ಕ್ರೈಂ ನ್ಯೂಸ್

ಲಾರಿ, 407 ಹಾಗೂ ಗೂಡ್ಸ್ ಲಘುವಾಹನಗಳನ್ನ ತಡೆದು ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಐಪಿಎಸ್ ಆಕ್ಟ್ ನಲ್ಲಿ ಹಿಟ್ ಅಂಡ್ ರನ್ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನ ವಿರೋಧಿಸಿ ಇಂದು ಲಾರಿ ಚಾಲಕರು ರಸ್ತೆಗಿಳಿದು ಪ್ರತಿಭಟನೆನಡೆಸಿದರು. ಈ ಹಿಂದೆ ಹಿಟ್ ಅಂಡ್ ರನ್ ಗೆ ದಂಡ ಹೆಚ್ಚಳ ಮತ್ತು ಶಿಕ್ಷಾರ್ಹ ಅವಧಿ ಹೆಚ್ಚಾಗಿರುವುದನ್ನ ವಿರೋಧಿಸಿ ಪ್ರತಿಭಟಿಸಲಾಗಿದೆ

10 ದಿನಗಳ ಹಿಂದೆ ಲಾರಿ ಚಾಲಕ ಮತ್ತು ಮಾಲೀಕರ ಸಂಘ ಈ ಕಾಯ್ದೆಯನ್ನ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಬದಲಾವಣೆಯಾಗದ ಹಿನ್ನಲೆಯಲ್ಲಿ ಇಂದು ಲಾರಿ ಚಾಲಕರ ಸಂಘ ಪ್ರತಿಭಟನೆಗೆ ಇಳಿದಿದೆ. ಬೈಕ್ ಗೆ ಬ್ಯಾನರ್ ಕಟ್ಟಿ ಪ್ರತಿಭಟನೆ ಎಂದು ಬರೆಯಲಾಗಿದೆ.

ಎಂ ಆರ್ ಎಸ್ ವೃತ್ತದಲ್ಲಿ ಲಾರಿ ಚಾಲಕರು ಲಾರಿಗಳನ್ನ‌, ಟಾಟಾ ಏಸ್, 407 ಗೂಡ್ಸ್ ಲಘುವಾಹನಗಳನ್ನ ತಡೆದು ವಾಹನಗಳನ್ನು ಮುಂದೆ ಸಾಗದಂತೆ ಅಡ್ಡಿಪಡಿಸಲಾಗುತ್ತಿದೆ. ಕಿಲೋ ಮೀಟರ್ ಗಳ ಉದ್ದ ಲಾರಿಗಳನ್ನ ರಸ್ತೆಯ ಎಡಭಾಗಕ್ಕೆ ಹಾಕಲಾಗುತ್ತಿದೆ.

ಬೆಂಗಳೂರು, ಚಿಕ್ಕಮಗಳೂರು ಮೈಸೂರು ಹಾಸನ ಜಿಲ್ಲೆಯಿಂದ‌ ಬರುವ‌ ಲಾರಿಗಳನ್ನ ಎಂಆರ್ ಎಸ್ ವೃತ್ತದಲ್ಲಿ ತಡೆದು ಪ್ರತಿಭಟಿಸಲಾಗಿದೆ. ತುಂಗಾ ನಗರ ಪೊಲೀಸ‌್ ಠಾಣೆಯ ಪಿಐ ಮಂಜುನಾಥ್ ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ.

ಇದನ್ನೂ ಓದಿ-https://suddilive.in/archives/7094

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373