ರಾಜಕೀಯ ಸುದ್ದಿಗಳು

ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರೆಂಟಿ ಮೇಲೆ ಅಧಿಕಾರಕ್ಕೆ ಬಂದಿಲ್ಲ-ಅಣ್ಣಾಮಲೈ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಲೋಕಸಭಾ ಚುನಾವಣೆಯಲ್ಲಿ 2014 ಮತ್ತು 2019 ರಲ್ಲಿ ಎರಡೂ ಬಾರಿ ಬಿಜೆಪಿಗೆ ಹೆಚ್ಚಿನ ಮತ ನೀಡುತ್ತಾ ಬಂದಿದ್ದು ಈ ಬಾರಿಯೂ ಬಿಜೆಪಿ ರಾಜ್ಯದಲ್ಲಿ ಹೆಚ್ಚಿನ ಮತ ಲಭಿಸುವ ವಿಶ್ವಾಸವಿದೆ ಎಂದು ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಕಪಕ್ಕದ ರಾಜ್ಯಗಳಲ್ಲಿ INDIA ಪರಸ್ಪರ ಕಚ್ಚಾಡುತಿದ್ದಾರೆ. ಅವರಲ್ಲಿ ಅಧಿಕಾರದ ದಾಹ ಹೆಚ್ಚಾಗಿದೆ. ಎನ್ ಡಿಎ ಪ್ರಧಾನಿ ಅಭ್ಯರ್ಥಿ ಮೋದಿ ಒಬ್ಬರೇ ಈ ದೇಶಕ್ಕೆ ಪರಿಹಾರ ಎಂದರು.

ಲೋಕಸಭಾ ಚುನಾವಣೆ ಪಂಚಾಯತ್ ರಾಜ್ ಚುನಾವಣೆ ಅಲ್ಲ. ಜಾಹೀರಾತುವಿನ‌ ಮೂಲಕ ಕಾಂಗ್ರೆಸ್ ಪ್ರಚಾರಕ್ಕೆ ಇಳಿದಿದೆ. ಭಾರತದ ಪ್ರಧಾನಿ ಕೇವಲ ದೇಶಕ್ಕೆ ಪ್ರಧಾನಿ ಅಲ್ಲ. ಇಡೀ ವಿಶ್ವ‌ ಇವರನ್ನ ಗಮನಿಸುತ್ತದೆ. ಆದರೆ ಚೊಂಬು ಜಾಹೀರಾತು ನೀಡಿ ಕೀಳುಮಟ್ಟದ ಪ್ರಚಾರಕ್ಕೆ ಕಾಂಗ್ರೆಸ್ ಇಳಿಯಬಾರದು. ಇದಕ್ಕೆ ಮತದಾರರು ಉತ್ತರ ಕೊಡ್ತಾರೆ ಎಂದರು.

2013 ರಲ್ಲಿ ಕೇಂದ್ರದ ಯುಪಿಎ ಸರ್ಕಾರ ಕರ್ನಾಟಕ ರಾಜ್ಯ 100 ಕ್ಕೆ 8 ಕೋಟಿ ಕೊಟ್ಟಿತ್ತು. ಅಂದರೆ 8% ಬರಪರಿಹಾರ ನೀಡಿದೆ. 2019 ರಲ್ಲಿ ಎನ್ ಡಿಎ ಸರ್ಕಾರ 30% ಎನ್ ಡಿಆರ್ ಎಫ್ ಹಣ ಬಿಡುಗಡೆ ಆಗಿದೆ. ಎಸ್ ಡಿಅರ್ ಎಫ್ ಮತ್ತು ಎನ್ ಡಿಆರ್ ಎಫ್ ಎರಡು ರೀತಿಯ ಪರಿಹಾರವರುತ್ತದೆ. ಎನ್ ಡಿಆರ್ ಎಫ್ ಗೈಡ್ ಲೈನ್ ಗಳ ಪ್ರಕಾರ ತಡವಾಗಿಯೇ ಹಣ ಬಿಡುಗಡೆಯಾಗುತ್ತದೆ.

