ಸ್ಥಳೀಯ ಸುದ್ದಿಗಳು

ನಿಗಮ‌ಮಂಡಳಿ ರಚನೆಯ ವೇಳೆಯಲ್ಲೂ ಪಕ್ಷ ಬೆಳೆಸಿದವರಿಗೆ ಆಧ್ಯತೆ ನೀಡಬೇಕು-ಹರಿಪ್ರಸಾದ್

ಸುದ್ದಿಲೈವ್/ಶಿವಮೊಗ್ಗ

1947 ರ ಹಿಂದೆ ದಲಿತ ಶೂದ್ರ ಜಾತಿ ಎಂದು ಇತ್ತು. ಸ್ವಾತಂತ್ರ್ಯ ಬಂದನಂತರ ನಾವೆಲ್ಲರೂ ಸಂವಿಧಾನದ ಮುಂದೆ ಸಮಾನರು ಎಂದು ಎಂಎಲ್ ಸಿ ಬಿ.ಕೆಹರಿಪ್ರಸಾದ್ ಹೇಳಿದರು.

ಅವರು ನಗರದ‌ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆಯಿಂದ ಕಾಂತರಾಜು ವರದಿಗೆ ಜಾಗೃತಿಗೆ ಆಗ್ರಹಿಸಿ ಚಿಂತನ ಮಂಐನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಸಂವಿಧಾನ ನಮ್ಮ ದೇಶದಲ್ಲಿ ಬಾಲಾವ್ಯವಸ್ಥೆಯಲ್ಲಿದೆ. ಸಂವಿಧಾನದ ಕುರಿತು ಜಾಗೃತಿ ಅಗತ್ಯವೆಂದ ಹರಿಪ್ರಸಾದ್ ನಮ್ಮ ದೇಶದಲ್ಲಿ ಜಾತಿ ಮತ್ತು ಧರ್ಮ ಹಾಗೂ ಭಾಷಗಳ ಕುರಿತು ಗಲಭೆ ವಿಚಾರದಲ್ಲಿ ಹಿಂದುಳಿದವರ ಹೆಸರು ಮುಂಚೂಣಿಗೆ ತರಲಾಗುತ್ತದೆ. ಆದರೆ ಮೀಸಲಾತಿ ವಿಚಾರ್ಲಿ ಹಿಂದುಳಿದ ವರ್ಗದವರನ್ನ ಪರಿಗಣಿಸೊಲ್ಲ ಯಾಕೆ ಎಂದು ಪ್ರಶ್ನಿಸಿದರ.

ಮೊದಲು ಧರ್ಮಗುರುಗಳು ಹೇಳ್ತಿದ್ದರು ಅದು ಪಾಲನೆ ಆಗ್ತಿತ್ತು. ನಂತರ ರಾಜರ ಮಾತು ನಡೆಯಲು ಆರಂಭವಾಯಿತು. ಆದರೆ 1947 ರ ನಂತರ ಸಂವಿಧಾನದ ಪ್ರಕಾರ‌ನಡೆಯಬೇಕಿದೆ. ಪಂಚಾಗದ ಪ್ರಕಾರ ಹಿಂದುಳಿದ ವರ್ಗದವರು  ನಡೆಯುವುದಿಲ್ಲ ಬದಲಿಗೆ ಸಂವಿಧಾನದ ಪ್ರಕಾರ ನಡೆಯಬೇಕಿದೆ. ಒಗ್ಗಟ್ಟು ಪ್ರಧರ್ಶನ ಎಲ್ಲಿ ಆಗಬೇಕು ಎಂದರೆ ಹಕ್ಕುಪಡೆಯಲು ಆಗಬೇಕೆ ವಿನಃ ಕೇವಲ ಶಾಸಕರ ಟಿಕೇಟಿಗಾಗಿ ಅಲ್ಲ ಎಂದರು.

ಸರ್ಕಾರದ ಮಟ್ಟದಲ್ಲಿ 70 ಕಾರ್ಯದರ್ಶಿಗಳಲ್ಲಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೂರು ಜನ ಮಾತ್ರ ಕಾರ್ಯದರ್ಶಿಗಳಿದ್ದಾರೆ. ಬ್ಯಾಂಕ್ ಗೆ ಮೋಸ ಮಾಡಿದವರು ರೈತನಲ್ಲ. 24 ಲಕ್ಷ ಕೋಟಿ ಹಣ ವಂಚಿಸಿದವರು ಉದ್ದಿಮೆಯವರು. ಜಾತಿ ಆಧಾರಿತ ವರದಿ ಜಾರಿಯಾಗಬೇಕು. ಕಾಂತರಾಜು ಅವರು ಸಹಿ ಮಾಡದ ಹಿನ್ನಲೆಯಲ್ಲಿ ಕಾಂತರಾಜು ವರದಿಯಾಗೊಲ್ಲ. ಬದಲಿಗೆ ಹಿಂದುಳಿದ ವರ್ಗಗಳ ವರದಿಯಾಗಲಿದೆ ಎಂದರು.

