ಕ್ರೈಂ ನ್ಯೂಸ್

ಅಪರಿಚಿತ ಮಹಿಳೆಯೊಂದಿಗೆ ಹೋದ ಚಾಲಕ ನಗದು, ಚಿನ್ನಾಭರಣ ಕಳೆದುಕೊಂಡಿದ್ದು ಎಷ್ಟು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಹೊನ್ನಾವರದಿಂದ ಶಿವಮೊಗ್ಗಕ್ಕೆ ಬರುವ ವೇಳೆ ಅಪರಿಚಿತ  ಮಹಿಳೆಯೊಬ್ಬಳಿಮದ ಲಾರಿ ಚಾಲಕ 50 ಸಾವಿರ ರೂ.ನಗರು ಮತ್ತು ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಹೊನ್ನಾವರದಿಂದ ಬಂದ ಲಾರಿ ಚಾಲಕ ಮಹಿಳೆಯ ಪಕ್ಕ ಕುಳಿತು ಪ್ರಯಾಣಿಸಿದ್ದಾನೆ. ಗಂಡನನ್ನ ಕಳೆದುಕೊಂಡು 8 ತಿಂಗಳಾಗಿದೆ. ಇವತ್ತು ನಿನ್ನ ಜೊತೆ ಮಲಗಬೇಕು ಎಂದು ಹೇಳೆ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇಳಿದಾಗ ಮಹಿಳೆಯೇ ಲಾಡ್ಜ್ ಗೆ ಕರೆದುಕೊಂಡು ಹೋಗಿ ಕೊಠಡಿಯನ್ನ ಬಾಡಿಗೆಗೆ ಪಡೆದಿದ್ದಾಳೆ.

ಕೊಠಡಿಯಲ್ಲಿ ಮಲಗುವ ಮುನ್ನ ಮೈಮೇಲಿನ ಚಿನ್ನಾಭರಣ, ಸಿಲಿಂಡರ್ ಲಾರಿಯ 50 ಸಾವಿರ ನಗದು ಹಣವನ್ನ ಬ್ಯಾಗ್ ಒಂದರಲ್ಲಿ ಹಾಕುವಂತೆ ಸೂಚಿಸಿ‌ದ ಮಹಿಳೆ ಈ ರೀತಿಯೇ ಮಲಗಬೇಕೆಂದು ಸ್ವಾಮೀಜಿ ತಿಳಿಸಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಸೂಚನೆಯಂತೆ ಚಾಲಕಪಾಲಿಸಿದ್ದಾನೆ.

ಊಟ ತೆಗೆದುಕೊಂಡು ಬಾ ಎಂದು ಮಹಿಳೆಯೇ 200 ರೂ ಕೊಟ್ಟು ಕಳುಹಿಸಿದ್ದಾಳೆ ಊಟತರಲು ಹೋದ ಚಾಲಕ ಊಟ ಪಾರ್ಸಲ್ ತಂದ ವೇಳೆ ಮಹಿಳೆ ಕೊಠಡಿ ಖಾಲಿ ಮಾಡಿಕೊಂಡು ಜಾಗ ಖಾಲಿ ಮಾಡಿದ್ದಾಳೆ. ಮಹಿಳೆಯ ಆಸೆಗೆ ಚಾಲಕ 1,24,000/- ರೂ ನಗದು ಚಿನ್ನಾಭರಣ ಕಳೆಉಕೊಳ್ಳುವಂತಾಗಿದೆ.

ಮಹಿಳೆಯ ಮೊಐಲ್ ಬರ್ ಗೆ ಕರೆ ಮಾಡಿದಾಗಲೆಲ್ಲಾ ಎರಡು ಬಾರಿ ರಿಂಗ್ ಆಗಿ ಕಟ್ ಆಗುತ್ತಿತ್ತು. ಈ ಘಟನೆ  ಡಿಸೆಂಬರ್ 15 ರಂದು ನಡೆದಿದೆ. ಚಾಲಕ ಮಾನಮರ್ಯಾದೆಗೆ ಅಂಚಿ ಮಹಿಳೆಯನ್ನ ಹುಡುಕಲು ಯತ್ನಿಸಿದ್ದಾನೆ. ಆದರೆ ಮಹಿಲೆ‌ಪತ್ತೆಯಾಗಿರಲಿಲ್ಲ. ಈದ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/5381

Related Articles

Leave a Reply

Your email address will not be published. Required fields are marked *

Back to top button