ಎನ್ ಡಿಆರ್ ಎಫ್ ಹಣ ಗುಜರಾತ್ ಗೂ ಹಣ ಬಂದಿಲ್ಲ. ಚುನಾವಣೆ ನೀತಿ ಸಂಹಿತೆಯ ಕಾರಣ ಹಣ ಬಿಡುಗಡೆ ತಡವಾಗಿದೆ. ಎನ್ ಡಿಆರ್ ಎಫ್ ಹಣ ಬರುವ ತನಕ ರಾಜ್ಯ ಸರ್ಕಾರ ತನ್ನ ಹಣದಲ್ಲಿಯೇ ಬರ ನಿರ್ವಹಣೆ ಮಾಡಬೇಕು. ಸುಪ್ರೀಂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರ ಮತ್ತು ಅತಿವೃಷ್ಠಿ ವಿಷಯದಲ್ಲಿ ಹೊಂದಾಣಿಕೆಯಲ್ಲಿ ಸಾಗಲು ಸೂಚಿಸಿದೆ. ಅದರಂತೆ ಹೋಗಬೇಕು ಬೀದಿಗಿಳಿದು ಪ್ರತಿಭಟನೆ ಸೂಕ್ತಪರಿಹಾರವಲ್ಲ ಎಂದರು.

ರಾಜ್ಯದಲ್ಲಿ ಗ್ಯಾರೆಂಟಿ ವಿಷಯದಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಪಡೆದಿದೆ ಎಂಬ ವಿಷಯವನ್ನ ಒಪ್ಪುವುದಿಲ್ಲ. ಚುನಾವಣೆಯ ವೇಳೆ ಜನ ಎರಡು ಮೂರು ವಿಷಯ ನೋಡ್ತಾರೆ. ಮನೆ, ನೀರು ಮತ್ತು ಮೂಲಬೂತ ಸೌಕರ್ಯ ಒದಗಿಸುವುದು ಗ್ಯಾರೆಂಟಿಯಾಗಬೇಕು.

ಒಂದು ಲಕ್ಷ ಗ್ಯಾರೆಂಟಿಯನ್ನ ಮಹಾಲಕ್ಷ್ಮಿ ಗ್ಯಾರೆಂಟಿಯನ್‌ನ ಕಾಂಗ್ರೆಸ್ ಹೇಳ್ತಾ ಇದೆ. ಆದರೆ ದೇಶದ ಬಜೆಟ್ 47 ಕೋಟಿ ಬಜೆಟ್ ಇದೆ. ಹೇಗೆ ಹಣ ಹಂಚಲು ಸಾಧ್ಯವಾ ಎಂದು ಪ್ರಶ್ನಿಸಿದ ಅಣ್ಣಾಮಲೈ, ಬಡತನ ರೇಖೆಯನ್ನ ಹೇಗೆ ಅಸೆಸ್ ಮೆಂಟ್ ಮಾಡುತ್ತೀರಿ ಎಂಬುದರ ಬಗ್ಗೆ ಸ್ಪಷ್ಟತೆ ಕಾಂಗ್ರೆಸ್ ಇಲ್ಲ ಎಂದರು.

ಪ್ರಧಾನಿ ಮೋದಿಯವರ ಮಾಂಗಲ್ಯ ಭಾಷಣ ರಾಹುಲ್ ಅವರ ಮೊದಲ ಭಾಷಣಕ್ಕೆ ಪ್ರತ್ಯುತ್ತರವಾಗಿ ಬಂದ ಹೇಳಿಕೆಯಾಗಿತ್ತು. ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಥಿಕ‌ ಸರ್ವೆ ಮಾಡುತ್ತೇವೆ. ಯಾರು ಬಡವರಿದ್ದಾರೆ ಅವರಿಗೆ ಹಣವಂತರ ಆಸ್ತಿ ಹಂಚುವುದರ ಬಗ್ಗೆ ಗೊಂದಲ ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ ಎಂದರು.

