ಸ್ಪೋಟಿಸಿ ಪೆಟ್ಟಿಗೆ ಓಪನ್-ಪತ್ತೆಯಾಗಿದ್ದು ಬಿಳಿ ಪೌಡರ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಪತ್ತೆಯಾದ ಪೆಟ್ಟಿಗೆಯನ್ನ ತೆರೆಯಲು ತಡರಾತ್ರಿವರೆಗೂ ಕಾರ್ಯಾಚರಣೆ ನಡೆದಿದೆ.. ಶಿವಮೊಗ್ಗದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪತ್ತೆಯಾದ ಎರಡೂ ಪೆಟ್ಟಿಕೆಗಳನ್ನ ಸ್ಪೋಟಿಸುವ ಮೂಲಕ ಓಪನ್ ಮಾಡಲಾಗಿದೆ. ಬೆಂಗಳೂರಿನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ತಂಡದಿಂದ ಕಾರ್ಯಚರಣೆ ನಡೆದಿದೆ.
ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿತ್ತು. ಒಮ್ಮೆ ಕೈಯಲ್ಲಿಯೇ ಬೀಗ ಒಡೆಯುವುದಾಗಿ ತೀರ್ಮಾನಿಸ ನಂತರ ಸ್ಪೋಟಿಸಿ ಓಪನ್ ಮಾಡಲಾಯಿತು.
ತಡರಾತ್ರಿ 2-40 ಕ್ಕೆ ಸ್ಪೋಟಿಸಲಾಯಿತು. ನಿನ್ನೆ ರಾತ್ರಿ 8.30ರ ಸುಮಾರಿಗೆ ಶಿವಮೊಗ್ಗ ರೈಲ್ವೇ ನಿಲ್ದಾಣಕ್ಕೆ ಬಾಂಬ್ ಸ್ಕ್ವಾಡ್.ಆಗಮಿಸಿತ್ತು. 2-40 ಕ್ಕೆ ಒಂದು ಪೆಟ್ಟಿಗೆ ಸ್ಪೋಟಿಸಿದರೆ ಮತ್ತೊಂದು ಪೆಟ್ಟಿಗೆಯನ್ನ ಬೆಳಗ್ಗಿನ ಜಾವ 3-24 ಕ್ಕೆ ಸ್ಪೋಟಿಸಲಾಗಿದೆ. .ಸತತ 6 ಗಂಟೆಯ ನಂತರ ಈ ಕಾರ್ಯಾಚರಣೆ ನಡೆದಿದೆ.
ಸ್ಪೋಟಿಸಿದ ಪೆಟ್ಟಿಗೆಗಳರಡರಲ್ಲೂ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಪೌಡರ್ ಪತ್ತೆಯಾಗಿದೆ. ಇದನ್ನ ಪ್ರಯೋಗಾಲಯಕ್ಕೆ ಕಳುಹಿಸಿ ನಂತರ ನಿಖರ ಮಾಹಿತಿ ತಿಳಿಯಲಿದೆ. ಎರಡು ಬ್ಯಾಗ್ ಬಿಳಿ ಪುಡಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಇದನ್ನೂ ಓದಿ-https://suddilive.in/archives/2539
