ಕ್ರೈಂ ನ್ಯೂಸ್

ಮತ್ತೊಂದು ಕೆರೆಯಿಂದ ಮಣ್ಣು ತೆಗೆದು ಸಾಗಾಣಿಕೆ-ಕ್ರಮಕೈಗೊಳ್ಳುವುದೇ ಪಂಚಾಯತ್ ರಾಜ್ ಇಲಾಖೆ?

ಸುದ್ದಿಲೈವ್/ಶಿವಮೊಗ್ಗ

ಅಬ್ಬಲಗೆರೆಯ ಮುತ್ತಣ್ಣನ ಕೆರೆಯಿಂದ ಮಣ್ಣು ತೆಗೆದು ಖಾಸಗಿ ಲೇಔಟ್ ನಲ್ಲಿ ಬಳಕೆ ಮಾಡಿಕೊಂಡ ಪ್ರಕರಣ ಭಾರಿ ಸದ್ದು ಮಾಡಿತ್ತು.  ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರನ್ನ ವರ್ಗಾವಣೆ ಮಾಡುವ ಹಂತಕ್ಕೆ ಈ ಪ್ರಕರಣ ತಲುಪಿತ್ತು.

ಅದರಂತೆ ಮತ್ತೊಂದು ಕೆರೆಯ ಮಣ್ಣನ್ನ ತೆಗೆದು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಬಳಕೆಯಾಗುತ್ತಿರುವ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಪತ್ರಬರೆದಿರುವುದು ಕುತೂಹಲ ಮೂಡಿಸಿದೆ‌

ಅಗಸವಳ್ಳಿ ಗ್ರಾಮ ಪಂಚಾಯಿತಿಯ ಕೆರೆಯ ಹೂಳು ಮಿಶ್ರಿತ ಮಣ್ಣನ್ನ ರಾಷ್ಟ್ರೀಯ ಹೆದ್ದಾರಿಗೆ ಬಳಕೆಯಾಗುತ್ತಿದೆ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗಕ್ಕೆ ಪತ್ರ ಬರೆದು ಸರ್ಕಾರದ ಬೊಕ್ಕಸಕ್ಕೆ ರಾಜಧನ ಕಟ್ಟದೆ ಮಣ್ಣು ತೆಗೆಯಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ಕೆರೆಯ ಮಣ್ಣನ್ನ ಸಾಗಾಣಿಕೆ ಮಾಡಿದ ವ್ಯಕ್ತಿ ಮತ್ತು ರಾಜಧನ ವಂಚಿಸಿರುವವರ ವಿರುದ್ಧ ಕ್ರಮ ಜರುಗಿಸಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಮನವಿ ಮಾಡಿದೆ. ನ.21 ರಂದು ಬರೆದ ಪತ್ರ ಈ ವರೆಗೂ ಏನಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಆದರೆ ಈ ಹಿಂದೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಅದರಂತೆ ಮೂರು ಕೆರೆಯ ಮಣ್ಣನ್ನ ತೆಗೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ರಾಜಧನ ಕಟ್ಟಿಸಿಕೊಂಡು ನೀಡಲು ಸೂಚಿಸಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರು ಹಣಕಟ್ಟದೆ ಇರುವುದು ಈ ಪತ್ರದಿಂದ ತಿಳಿದು ಬಂದಿದೆ.

ಈ ನಿರ್ಣಯ ಕೈಗೊಂಡರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜಧನ ಕಟ್ಟದೆ ಕೆರಯ ಮಣ್ಣು ತೆಗೆಯಲಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆ ಗೆ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ. ಜೆಸಿಬಿ ಬಳಸಿ ಲಾರಿಯಲ್ಲಿ ಮಣ್ಣು ಸಾಗಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷರಿಗೆ ಒಂದು ನ್ಯಾಯ ನಡೆಯುತ್ತೋ ಅಥವಾ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರಿಗೆ ಒಂದು ನ್ಯಾಯ ನಡೆಯುತ್ತೋ ಕಾದುನೋಡಬೇಕಿದೆ.

ಇದನ್ನೂ ಓದಿ-https://suddilive.in/archives/4602

Related Articles

Leave a Reply

Your email address will not be published. Required fields are marked *

Back to top button