ಕ್ರೈಂ ನ್ಯೂಸ್

ಮಸೀದಿ ಕಮಿಟಿ ಅಧ್ಯಕ್ಷರಾಗಲು ಮಾರಾಮಾರಿ

ಸುದ್ದಿಲೈವ್/ಶಿವಮೊಗ್ಗ

ಮಸೀದಿಯ ಅಧ್ಯಕ್ಷ ವಿಚಾರದಲ್ಲಿ ಮಾರಾಮಾರಿ ಉಂಟಾಗಿದೆ. ಮನೆಯಲ್ಲಿ ಇಸ್ತೇಮಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಏಳು ಜನ ಯುವಕರು ಮನೆಗೆ ನುಗ್ಗಿ ದಾಂಧ್ಲೆ ನಡೆಸಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.

ಬೊಮ್ಮನ್ ಕಟ್ಟೆಯ ಮೊಹ್ಮದ್ ಹನೀಫ್ ಗೆ ಗಲಾಟೆಯಲ್ಲಿ ಗಾಯವಾಗಿದೆ.  ಸಹೋದ ಫಾಜಿಲ್ ಮೇಲೆ ಹಲ್ಲೆ ಯತ್ನ ನಡೆದಿದ್ದು ಹನೀಫ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನು, ಅಕ್ಬರ್ ಯಾನೆ ಪಾರ್ಲೆಜಿ, ರಫೀಕ್, ಅಲನ್, ಬಿಲಾಲ್, ಸಲೀಮ್, ಲತೀಫ್ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎ ಬ್ಲಾಕ್ ಬೊಮ್ಮನ್ ಕಟ್ಟೆಯಲ್ಲಿರುವ ಮೊಹ್ಮದ್ ಫಾಜಿಲ್ ಮನೆಯಲ್ಲಿ ಇಸ್ತೇಮಾ ಕಾರ್ಯಕ್ರಮ ನಡೆಯುತ್ತಿದ್ದು, ಊಟದ ವೇಳೆಗೆ ಸರಿಯಾಗಿ ದ್ವಿಚಕ್ರ ವಾಹನ ಮತ್ತು ಆಟೋದಲ್ಲಿ ಬಂದ ಏಳು ಜನ ಯುವಕರು ಮನೆಗೆ ನುಗ್ಗಿದ್ದಾರೆ.

ಫಾಜಿಲ್ ಅವರ ಜಮೀನಿನಲ್ಲಿಯೇ ಮಸೀದಿ ಇದ್ದು ಫಾಜಿಲ್ ಮಸೀದಿ ಕಮಿಟಿ ಅಧ್ಯಕ್ಷರಾಗಿ ಮುಂದು ವರೆದಿದ್ದಾರೆ. ಇಸ್ತೆಮಾ ಕಾರ್ಯಕ್ರಮದ ಊಟ ನಡೆಯುವ ಸಮಯದಲ್ಲಿ ಬಂದ ತನ್ನು, ಅಕ್ಬರ್ ಕಡೆಯ ಯುವರು ಏಕಾಏಕಿ ಫಾಜಿಲ್ ನ ವಿರುದ್ಧ ಕೂಗಾಡಿ ನೀನೊಬ್ಬನೆ ಅಧ್ಯಕ್ಷನಾಗಬೇಕಾ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ನೀನು ಬದುಕಿದ್ದರೆ ತಾನೆ ಅಧ್ಯಕ್ಷನಾಗೋದು ಎಂದು ಕೂಗಾಡಿ ಹೊಡೆಯಲು ಹೋದಾಗ ಫಾಜಿಲ್ ತಪ್ಪಿಸಿಕೊಂಡಿದ್ದಾರೆ. ನಂತರ ಆಟೋದಲ್ಲಿರುವ ಆಯುಧ ತಂದು ಬೀಸಿದಾಗಲೂ ಫಾಜಿಲ್ ತಪ್ಪಿಸಿಕೊಂಡಿದ್ದಾರೆ. ಆದರೆ ಹನೀಫ್ ಗೆ ನೋಡಿ ಫಾಜಿಲ್ ತಮ್ಮ ಅಲ್ವಾ ಎಂದು ಲಾಂಗು ಬೀಸಲಾಗಿದೆ. ಹನೀಫ್ ಗಾಯಗೊಂಡಿದ್ದು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಏಳು ಜನರು ಹೋಗುವಾಗ ಮಸೀದಿ ಕಡೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಫಾಜಿಲ್ ಗೆ ಜೀವಬೆದರಿಕೆ ಹಾಕಲಾಗಿದೆ. ಈ ಎಲ್ಲಾ ಹುಡುಗರು ಬೊಮ್ಮನ ಕಟ್ಟೆಯ ಬಿ ಮತ್ತು ಇ ಬ್ಲಾಕ್ ನವರು ಎಂದು ಹೇಳಲಾಗಿದೆ. ಪ್ರಕರಣ ವಿನೋಬ ನಗರ ಠಾಣೆಯಲ್ಲಿ ದಾಖಲಾಗಿದೆ.‌

Related Articles

Leave a Reply

Your email address will not be published. Required fields are marked *

Back to top button