ಭೂಮಿ ಪೂಜೆಯ ವೇಳೆ ಶಾಸಕ ಬೇಳೂರು ಅವರು ಕಾಯಕ್ಕೆ ಆಗೊಲ್ವಾ ಅಂತ ಹೇಳಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಕಿದ್ವಾಯಿ ಆಸ್ಪತ್ರೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ.
ಶಿವಮೊಗ್ಗದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಶಂಕು ಸ್ಥಾಪನೆ ವೇಳೆ ಶಾಸಕ ಬೇಳೂರು ಮತ್ತು ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ತಂಡ ಕೊಂಚ ತಡವಾಗಿ ಬಂದಿದ್ದಾರೆ. ಇವರು ಬರುವ ವೇಳೆ ಸಚಿವ ಮಧು ಬಂಗಾರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭೂಮಿ ಪೂಜೆಯನ್ನಆರಂಭಿಸಿದ್ದರು.
ಈ ವೇಳೆ ಅಲ್ಲಿಗೆ ಬಂದ ಶಾಸಕ ಬೇಳೂರು ಗೋಪಾಲಕೃಷ್ಣ, ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಗರಂ ಆಗಿದ್ದಾರೆ. ನಾವು ನಿಮಗಾಗಿ ಪಾರ್ಟಿ ಆಫೀಸ್ ನಲ್ಲಿ ಕಾಯುತ್ತಿದ್ದೇವೆ. ನೀವು ಇಲ್ಲಿ ಬಂದರೇ ಏನು ಮಾಡಬೇಕು ಎಂದು ಶಾಸಕ ಬೇಳೂರು ಪ್ರಶ್ನಿಸಿದ್ದಾರೆ.
ಅಲ್ಲಾ ಮಧು ಅಣ್ಣಾ.. ಏನೀದು…? ಸ್ವಲ್ಪ ಕಾಯಬೇಕು ಅಲ್ವಾ…? ನಂತರ ಬೇಳೂರು ಗೋಪಾಲಕೃಷ್ಣರನ್ನು ಸಮಾಧಾನ ಪಡಿಸಿದ ಸಚಿವರು.ನಂತರ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದನ್ನೂ ಓದಿ-https://suddilive.in/archives/2939