ಕೇರಳದ 20 ಸ್ಥಾನದಲ್ಲಿ ಈ ಬಾರಿ ಬಿಜೆಪಿಗೆ ಹೆಚ್ಚು ವೋಟ್ ಶೇರ್ ಹೆಚ್ಚಾಗುತ್ತದೆ. ತಮಿಳುನಾಡಿನಲ್ಲಿ ನಮ್ಮ ಪಕ್ಷ ತೃತೀಯರಂಗದ ರೂಪದಲ್ಲಿ ಹೊರಹೊಮ್ಮಲಿದ್ದೇವೆ 39 ಸ್ಥಾನದಲ್ಲಿ 11 ಸ್ಥಾನ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ ಎಂದರು.

ರಾಜ್ಯದಲ್ಲಿ ಗೊಂದಲದ ವಾತಾವರಣವಿದೆ. ಕಾಂಗ್ರೆಸ್ ಗೆ ಪವರ್ ಸೆಂಟರ್ ಯಾರು ಎಂಬುದರ ಬಗ್ಗೆ ಗೊಂದಲವಿದೆ ಸಿದ್ದರಾಮಯ್ಯನವರೋ, ಡಿಕೆಶಿಯವರೋ ಪರಮೇಶ್ವರೋ ಎಂಬುದು ಗೊಂದಲವಿದೆ. ಇದು ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಮಾಡಿದೆ. ಸುರ್ಜೇವಾಲರಿಗೆ ಉಸ್ತುವಾರಿ ಏನು ಎಂಬುದು ಗೊತ್ತಿಲ್ಲ. ನಾಯಕತ್ವ ಸ್ಥಳೀಯರ ಕೈಯಲ್ಲಿರಬೇಕು.

ಕೇರಳದಲ್ಲಿ ಆನೆ ದಾಳಿಗೆ ವ್ಯಕ್ತಿ ಸತ್ತರೆ ವೇಣುಗೋಪಾಲ್ ಇಂದ ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಹಾರ ನೀಡುತ್ತಾರೆ. ಕರ್ನಾಟಕ ಇಂತಹ ಮದ್ಯಪ್ರವೇಶಗಳಿಂದ ಆಡಳಿತ ಹಾಳಾಗುತ್ತದೆ ಎಂದರು.

ಬಿಜೆಪಿ ಕಣ್ಣುಮುಚ್ಚಿ ಪ್ರಧಾನಿಗೆ ಮತಹಾಕಬೇಕು. ಈಶ್ವರಪ್ಪ ಬಂಡಾಯದ ಕುರಿತು ಮಾತನಾಡಿ, ಮೋದಿ ಅವರಿಗೆ ಮತಹಾಕುವುದು ಧನ್ಯವಾದದ ಮತವಾಗಬೇಕು. ಎಂಪಿ ಯಾರಿದ್ದಾರೆ ಅವರ ಮೂಲಕ ಮೋದಿಗೆ ಹೋಗಬೇಕು.‌

ಸ್ಥಳೀಯ ಬಿಜೆಪಿಯವರು ಸರಿಯಲ್ಲ ನಾನು ಸ್ಪರ್ಧೆ ಮಾಡುತ್ತೇನೆ ಮೋದಿಯನ್ನ ಗೆಲ್ಲಿಸುವುದಾಗಿ ಹೇಳುವುದು ಎಷ್ಟುಸರಿ. ಪುತ್ತೂರಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಒಡೆಯಿತು. ಹಾಗೆ ಶಿವಮೊಗ್ಗದಲ್ಲಿ ಆಗಬಾರದು‌. ಈಶ್ವರಪ್ಪನವರಿಗೆ ಹೇಳುವಷ್ಟು ದೊಡ್ಡವನಲ್ಲ. ಆದರು‌ಮತವಿಭಜನೆಯಾಗದಂತೆ ನೋಡಬೇಕು ಎಂದರು‌

ಇದನ್ನೂ ಓದಿ-https://suddilive.in/archives/13614

Related Articles

Leave a Reply

Your email address will not be published. Required fields are marked *

Back to top button