ರಾಜಕೀಯ ಸುದ್ದಿಗಳು

ಶರಾವತಿ ಸಂತ್ರಸ್ತರ ಬಗ್ಗೆ ಬಿಜೆಪಿಗೆ ಮಾತನಾಡಲು ನೈತಿಕ ಹಕ್ಕಿಲ್ಲ

ಸುದ್ದಿಲೈವ್/ಶಿವಮೊಗ್ಗ

ಬಹುದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಡಾ.ಆರ್ ಎಂ ಮಂಜುನಾಥ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೂತ್ ಗಳಿಂದ ಕೂಡ ಮಹಿಳೆಯರು ಆಗಮಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಆಗಮಿಸಿದ್ದರು. ಸುಡು ಬಿಸಿಲಿನಲ್ಲಿಯೂ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದರು.

ಕೊಟ್ಟ ಮಾತಿನ ಮೇಲೆ ನಾವು ಸ್ಪರ್ಧಿಸಯತ್ತಿದ್ದೇವೆ ಗೆದ್ದೇ ಗೆಲ್ಲುತ್ತೇವೆ. ಅಭ್ಯರ್ಥಿಗಳ ಸಭೆಯಲ್ಲಿ ನಿರೀಕ್ಷೆ ಮೀರಿ ಜನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಶಿಂಗನಬಿದರೆಯ ಕುಗ್ರಾಮದಲ್ಲಿ ಸಾವಿರ ಜನ ಸೇರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

4½ ಕೋಟಿ ಜನರಿಗೆ ಗ್ಯಾರೆಂಟಿ ರಾಜ್ಯದಲ್ಲಿ ತಲುಪಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 7-8 ಲಕ್ಷ ಜನ ಗ್ಯಾರೆಂಟಿ ತಲುಪುತ್ತಿದೆ. ರೈತರಿಗೆ ಬೆಳೆಸಾಲ 5 ಲಕ್ಷ ರೂ. ಜೂನ್ ನಿಂದ ನೀಡಲಾಗುತ್ತಿದೆ. ಮದ್ಯಮ ಸಾಲ 5 ಕೋಟಿಸಾಲ ನೀಡಲಾಗುತ್ತಿದೆ. ರೈತರಿಗೆ ಸಿದ್ದರಾಮಯ್ಯನವರು ಹೊರೆ ಇಳಿಸಿದ್ದಾರೆ.

ಕೇಂದ್ರ 25 ಗ್ಯಾರೆಂಟಿ ಘೋಷಿಸಿದೆ. ಎಂಎಸ್ ಪಿ ಕೊಡುವುದಾಗಿ ಬಿಜೆಪಿ ಹೇಳಿತ್ತು. ಆಗಲಿಲ್ಲ. ನಾವು ನೀಡಿದ್ದೇವೆ. ಜಿಎಸ್ ಟಿಯಿಂದ ಹೊಡೆತ ಬೀಳುತ್ತಿದೆ. ರೈತರಿಗೆ ಒಂದು ಲಕ್ಷ ರೂ ಸಾಲಮನ್ನ,ಎಂಎಸ್ ಪಿ ಘೋಷಣೆ, ಯುವನಿಧಿ, ಮಹಿಳೆಯರಿಗೆ ಗೃಹಲಕ್ಷ್ಮಿ ರೀತಿಯಲ್ಲಿ ನೀಡಲಾಗುತ್ತಿದೆ. ಹೀಗೆ ಜನಪರ ಯೋಜನೆ ಘೋಷಣೆ ಮಾಡಿದ್ದೇವೆ.

ಬಿಜೆಪಿಯನ್ನ ನೋಡುದ್ರೆ ನಗುಬರುತ್ತಿದೆ. ಮೂರು ವಾರ್ದ ಹಿಂದೆ ಶರವತಿ ಮುಳುಗಡೆ ಪಾದಯಾತ್ರೆಯ ವೇಳೆ ಬಿಜೆಪಿ ಫ್ಲೆಕ್ಸ್ ಹಾಕಲಾಗಿತ್ತು. 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗಿವುದು ಎದಿದ್ದರು. ಆದರೆ ಬಿಜೆಪಿ ಅವಧಿ ನುಗಿಯುತು. ಶರಾವತಿ ನುಳುಗಡೆ ಸಮಸ್ಯೆ ಜೀವಂತವಿದೆ.

75 ವರ್ಷದ ದಾಖಲಾತಿ ನೀಡುವುದನ್ನ‌ 25 ವರ್ಷಕ್ಕೆ ಇಳಿಸಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ರೈತರ ಉಪಕರಣದ ಸಾಲಕ್ಕೆ ಜಿಎಸ್ ಟಿ ಹಣವೇ ಹೆಚ್ಚಳವಾಗಲಿದೆ. ಹಾಗಾಗಿ ರೈತರ ಉಪಕರಣ ಖರೀದಿಗೆ ಜಿಎಸ್ ಟಿ ರದ್ದು ಪಡಿಸಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ತ್ರರ ಬಗ್ಗೆ ಬಿಜೆಪಿ ಮೊಸಳೆ ಕಣ್ಣೀರು ಹಾಕುವುದನ್ನ ನಿಲ್ಲಿಸಿ ಎಂದರು.

ಬಿಜೆಪಿಯ ಕಾರ್ಯಕರ್ತರು ಒಬ್ವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಪಾದಯಾತ್ರೆಯ ಬಗ್ಗೆ ಮಾತನಾಡಿದ್ದಾರೆ. ಕಾಗೋಡು ತಿಮ್ಮಪ್ಪ ಹಕ್ಕುಪತ್ರ ಹಂಚಿದ್ದಾರೆ. ಅದರಲ್ಲಿ ಯಾವುದೇ ಸೂಕ್ತ ದಾಖಲಾತಿ ಸಿಗುವುದಿಲ್ಲ ಎಂದಿದ್ದಾರೆ. ಕಾಗೋಡು ತಿಮ್ಮಪ್ಪನವರ ಬಗ್ಗೆ ಮಾತನಾಡಲು ಯೋಗ್ಯತೆ ಯಾರಿಗೂ ಇಲ್ಲ. ಒಂದು ಮಾತು ಹೇಳಿದರು ಹುಷಾರ್ ಎಂದರು.

ರೈತರ ಉಪಕರಣಕ್ಕೆ ಸಾಲಪಡೆಯಲು ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ ಅದನ್ನ ಯಾಕೆ ಮಾತನಾಡಲ್ಲ ಎಂಬ ಮಾಧ್ಯಮ ಪ್ರಶ್ನೆಗೆ .ಗ್ಯಾರೆಂಟಿಗಾಗಿ ಹೆಚ್ಚಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ರಮೇಶ್ ಹೆಗ್ಡೆ, ಮರಿಯಪ್ಪ, ಷಡಾಕ್ಷರಿ, ಮಂಜುನಾಥ್ ರವಿಕುಮಾರ್, ಶಿ.ಜು.ಪಾಶ, ಪದ್ಮಬಾಭ್, ಆರ್ ಮೋಹನ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/13054

Related Articles

Leave a Reply

Your email address will not be published. Required fields are marked *

Back to top button