ಸ್ಥಳೀಯ ಸುದ್ದಿಗಳು

ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ-ಅತ್ಯಾಚಾರ ನಡೆಸಿದವನಿಗೆ ನ್ಯಾಯಾಂಗ ಬಂಧನ

ಸುದ್ದಿಲೈವ್/ಭದ್ರಾವತಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆಗಿರುವ ಘಟನೆ ಸಮೀಪದ ಕೂಡ್ಲಿ ಗ್ರಾಮದಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಸುಮಾರು ೭೬ ವರ್ಷ ವಯಸ್ಸಿನ ವ್ಯಕ್ತಿಯ ಓರ್ವನಿಂದ ಈ ಘಟನೆ ನಡೆದಿದೆ. 3 ನೇ ತರಗತಿಯಲ್ಲಿ ಓದುವ ವಯಸ್ಸಿನ  ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಹೊಳೆಹತ್ತಿರ ಕರೆದುಕೊಂಡು ಹೋಗಿದ್ದಾನೆ ಎಂದು ದೂರಲಾಗಿದೆ.

ನಂತರ ಮನೆಗೆ ಬಂದ ಬಾಲಕಿ ತನಗೆ ನೋವು ಆಗುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆಹಾರದಲ್ಲಿ ವ್ಯತ್ಯಾಸ ಆಗಿದೆ ಎಂದು ಮನೆ ಮದ್ದು ಮಾಡಿದ್ದಾರೆ. ಬಳಿಕ ರಕ್ತಸ್ರಾವದಿಂದ ನೋವು ಹೆಚ್ಚಾಗಿದ್ದರಿಂದ ಬಾಲಕಿಯನ್ನು ವಿಚಾರ ಮಾಡಿದಾಗ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ.

ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ-https://suddilive.in/archives/3500

Related Articles

Leave a Reply

Your email address will not be published. Required fields are marked *

Back to top button