ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸೇರಿ ಮೂವರು ಸಿಬ್ಬಂದಿಗಳು ಅಮಾನತ್ತು

ಸುದ್ದಿಲೈವ್/ಶಿವಮೊಗ್ಗ

ಕರ್ತವ್ಯದ ನಿರ್ಲಕ್ಷದ ಹಿನ್ನಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಗಳನ್ನ ಅಮಾನತುಗೊಳಿಸಲಾಗಿದೆ.
ಅ.1 ರಂದು ರಾಗಿಗುಡ್ಡದ ಗಲಭೆ ಪ್ರಕರಣ ಮತ್ತು ಈ ಮೊದಲು ನಡೆದ ಪ್ಲೆಲ್ಸ್ ಗಲಾಟೆ ನಡೆದಿತ್ತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಕರ್ತವ್ಯ ನಿರ್ಲಕ್ಷದಿಂದಾಗಿ ಮೂವರು ಸಿಬ್ಬಂದಿಗಳನ್ನ ಅಮಾನತ್ತುಗೊಳಿಸಿದ್ದಾರೆ.
ಠಾಣೆಯ ಠಾಣಾಧಿಕಾರಿ ಅಭಯ್ ಪ್ರಕಾಶ್ ಸೋಮನಾಳ್ ವಿರುದ್ಧ ಐಜಿಗೆ ವರದಿ ಸಹ ಹೋಗಿತ್ತು. ವರದಿಯ ಹಿನ್ನಲೆಯಲ್ಲಿ ಐಜಿಯವರು ಪಿಐ ಅಭಯ್ ಪ್ರಕಾಶ್ ಸೋಮನಾಳ್ ಅವರನ್ನ ಅಮಾನತ್ತುಗೊಳಿಸಿದ್ದಾರೆ.
ಠಾಣೆಯ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಎಂಬ ಮೂವರು ಸಿಬ್ಬಂದಿಗಳು ಅಮಾನತ್ತುಗೊಂಡಿದ್ದಾರೆ. ಇಲಾಖೆ ಕರ್ತವ್ಯ ನಿರ್ಲಕ್ಷದ ವಿರುದ್ಧ ಕ್ರಮಕೈಗೊಂಡಿದೆ. ಆದರೆ ಸ್ಥಳದಲ್ಲಿ ಗಲಭೆ ಕುರಿತು ಗುಪ್ತಚರ ಇಲಾಖೆ ತುಂಬ ಚೆನ್ನಾಗಿ ಕರ್ತವ್ಯ ನಿರ್ವಹಿಸಿತ್ತಾ ಎಂಬ ಅನುಮಾನ ಹುಟ್ಟಲಾರಂಭಿಸಿದೆ. ಘಟನೆ ನಡೆದು 8 ದಿನಗಳ ಅಂತರದಲ್ಲಿ ಇಲಾಖೆ ಕಡಕ್ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ-https://suddilive.in/archives/814
