ಸೂಡಾ ಅಧಿಕಾರಿಗಳ ವಿರುದ್ಧ ಸಚಿವ ಬಿ.ಎಸ್.ಸುರೇಶ್ ಗರಂ ಆಗಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚರಿಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ನೇತೃತ್ವದಲ್ಲಿ ಶಾಸಕ ಚೆನ್ನಬಸಪ್ಪ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಜುಮಾರ್ ಭೂಮರೆಡ್ಡಿ, ಸಿಇಒ ಸ್ನೇಹಲ್ ಲೋಖಂಡೆ ಮತ್ತು ಪಾಲಿಕೆ, ಸೈಡಾ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕರಿಗಳ ಸಭೆ ನಡೆಸಿದರು. ಸಭೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.
ಖಾಸಗಿಯವರಿಗೆ ಸೂಡಾ ನಗರದಲ್ಲಿ ಹೆಚ್ಚಿನ ಲೇಔಟ್ ಮಾಡಲು ಅನುಕೂಲ ಮಾಡಿಕೊಟ್ಟು ಸರ್ಕಾರದ ಸೈಟ್ ಮಾಡಿ ಹಂಚದೆ ಇರುವ ಬಗ್ಗೆ ಸಚಿವ ಬಿ.ಎಸ್.ಸುರೇಶ್ (ಬೈರತಿ ಸುರೇಶ್) ಗರಂ ಆಗಿದ್ದಾರೆ. ಹಾಸನ ದೊಡ್ಡದಾ? ಶಿವಮೊಗ್ಗ ದೊಡ್ಡದಾ ಎಂದು ಆರಂಭದಲ್ಲೇ ಮಾತನಾಡಿದ ಸಚಿವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಆರಂಭಿಸಿದರು.
ಸೂಡಾದಲ್ಲಿ ಇರುವ ಹಣವನ್ನ ವಾಪಾಸ್ ಕೊಡವಹಾಗಿಲ್ಲ. ಬದಲಿಗೆ ಸೈಟ್ ಕೊಡಿ ಎಂದು ಸಚಿವರು ಸೂಚಿಸಿದರು. 148 ಕೋಟಿ ಸೂಡಾದಲ್ಲಿ ಹಣವಿದೆ ಏನು ಮಾಡ್ತಾ ಇದ್ದೀರಾ? ಊರುಗಡೂರಿನಲ್ಲಿರುವ ಕಾಂಟ್ರಾಕ್ಟ್ ಎಲ್ಲಿ ಕರೆಯಿಸಲು ಸಚಿವರು ಸೂಚಿಸಿದರು. ಗೋಪಿಶೆಟ್ಟಿ ಕೊಪ್ಪದಲ್ಲಿ ಜಾಗವಿದೆ. ಊರಗಡೂರು ಕಂಟ್ರಾಕ್ಟರ್ ಎಂಆರ್ ಪ್ರೋಡೆಕ್ಟ್ ಪ್ರೈ ಲಿ.,ನ ರವಿ ಎಂದು ಸೂಡಾ ಅಧಿಕಾರಿ ತಿಳಿಸಿದರು. ಈತನ ಹೆಸರು ಗುಪ್ತವಾಗಿಡಲಾಗಿದೆ ಯಾಕೆ ಎಂದು ತಿಳಿಸಿದ ಸಚಿವರು. ಈತನನ್ನ ಕರೆಯಿಸಲು ಅಧಿಕಾರಿಗೆ ಸೂಚಿಸಿದರು.
ಹಾಸನ ದೊಡ್ಡದ? ಶಿವಮೊಗ್ಗ ದೊಡ್ಡದಾ? ಎಂದು ಪ್ರಶ್ನಿಸಿದ ಸಚಿವರು ಹಾಸನದಲ್ಲಿ ಒಂದು ವರ್ಷದಲ್ಲಿ 17 ಸಾವಿರ ಸೈಟನ್ನ ಕೊಡಲಾಗಿದೆ. ನೀವೇನು ಮಾಡುತ್ತಿದ್ದೀರಾ ಎಂದು ಸಚಿವ ಬೈರತಿ ಸುರೇಶ ಸೂಡಾ ಅಧಿಕಾರಿ ವಿಶ್ವನಾಥ್ ಗೆ ಕ್ಲಾಸ್ ತೆಗೆದುಕೊಂಡರು, ಖಾಸಗಿಯವರಿಗೆ ಅನುಮತಿ ನೀಡುತ್ತಿದ್ದೀರ ಒಂದು ವರ್ಷದಲ್ಲಿ ಸರ್ಕಾರಿ ನಿವೇಶನಕ್ಕೆ 100 ಎಕರೆ ಭೂಮಿ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ನಿವೇಶನಕ್ಕೆ ಎಷ್ಟು ಬಾರಿ ಎಂಎಲ್ ಎ ಗೆ ಸಂಪರ್ಕಿಸಿದ್ದೀರಾ? ಸರ್ಕಾರಿ ನಿವೇಶನ ಜನಸಾಮಾನ್ಯರಿಗೆ ಎಟಕುವ ದರಕ್ಕೆ ನೀಡಲಾಗುತ್ತಿದೆಯಾ? ಒಂದು ವರ್ಷದಲ್ಲಿ 250 ಎಕರೆ ಒಂದು ವರ್ಷದಲ್ಲಿ ನೀಡಲಾಗಿದೆ. ಖಾಸಗಿಯವರು 4 ಸಾವಿರ ಸೈಟ್ ನೀಡಲಾಗುತ್ತದೆ. ಹಾಗಾದರೆ ಶಿವಮೊಗ್ಗದಲ್ಲಿ 4-5 ಸಾವಿರ ಚದರ ಅಡಿಗೆ ಕೊಟ್ಟು ಖರೀದಿಸುವಷ್ಟು ಜನ ಶ್ರೀಮಂತರಾ? ಎಂದು ಮಿನಿಸ್ಟರ್ ಪ್ರಶ್ನಿಸಿದರು. ಇದಕ್ಕೆ ಸೂಡಾ ಅಧಿಕಾರಿ ಗಪ್ ಚುಪ್ ಆಗಿದ್ದರು.
