ಕ್ರೈಂ ನ್ಯೂಸ್
ಅಕ್ರಮ ಪಟಾಕಿ ಸಂಗ್ರಹಿಸಿದ್ದ ಅಂಗಡಿಯ ಮೇಲೆ ಪೊಲೀಸ್ ದಾಳಿ

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಪಟಾಕಿ ಮಾರಾಟ ಅಂಗಡಿಗಳ ಮೇಲೆ ಪೊಲೀಸರಿಂದ ದಾಳಿ.ನಡೆದಿದೆ. ಇದಕ್ಕೂ ಪೂರ್ವ ಹಸಿರು ಪಟಾಕಿಗಳನ್ನ ಮಾರಾಟ ಮಾಡುವ ಉದ್ದೇಶದಿಙದ ದಾಳಿ ನಡೆಸಿದ್ದ ಪೊಲೀಸರು ನಿನ್ನೆ ಅಕ್ರಮ ಪಟಾಕಿ ಮಾರಾಟ ಮಳಿಗೆ ಮೇಲೆ ದಾಳಿನಡೆಸಿದ್ದಾರೆ.
ಜನ ವಸತಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆದಿದೆ. ನಗರದ ಗಾಂಧಿ ಬಜಾರ್ ನಲ್ಲಿ ಪೊಲೀಸರಿಂದ ದಾಳಿ ನಡೆದಿದೆ.ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು. ದಾಳಿ ನಡೆಸಿದ್ದಾರೆ.
ನಗರದ ಗಾಂಧಿ ಬಜಾರ್ ನ ರಮೇಶ್ ಎನ್ನುವರ ಅಂಗಡಿ ಮೇಲೆ ದಾಳಿ ನಡೆದಿದೆ. 35ಸಾವಿರಾರು ರೂಪಾಯಿ ಮೂಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ. ಅಹಿತಕರ ಘಟನೆಗಳು ತಡೆಯಲು ಜಿಲ್ಲಾಡಳಿತ ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು.
ಜಿಲ್ಲಾಡಳಿತದ ಆದೇಶ ಇದ್ದರು ಜನ ನಿಬಿಡ ಪ್ರದೇಶದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆಗೆ ದಾಳಿ ನಡೆಇದೆ.
