ರಾಜಕೀಯ ಸುದ್ದಿಗಳು

ಮಹಿಳೆಯರ ಖಾಸಗಿ ಹಕ್ಕುಗಳ ಉಲ್ಲಂಘನೆ-ಯುವ ಜಾ.ಜನತಾದಳದಿಂದ ಪ್ರತಿಭಟನೆಯ ಎಚ್ಚರಿಕೆ

ಸುದ್ದಿಲೈವ್/ಭದ್ರಾವತಿ

ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿಪಲವಾದ ರಾಜ್ಯ ಸರ್ಕಾರದ ಕಾರ್ಯವೈಖರಿಯ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಯುವ ಜಾತ್ಯಾತೀತ ಜನತಾದಳ  ಎಚ್ಚರಿಸಿದೆ.

ಕಳೆದ ಕೆಲವು ದಿವಸಗಳಿಂದ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಹಾಸನದ ಕೆಲವು ಕಿಡಿಗೇಡಿಗಳು ರಾಜಕೀಯ ದುರುದ್ದೇಶದಿಂದ ಪ್ರಸಾರ ಮಾಡುತ್ತಿದ್ದು, ಈ ಬಗ್ಗೆ ಹಾಸನದ ಸಿ.ಇ.ಎನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 33/2024ರಡಿಯಲ್ಲಿ ಕೆಲವು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆದರೆ ರಾಜ್ಯ ಸರ್ಕಾರವು ರಾಜಕೀಯ ದುರುದ್ದೇಶದಿಂದ ಪೋಲೀಸ್ ಇಲಾಖೆಯ ಮೇಲೆ ಒತ್ತಡವನ್ನು ಹೇರಿ ಸದರಿ ಆರೋಪಿಗಳ ವಿರುದ್ದ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಕ್ರಮ ವಹಿಸಿರುವುದಿಲ್ಲ. ಸದರಿ ಅಶ್ಲೀಲ ವಿಡಿಯೋಗಳನ್ನು ಕಿಡಿಗೇಡಿಗಳು ಸಂತ್ರಸ್ತ ಮಹಿಳೆಯರ ಮುಖವನ್ನು ಮರೆಮಾಚದೇ ಪ್ರಸಾರ ಮಾಡಿರುವುದರಿಂದ ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಇದು ಮಹಿಳೆಯರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದ್ದು ಹಾಗೂ ಕಾನೂನಿನ ದೃಷ್ಟಿಯಲ್ಲಿ ಘನಘೋರ ಅಪರಾಧವಾಗಿರುತ್ತದೆ. ಆದ್ದರಿಂದ, ಹಾಸನದ ಸಿ.ಇ.ಎನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 33/2024 ದಾಖಲಾಗಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಆಶ್ಲೀಲ ವಿಡಿಯೋಗಳ ಪ್ರಸಾರದ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಬೇಕು.

ಅಶ್ಲೀಲ ವಿಡಿಯೋಗಳ ಪ್ರಸಾರವನ್ನು ತಡೆಹಿಡಿಯಬೇಕೆಂದು ಜಿಲ್ಲಾ ಯುವ ಜನತಾ ದಳ(ಜಾ) ಅಧ್ಯಕ್ಷರಾದ ಮಧು ಕುಮಾರ್ ಈ ಮೂಲಕ ರಾಜ್ಯ ಸರ್ಕಾರವನ್ನು ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಆಗ್ರಹಿಸಿದ್ದಾರೆ.

ಸರ್ಕಾರವು ಬಗ್ಗೆ ಸೂಕ್ತ ಕ್ರಮವಹಿಸದಿದ್ದರೆ ಜಿಲ್ಲಾ ಯುವ ಜನತಾದಳ(ಜಾ) ಶಿವಮೊಗ್ಗವು ಮುಂದಿನ ದಿವಸಗಳಲ್ಲಿ ಉಗ್ರ ಪ್ರತಿಭಟೆಯನ್ನು ನಡೆಸಲಿದೆ ಎಂದು ಎಚ್ಚರಿಕೆ  ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/14555

Related Articles

Leave a Reply

Your email address will not be published. Required fields are marked *

Back to top button