101 ಜಾತಿಯಲ್ಲಿ ನಾಲ್ಕು ಜಾತಿಗಳಿಗೆ ಮಾತ್ರ ಸರ್ಕಾರಿ ಸೌಕರ್ಯಗಳು ಸಿಕ್ಕಿವೆ ಉಳಿದ 97 ಜಾತಿಗೆ ಸಿಗಲ್ಲಿಲ್ಲ. ಶುದ್ರರ ಜಾತಿಯಲ್ಲಿ  197 ಜಾತಿ ಇವೆ. ನಾಲ್ಕು ಐದು ಜಾತಿ ಸವಲತ್ತು ಪಡೆದಿವೆ. ಇದನ್ನ ಉಳಿದವರು ವಿರುದ್ಧಿಸುತ್ತಿಲ್ಲ. ಬದಲಿಗೆ ಸವಲತ್ತು ಪಡೆಯಲು ಸಾಧ್ಯವಾಗಿಲ್ಲ. ಮತ ಚಲಾವಣೆಯ ವೇಳೆ ಶಿಕ್ಷಣ ನೀಡಿದವರಿಗೆ. ಉದ್ಯೋಗ ನೀಡುವರಿಗೆ ಆರೋಗ್ಯ ಕಾಪಾಡುವವರಿಗೆ ಮತಹಾಕಿದರೆ ಇವರಿಂದ ನೀವು ಸವಲತ್ತು ಪಡೆಯಬಹುದಾಗಿದೆ ಎಂದರು.

ರಾಜಕೀಯ ಜಾಗೃತಿಗಾಗಿ ಈ ಅಭಿಯಾನ ಆರಂಭವಾಗಿದೆ. ರಾಜ್ಯದಲ್ಲಿ ವರದಿಗಳು ತಯಾರಾಗುವುದು ಹೊಸದಲ್ಲ.ಹಾವನೂರು ವರದಿಗೆ ಮೊದಲಿಗೆ ವಿರೋಧವಿತದತು. ಈಗ ಒಪ್ಪಿಕೊಂಡಿದ್ದಾರೆ. ದಕ್ಷಿಣ ರಾಜ್ಯದಲ್ಲಿ  ಹಿಂದುಳಿದ ವರ್ಗಳಿಗೆ ಹೆಚ್ಚಿನ ಮೀಸಲಾತಿ ಇದೆ. ಉತ್ತರ ಭಾರತಿಯ ರಾಜ್ಯಗಳಿಗಿಂತ ದಕ್ಷಿಣದ ರಾಜ್ಯಗಳು 200 ವರ್ಷ ಮುಂದಿದ್ದೇವೆ ಎಂದರು.

ಬಡತನ ಉತ್ತರ ಪ್ರದೇಶದಲ್ಲಿ 21% ಇದೆ ಮೀಸಲಾತಿ ಕಡಿಮೆ ಇವೆ. ಗುಜರಾತ್ ನಲ್ಲಿ ಬಡತನವೇ 11% ಆದರೆ 69% ಮೀಸಲಾತಿ ಇರುವ ತಮಿಳುನಾಡಿನಲ್ಲಿ ಬಡತನ 2% ಇದೆ. ‌ಕರ್ನಾಟಕದಲ್ಲಿ ಜಿಎಸ್ ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಆದರೆ 38% ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಇದೆ. ಹಾಗಾಗಿ ಅಭಿವೃದ್ಧಿಗೆ ಮೀಸಲಾತಿ ಮಾರಕವಲ್ಲ ಪೂರಕವೆಂದರು. ಶಿಕ್ಷಣ ಆರೋಗ್ಯ ನೀಡಲು ಜನಗಣತಿ ಮೂಲಕ ಸಾಧ್ಯವೆಂದರು.

ನಿಗಮ ಮಂಡಳಿ ಹಂಚಿಕೆ ವೇಳೆಯಲ್ಲೂ ಪಕ್ಷ‌ಬೆಳೆಸಲು ಶ್ರಮಿಸಿದವರಿಗೆ ನೀಡಬೇಕಿದೆ.

ಇದನ್ನೂ ಓದಿ-https://suddilive.in/archives/2096

Related Articles

Leave a Reply

Your email address will not be published. Required fields are marked *

Back to top button