ಸ್ಥಳೀಯ ಸುದ್ದಿಗಳು

ಈಶ್ವರಪ್ಪ ಬಂಡಾಯ ಏಳಲ್ಲ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಪ್ರಧಾನಿ ಮೋದಿ ನೇತೃತ್ವದಲ್ಲಿ 2024 ನೇ ಲೋಕಸಭಾ ಚುನಾವಣೆಯನ್ನ ಎದುರಿಸಲಾಗಿತ್ತಿದೆ. ಮಾ.18 ರಂದು ಮೊದಲನೇಯ ಚುನಾವಣೆ ಪ್ರಚಾರವನ್ನ ಶಿವಮೊಗ್ಗದಿಂದ ಆರಂಭಿಸಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ

ಅವರು ಶಿವಮೊಗ್ಗದ ಅಲ್ಲಮ ಪ್ರಭು ಫೀಡಂ ಪಾರ್ಕ್ ನಲ್ಲಿ ಮೋದಿಯ ಕಾರ್ಯಕ್ರಮಕ್ಕೆ ಚಪ್ಪರ ಪೂಜೆ ನೆರವೇರಿಸಿ ಮಾತನಾಡಿದರು. ಮಾ.18 ರಂದು ಮದ್ಯಾಹ್ನ 2 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಉಡುಪಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ಮೋದಯ ಆಗಮನ ಅನುಕೂಲವಾಗಲಿದೆ. ಪ್ರಧಾನಿಯನ್ನ ಕಟ್ಟಿಹಾಕಲು ರಾಜಕೀಯವಾಗಿ ನಡೆಯುತ್ತಿದೆ. ಈ ಹಿನ್ಬಲೆಯಲ್ಲಿ ಶಿವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ.

ಎರಡು ವರೆ ಲಕ್ಷ ಜನರನ್ನ ಸೇರಿಸುವ ಗುರಿ ಹೊಂದಲಾಗಿದೆ. ಹೋಮ್ ವರ್ಕ್ ನಡೆಯಬೇಕಿದೆ. ಎಲ್ ಇಡಿ ಸ್ಕ್ರೀನ್ ಹಾಕಲಾಗುತ್ತದೆ.

ಅಡಿಕೆಗೆ ಟೀಕೆ ಸರಿಯಿಲ್ಲ

ಇಂಟರ್ ನ್ಯಾಷನಲ್ ಟ್ರೀಟಿ ನಡೆದಂತೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಸೆಸ್ ಗಳನ್ನ ಅಧಿಕವಾಗಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಕ್ಯಾಪ್ಕೋದವರು ಅಮಿತ್ ಶಾರ ಗಮನಕ್ಕೆ ತರಲಾಗಿದೆ ಎಂದರು.

ಈಶ್ವರಪ್ಪ ಬಂಡಾಯ ಏಳಲ್ಲ

ಮಾಜಿ ಡಿಸಿಎಂ ಈಶ್ವರಪ್ಪನವರು ಬಂಡಾಯ ಏಳುತ್ತಾರಾ ಎಂಬ ಮಾತು ಕೇಳಿ ಬರುತ್ತಿದೆ. ತಪ್ಪು ಕಲ್ಪನೆ ಇದೆ, ಅವರು ಬಂಡಾಯ ಏಳಲ್ಲ ಎಂದ ಸಂಸದರು ಸಿಎಎ ಅಧಿಕೃತವಾಗಿ ರೂಲ್ಸ್ ಅಂಡ್ ರೆಗ್ಯೂಲೇಷನ್ ತರಲಾಗಿದೆ. ದೇಶ ವಿಂಗಡನೆ ಆದಾಗ ಹಿಂದೂ, ಸಿಕ್, ಜೈನ್, ಕ್ರೈಸ್ತರು ಕಂಗಾಲಾಗಿದ್ದರು. ಅವರ ಜನಸಂಖ್ಯೆ ಕಡಿಮೆಯಾಗಿತ್ತು. ರಾಯಚೂರಿನ ಸಿಂಧೂರಿನಲ್ಲಿ ಬಾಂಗ್ಲ ನಿರೀಶಿತರು 20 ಸಾವಿರ ಜನ ಸಂಖ್ಯೆ ಇದ್ದಾರೆ. ಅಂತಹವರಿಗೆ ಪೌರತ್ವ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/10534

Related Articles

Leave a Reply

Your email address will not be published. Required fields are marked *

Back to top button