಂದು ಈ ಗಲಾಟೆಯನ್ನು ಬಿಡಿಸಿರುತ್ತಾರೆ.

ಈ ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಬಸ್ ಚಾಲಕನ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನ‌ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4544

Related Articles

Leave a Reply

Your email address will not be published. Required fields are marked *

Back to top button