ಜಿಲ್ಲಾಧಿಕಾರಿಗಳು ಮಾತನಾಡಿ,ಸೂಡಾ ಸೈಟ್ ಗುರುತಿಸಲು ಎರಡು ತಿಂಗಳು ಕಾಲಾವಕಾಶ ಕೋರಿದರು. ಜಾಗವನ್ನ 250 ಎಕರೆ ಗುರುತಿಸಿ ಬಡವರಿಗೆ ಎಟಕುವ ದರದಲ್ಲಿ ನೀಡಲಾಗುವುದು ಎಂದರು. ಜಮೀನು ತೆಗೆದುಕೊಂಡು ಲೇಔಟ್ ರಚಿಸಲು ಗೋಪಿಶೆಟ್ಟಿಕೊಫ್ಪದ್ದಲ್ಲಿ ಜಾಗ ಖಾಲಿ ಇದೆ. ಇಲ್ಲಿ ತಕ್ಷಣ ಟೆಂಡರ್ ಕರೆಯಲು ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆಅಚ್ಚರಿ ವ್ಯಕ್ತಪಡಿಸಿದ ಸಚಿವ
ಸ್ಮಾರ್ಟ್ ಸಿಟಿ ಕುರಿತು ಮಾತನಾಡಿದ ಸಚಿವ ಬಿ.ಎಸ್ ಸುರೇಶ್, ಯೋಜನೆ ಬರುವ ಮುಂಚೆ ಮಳೆ ನೀರು ಹರಿದುಹೋಗುತ್ತಿತ್ತು. ಯೋಜನೆ ಮಾಡಿದ ಮೇಲೆ ಮನೆಯ ಮುಂದಿನ ನೀರು ಹರಿಯದೆ ಮನೆಯೊಳಗೆ ಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಯೋಜನೆ ಬಂದ ನಂತರ ವ್ಯವಸ್ಥೆ ಹದಗೆಡಿಸಿರುವ ಬಗ್ಗೆ ನಾಗರೀಕರು ದೂರು ನೀಡಿದ್ದಾರೆ ಎಂದರು.
ಯೋಜನೆಯ ಎಂಡಿ ಮಾಯಣ್ಷ ಗೌಡ ಮಾತನಾಡಿ, 1000 ಕೋಟಿಯಲ್ಲಿ 500 ಕೋಟಿ ರಸ್ತೆ, ಚರಂಡಿ ಮೊದಲಾದ ಕಾಮಗಾರಿ ಮಾಡಲಾಗಿತ್ತು. ಇದರಲ್ಲಿ ಚರಂಡಿ ರಾಜಕಾಲುವೆಗೆ ಹೋಗುವ ಲಿಂಕ್ ಇಲ್ಲದೆ ಇರುವುದು ಕಂಡು ಬಂದಿದೆ. ಇದಕ್ಕಾಗಿ ಸಾರ್ವಜನಿಕ ದೂರು ಸ್ವೀಕರಿಸಲಾಗಿದೆ. 1800 ದೂರು ಬಂದಿದೆ. 71 ವರ್ಕ್ ಸ್ಮಾರ್ಟ್ ಸಿಟಿ ವರ್ಕ್ ಆಗಿದೆ. ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ ವರ್ಕ್ ಮುಗಿದಿದೆ ಆದರೆ ಗುಣಮಟ್ಟದ ಕೆಲಸ ಆಗಿಲ್ಲ. ಬಿಲ್ ಸಹ ಪೂರ್ತಿಯಾಗಿದೆ. ಸಮಸ್ಯೆ ಬಗೆಹರಿಯದೆ ಬಿಲ್ ಆಗಿರುವ ಬಗ್ಗೆ ಸಚಿವರು ಅಚ್ಚರಿ ಪಡಿಸಿದರು. 990 ಕೋಟಿ ಸ್ಮಾರ್ಟ್ ಯೋಜನೆಯಲ್ಲಿ 920 ಕೋಟಿ ಪೇಮೆಂಟ್ ಆಗಿದೆ. 70 ಕೋಟಿ ಪೇಮೆಂಟ್ ಬಾಕಿ ಇದೆ. 70 ಕೋಟಿಯಲ್ಲಿ ಕಾಮಗಾರಿ ಸರಿಯಾಗದ ವರೆಗೆ ಪೇಮೆಂಟ್ ಮಾಡಬೇಡಿ ಎಂದು ಸಚಿವರು ಸೂಚಿಸಿದರು. 100 ಕೋಟಿ ರೂ. ನಿರ್ವಹಣೆಗಾಗಿ ತೆಗೆದಿಡಲಾಗಿದೆ. ಮದಿನ 10 ವರ್ಷಕ್ಕೆ ಈ ಹಣ ಟ್ರಸ್ಟ್ ಮೂಲಕ ತೆಗೆದಿಡಲಾಗಿದೆ ಎಂದು ಎಂಡಿ ಮಾಯಣ್ಣ ಗೌಡ ತಿಳಿಸಿದರು.
ಇದನ್ನೂ ಓದಿ-https://suddilive.in/archives/1907
