ಕ್ರೈಂ ನ್ಯೂಸ್

ಮಕ್ಕಳ ಕೈಯಲ್ಲೇ ಚಿಕ್ಕಪ್ಪನ ಜೀವಂತ ದಹನ

ಸುದ್ದಿಲೈವ್/ಶಿವಮೊಗ್ಗ

ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗುತ್ತಿದ್ದ ಯಜಮಾನರೀರ್ವರನ್ನ ದೊಡ್ಡಪ್ಪನ ಮಕ್ಕಳೇ ಪೆಟ್ರೋಲ್ ಎರಚಿ ಸುಟ್ಟಿರುವ ಘಟನೆ ನಡೆದಿದೆ. ದೇಹ ಸುಡುತ್ತಿದ್ದರು ಘಟನೆ ಕುರಿತು ಹೇಳಿಕೆ ನೀಡಿದ್ದಾರೆ. ಇದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ.

ಮಗಳ ಮನೆಗೆ ಹೋಗಿ ತೋಟಕ್ಕೆ ನೀರು ಬಿಟ್ಟು ಮಹೇಶಪ್ಪ (60) ದಿನಾಲು ವಾಪಾಸಾಗುತ್ತಿದ್ದರು.  ನಿನ್ನೆ ನೀರಿನ ಮೋಟಾರ್ ಕೆಟ್ಟಕಾರಣ ಇಂದು ಬೆಳಿಗ್ಗೆ ಮೋಟಾರ್ ಬದಲಾಯಿಸಲು ತೀರ್ಮಾನಿಸಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ 50 ಸಾವಿರ ರೂ ಹಣ ಇಟ್ಟುಕೊಂಡು ಹೋಗುತ್ತಿದ್ದರು.

ಮತ್ತೋಡು ಕ್ರಾಸ್ ಬಳಿ ಮಹೇಶಪ್ಪನವರ ಮಕ್ಕಳಾದ ಕಾರ್ತಿಕ್ ಮತ್ತು ಕುಮಾರಪ್ಪ ಅಡ್ಡಕಟ್ಟಿ ಪೆಟ್ರೋಲ್ ಎರಚಿ ದೊಂದಿಯಿಂದ ಬೆಂಕಿಹಚ್ಚಿದ್ದಾರೆ.  ಮಹೇಶಪ್ಪನವರನ್ನ ಜೀವಂತ ಸುಡಲಾಗಿದೆ. ಮಹೇಶಪ್ಪ ಸಂಪೂರ್ಣ ಸುಟ್ಟುಹಾಕಿದೆ. ಸುಟ್ಟ ಸ್ಥಿತಿಯಲ್ಲಿ ಇದ್ದರೂ ಮಹೇಶಪ್ಪ ಘಟನೆಯನ್ನ ವಿವಿರಿಸಿದ್ದಾರೆ. ಇದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ.

ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಮಹೇಶಪ್ಪ ಬದುಕುಳಿಯುವುದು ಕಷ್ಟವೆಂದಿದ್ದಾರೆ. ತಕ್ಷಣವೇ ಮೆಗ್ಗಾನ್ ಗೆ ಸಾಗಿಸಲಾಗಿದೆ. ಮೆಗ್ಗಾನ್ ನಲ್ಲಿ ಮಹೇಶಪ್ಪ ಕೊನೆ ಉಸಿರೆಳೆದಿದ್ದಾರೆ.

ಮಹೇಶಪ್ಪನವರಿಗೆ ಬೆಳಲಕಟ್ಟೆಯಲ್ಲಿ ಮೂರು ಎಕರೆ ಜಮೀನು ಇದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರಪ್ಪ ಅವರ ಮಗ ಕಾರ್ತಿಕ್  ನಡುವೆ ಮಹೇಶಪ್ಪನವರಿಗೆ  ಜಮೀನಿನ ವಿಚಾರ ಮನಸ್ಥಾಪವಿತ್ತು. ಈ ಮನಸ್ಥಾಪವೇ ಮಹೇಶಪ್ಪನವರನ್ನ‌ಜೀವಂತ ಸುಡಲು ಕಾರಣವೆಂದು ಕುಟುಂಬ ಆರೋಪಿಸಿದೆ.

ಕುಮಾರಪ್ಪ, ಮಗ ಕಾರ್ತಿಕ್ ಮತ್ತು ಇತರರ ಹೆಸರನ್ನ ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿರುವುದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಇದನ್ನ ಡೆತ್ ನೋಟ್ ಎಂದು ಪರಿಗಣಿಸಲಾಹುತ್ತಾ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ-https://suddilive.in/archives/4195

Related Articles

Leave a Reply

Your email address will not be published. Required fields are marked *

Back to top button