ಕ್ರೈಂ ನ್ಯೂಸ್

ಉಪವಾಸ ಮುಗಿಸಿ ನದಿಗೆ ಸ್ನಾನಕ್ಕೆ ತೆರಳಿದ ಮೂವರು ಬಾಲಕರು ನೀರು ಪಾಲು

ಸುದ್ದಿಲೈವ್/ತೀರ್ಥಹಳ್ಳಿ

ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿದ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ತೀರ್ಥಹಳ್ಳಿ ರಾಮ ಮಂಟಪದ ಪಕ್ಕ ಈ ಘಟನೆ ನಡೆದಿದೆ. ಮೂವರು ಬಾಲಕರ ಶವ ಪತ್ತೆಯಾಗಿದೆ. ಸತತವಾಗಿ ಒಂದು ಘಂಟೆಯಿಂದ ತುಂಗಾ ನದಿಯ ತೀರದಲ್ಲಿ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.

ರಫನ್, ಇಯನ್, ಸಮ್ಮರ್ ಎಂಬ ಬಾಲಕರು ಈಜಲು ಹೋದಾಗ ಈ ಘಟನೆ ಜರುಗಿದೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಡುಗರು ರಂಜಾನ್ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾಗಿದ್ದರು.

ಇದನ್ನೂ ಓದಿ-https://suddilive.in/archives/11929

Related Articles

Leave a Reply

Your email address will not be published. Required fields are marked *

Back to top button