ಕ್ರೈಂ ನ್ಯೂಸ್

ರಸ್ತೆ ಅಗಲೀಕರಣದ ವೇಳೆ ಅವಘಡ-ಕಾರ್ಮಿಕರ ಸ್ಥಿತಿ ಗಂಭೀರ

ಸುದ್ದಿಲೈವ್/ಶಿವಮೊಗ್ಗ

ಮಾಚೇನಹಳ್ಳಿಯಲ್ಲಿ ರಸ್ತೆ ಅಗಲೀಕರಣವಾಗುತ್ತಿದ್ದು,  ಇಲ್ಲಿನ ಸಾಮಿಲ್ ವೊಂದರ ಕಟ್ಟಡವನ್ನ ತೆರವುಗೊಳಿಸುವ ವೇಳೆ ಆಗಿರುವ ಅನಾಹುತವೊಂದು ತುಂಗ ನಗರ ಪೊಲೀಸ್ ಠಾಣೆ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಸ್ತೆ ಅಗಲೀಕರಣ ವೇಳೆ, ದೇವೇಂದ್ರಪ್ಪ ಸಾಮಿಲ್ ನ್ನ ತೆರವುಗೊಳಿಸಲಾಗುತ್ತಿದ್ದು ಒಂದು ಸಜ್ಜೆಯನ್ನ ಅಡ್ಡ ಬಂದಿದ್ದು  ಆಸಜ್ಜೆಯನ್ನ ಕೆಡವುದು ಬೇಡ ಎಂದು ಮೇಸ್ತ್ರಿ ಮೊಹಮ್ನದ್ ಅಯೂಬ್ ಕೆಲಸಗಾರಾದ ಅಪ್ಸರ್ ಮತ್ತು ಬಾಬಾ‌ಜಾನ್ ರನ್ನ ಬಿಟ್ಟು ಶಿವಮೊಗ್ಗಕ್ಕೆ ಬಂದಿದ್ದರು.

ಸಾಮಿಲ್ ನ ಮಾಲೀಕ ಪ್ರಕಾಶ್ ಮೇಸ್ತ್ರಿಗೆ ಕರೆ ಮಾಡಿ ಸಜ್ಜೆ ಹೊಡೆದ ಕಾರಣ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿತದಿಂದ, ಅಪ್ಸರ್ ಮತ್ತು ಬಾಬು ಜಾನ್ ಗೆ ಪೆಟ್ಟಾಗಿದೆ.  ತಕ್ಷಣವೇ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪ್ರಕಾಶ್ ಅವರ ಪತ್ನಿ ಹೇಳಿಕೆ ಮೇಲೆ ಕಟ್ಟಡವನ್ನ ಕೆಡವಲು ಹೋಗಿ ಅವಘಡ ಸಂಭವಿಸಿದೆ ಎಂದು ದೂರಲಾಗಿದೆ. ನಂತರ ಅಪ್ಸರ್ ಅವರ ಕುಟುಂಬ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಕೋರಿದ ಕಾರಣ ಬೆಂಗಳೂರಿನ ಅಲ್ಯುಮಿನಿಯಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಅಪ್ಸರ್ ಅವರ ಕುಟುಂಬ ಪದೇ ಪದೇ ಮನೆಯ ಬಳಿ ಬಂದು ಅಯೂಬ್ ಬಗ್ಗೆ ಕೇಳಿಕೊಂಡು ಹೋಗುತ್ತಿದ್ದು, ಮೊನ್ನೆ ಬಂದ ಅಪ್ಸರ್ ಕುಟುಂಬಕ್ಕೆ ಅಯೂಬ್ ಪತ್ನಿ ಮನೆಯಲ್ಲಿ ಇಲ್ಲ ಎಂದಿದ್ದಕ್ಕೆ ಅವರು ನೇರವಾಗಿ ಖಬರ್ ಸ್ಥಾನ್ ಗೆ ಹೋಗುತ್ತಾರೆ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಅದೇ ರೀತಿ ಕಾರ್ಮಿಕ ಕುಟುಂಬ ಸಯ್ಯದ್ ಅಪ್ಸರ್ ಕುಟುಂಬ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಕಟ್ಟಡ ಕಾಮಗಾರಿ ಮಾಡಲು ಕಾರ್ಮಿಕರನ್ನು ಬಿಟ್ಟಕಾರಣ ಅವಘಡ ಸಂಭವಿಸಿದೆ. ಹಾಗಾಗಿ ಮೇಸ್ತಿ ಅಯೂಬ್, ಕಟ್ಟಡದ ಮಾಲೀಕ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/4191

Related Articles

Leave a Reply

Your email address will not be published. Required fields are marked *

Back to top button