ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಬುದ್ದಿಬಂದಂತೆ ಇದೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರದಲ್ಲಿ ಈಶ್ವರಪ್ಪ ಮತ್ತೆ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ಡಿಕೆಶಿ ಹಾಗೂ ಅವರ ಅಭಿಮಾನಿಗಳ ವಿರೋಧದ ನಡುವೆಯೂ ಈಶ್ವರಪ್ಪನವರ ಕಳ್ಳ ಎಂಬ ಹೇಳಿಕೆ ದಡ್ಡ ಎಂದು ಬದಲಾಗಿದೆ
ಸ್ವ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ದಿ ಬಂತಂತಾಗಿದೆ. ಮೊದಲೇ ಇವರು ಯಾಕೇ ಸಭೆ ಕರೆಯಲಿಲ್ಲ.ಎಲ್ಲಾ ರಾಜಕೀಯ ಪಕ್ಷಗಳು, ಸಂಸದರು, ರೈತರ ಸಭೆ ಮಾಡಬಹುದಿತ್ತು.ಕಳ್ಳತನದಲ್ಲಿ ನೀರು ಬಿಟ್ಟರು.. ಕಳ್ಳ ಅಂದಿದ್ದಕ್ಕೆ ಬೇಜಾರು ಆದ್ರೂ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಕುತಂತ್ರ ರಾಜಕಾರಣದಿಂದ ರಾಜ್ಯದ ಜನ ಸಮಸ್ಯೆ ಅನುಭವಿಸುವಂತಾಯ್ತು. ನೀರು ಬಿಟ್ಟಾಗ ಕಳ್ಳರು ಎಂದೆ. ಈಗ ದಡ್ಡರು ಅನ್ನಬೇಕಾಗಿದೆ. ಸಿಎಂ, ಡಿಸಿಎಂ ಎಲ್ಲರೂ ದಡ್ಡರು. ನೀರು ಬಿಟ್ಟ ಮೇಲೆ ರಾಜ್ಯದ ಜನರ ಜೊತೆ ನಾವೀದ್ದೇವೆ ಅಂತಾರೆ. ಪ್ರಾಧಿಕಾರಕ್ಕೆ, ಸುಪ್ರೀಂ ಕೋರ್ಟ್ ಗೆ ಅವಮಾನ ಮಾಡುವ ಉದ್ದೇಶ ನಮ್ಮದಲ್ಲ. ಆದರೆ ಸಿಎಂ, ಡಿಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.
ನೀರು ಬಿಟ್ಟ ಮೇಲೆ ಪ್ರಾಧಿಕಾರಕ್ಕೆ, ಸುಪ್ರೀಂಗೆ ಅಪೀಲ್ ಹಾಕ್ತೀವಿ ಎಂದರೆ ಏನು ಪ್ರಯೋಜನ? ಯಾರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ತರಹ ನೀರು ಬಿಟ್ಟರಲ್ಲಾ…ಇವರ ಇಂಡಿಯಾ ಕೂಟವನ್ನು ಮೆಚ್ಚಿಸೋ ಕೆಲಸ ಮಾಡಿದ್ರು ಯಾಕೆ ಎಂದು ವಾಗ್ದಾಳಿ ಮುಂದುವರೆಸಿದ್ದಾರೆ.
ಸೋನಿಯಾ, ಸ್ಟಾಲಿನ್ ಅವರಿಗೆ ಒಳ್ಳೆಯವರಾಗೋಕೆ ಹೋದ್ರು, ನೀವು ಮಾಡಿದ ಮುಟ್ಟಾಳತನಕ್ಕೆ ರಾಜ್ಯದ ಜನರ ಕ್ಷಮೆ ಕೇಳಿ. ರಾಜ್ಯದಲ್ಲಿ ಬರದಿಂದ ಜನ ತತ್ತರಿಸಿ, ಹೋಗಿದ್ದಾರೆ.ಎಷ್ಟು ಕಡೆ ಬರ ಬಂದಿದೆ. ಬೆಳೆ ನಷ್ಟ ಎಷ್ಟು ಅಂದು ಸಮೀಕ್ಷೆ ಕೂಡ ಮಾಡಿರಲಿಲ್ಲ. ಕೇಂದ್ರ ಹಾಗೂ ಪ್ರಧಾನಿಯನ್ನು ದೂಷಿಸುವುದೇ ಇವರ ಕೆಲಸವಾಗಿದೆ. ಈಗಲೂ ಎಲ್ಲರನ್ನು ಕರೆದು, ಸಭೆ ಮಾಡಿ.. ನಿರ್ಧಾರ ಕೈಗೊಳ್ಳಲಿ. ಎಂದರು.
ಆರು ತಿಂಗಳಲ್ಲಿ ಈ ಸರಕಾರ ಬಿದ್ದು ಹೋಗಲಿದೆ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ಕುಮಾರಸ್ವಾಮಿ ಹೇಳಿದ್ದಂತೆ ಈ ಸರಕಾರ ಹೆಚ್ಚು ದಿನ ಇರಲ್ಲ. ಯಾವಾಗ ಬಿದ್ದು ಹೋಗ್ತದೆ ಗೊತ್ತಿಲ್ಲ. ಸರಕಾರದಲ್ಲಿ ಶಾಸಕರಿಗೆ ಅನುದಾನ ಕೊಡಲು ಹಣವಿಲ್ಲ.
ಹಣ ಕೊಡದಿದ್ದರೆ ಶಾಸಕರು ಸುಮ್ಮನಿರುತ್ತಾರಾ? ಕ್ಷೇತ್ರದಲ್ಲಿ ಶಾಸಕರು ಓಡಾಡಲು ಆಗುತ್ತದಾ? ಹಣ ಕೊಡದಿದ್ದರೆ ಅವರ ಶಾಸಕರೇ ಹೊರ ಬರುತ್ತಾರೆ ಎಂದರು.
ಇದನ್ನೂ ಓದಿ-https://suddilive.in/2023/09/30/ನಾಳೆಯಿಂದ-ಕೆಲ-ರೈಲುಗಳ-ವೇಳಾ/
