ದಸರಾ ಮೆರವಣಿಗೆಗೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ದಸರಾ ಹಬ್ಬದ ಜಂಬೂ ಸವಾರಿಗೆ ಚಾಲನೆ ದೊರೆತಿದೆ. ಅನೇಕ ಅವಘಡದ ನಡುವೆಯೂ ಮೆರವಣಿಗೆಗೆ ಚಾಲನೆ ದೊರೆತಿದೆ.
ಅರಮನೆಯ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಪಾಲಿಕೆ ಮೇಯರ್ ಶಿವಕುಮರ್ ಉಪಮೇಯರ್ ಲಕ್ಷ್ಮೀ ಶಂಕರ್ ಹಾಗೂ ಸದಸ್ಯರಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು.
ತಮಟೆ, ಡೊಳ್ಳು, ತಟ್ಟಿರಾಯ, ಮಹಿಳೆಯರಿಂದ ಚಂಡೆ ಕುಣಿತ, ಸಕ್ರಬೈಲಿನ ಸಾಗರ್, ಹೇಮಾವತಿ ಆನೆಗಳ ಹಿಂದೆ 407 ವಾಹನದಲ್ಲಿ ಅಂಬಾರಿ ಮೆರವಣಿಗೆ ಹೊರಟಿದೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಗಾಂಧಿ ಬಜಾರ್, ಶಿವಪ್ಪ ನಾಯಕನ ವೃತ್ತ,
ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ವೃತ್ತ, ಲಕ್ಷ್ಮೀ ಚಲನಚಿತ್ರ ಮಂದಿರದ ಮೂಲಕ ಫ್ರೀಡಂಪಾರ್ಕ್ ಗೆ ಮೆರವಣಿಗೆ ತಲುಪಲಿದೆ. ಮೆರವಣಿಗೆಯಲ್ಲಿ ದುರ್ಗಪರಮೇಶ್ವರಿ, ಮತ್ತು ಅಂಜನೇಯ ದೇವರುಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. ನಂತರ 50 ವಿವಿಧ ದೇವತೆಗಳು ಭಾಗಿಯಾಗಲಿವೆ. ಫ್ರೀಡಂ ಪಾರ್ಕ್ ನಲ್ಲಿ ಸಂಜೆಯ ನಂತರ ಬನ್ನಿಮುರಿಯುವ ಕಾರ್ಯಕ್ರಮ ಮತ್ತು ಪಟಾಕಿಗಳನ್ನ ಸುಡಲಾಗುತ್ತದೆ. ತಹಶೀಲ್ದಾರ್ ನಾಗರಾಜ್ ಸಂಪ್ರದಾಯಿಕ ಧಿರಿಸಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ-https://suddilive.in/archives/1736
