ರಾಜಕೀಯ ಸುದ್ದಿಗಳು

ಶುಗರ್ ಫ್ಯಾಕ್ಟರಿ ಜಾಗದ ವಿಚಾರದಲ್ಲಿ ಸಂಸದರ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ತುಂಗಭದ್ರ ಶುಗರ್ ಫ್ಯಾಕ್ಟರಿಯ ಜಾಗ ಈಗ ಎಲ್ಲರ ನಿದ್ದೆಗೆಡಿಸಿದೆ. ತುಂಗಭದ್ರ ಶುಗರ್ ಫ್ಯಾಕ್ಟರಿಯನ್ನ ಈ ಮೊದಲು ಸರ್ಕಾರ ಜಾಗವನ್ನ ಲೀಸ್ ಗೆ ನೀಡಿದೆಯಾ ಅಥವಾ ಜಾಗವನ್ನ ದೇವಿಶುಗರ್ ಸಂಸ್ಥೆಯೇ ಖರೀದಿಸಿತ್ತಾ ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿದಿರುವಾಗ ಸಂಸದರ ಸುದ್ದಿಗೋಷ್ಠಿಯೂ ಸಹ ಕುತೂಹಲ ಮೂಡಿಸಿದೆ.

2374 ಎಕರೆ ತುಂಬಭದ್ರ ಸಕ್ಕರೆ ಕಾರ್ಖಾನೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಗವಿದೆ ಎಂಬ ಮಾಹಿತಿ ಲಭ್ಯವಿದೆ. ಆದರೆ ಮಾಹಿತಿಯ ಪ್ರಕಾರ ಸರ್ಕಾರದಿಂದ ಕಾರ್ಖಾನೆ ಖರೀದಿಸಿದ್ದಾ ಅಥವಾ ಲೀಸ್ ಗೆ ಪಡೆದಿದ್ದ ಎಂಬ ಅಂಶ ಮಾತ್ರ ಅಸ್ಪಷ್ಟವಾದ ಮಾಹಿತಿ ಇದೆ. ಈ ವೇಳೆ ಸಂಸದ ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿ ಈ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸರ್ಕಾರವೇ ದೇವಿಶುಗರ್ ಫ್ಯಾಕ್ಟರಿಯಿಂದ ಬಿಟ್ಟುಕೊಡು ವಂತಾಗಬೇಕು ಎಂದಿದ್ದಾರೆ.

ದೇವಿಶುಗರ್ ಫ್ಯಾಕ್ಟರಿಯ ಜಾಗದಲ್ಲಿ ನಡೆಯುತ್ತಿರುವ ಲೇಔಟ್ ನಿರ್ಮಾಣ ಬಂದ್ ಆಗಬೇಕು. ವಸತಿ ಪ್ರದೇಶವನ್ನ ಮತ್ತು ರೈತರ ಉಳುಮೆ ಜಾಗವನ್ನ ಸರ್ಕಾರವೇ ಸಂಸ್ಥೆಯಿಂದ ಕೊಡಿಸಬೇಕೆಂದು ಹೇಳಿದ್ದಾರೆ. ಸಂಸದರ ಮೂರು ಅಂಶದಲ್ಲಿ ಒಂದು ಚುನಾವಣೆಯ ಗಿಮಿಕ್ ಅನಿಸಿದರೂ, ಇನ್ನೆರಡು ಅಂಶದಲ್ಲಿ ಅವರ ನಿಲವನ್ನ ಸ್ವಾಗತಿಸಬೇಕಿದೆ.‌

ಒಂದು ವೇಳೆ ಶುಗರ್ ಫ್ಯಾಕ್ಟರಿಗೆ 2374 ಎಕರೆ ಜಾಗ ಸೇರಿದ್ದರೆ, ವಸತಿ ಹಾಗೂ ರೈತರಿಗೆ ಬಿಟ್ಟುಕೊಡುವ ಅಂಶ ಸ್ವಾಗತಾರ್ಹ. ಲೇಔಟ್ ನಿರ್ಮಾಣಕ್ಕೆ ಬ್ರೇಕ್ ಹಾಕುವ ಅಂಶವೂ ಸ್ವಾಗತಾರ್ಹ. ಆದರೆ ಈ ಜಾಗವನ್ನ ಶುಗರ್ ಫ್ಯಾಕ್ಟರಿ ಸಂಸ್ಥೆ ಜಮೀನಿನ್ನ‌ ಲೀಸ್ ಗೆ ಪಡೆದಿದ್ದರೆ ಸರ್ಕಾರಕ್ಕೆ ಈ ಜಾಗ ಹೋಗಲಿದೆ. ಇದರ ಮಾಹಿತಿ ಇಲ್ಲದೆ ಸುದ್ದಿಗೋಷ್ಠಿ ನಡೆದಿರುವುದು ದುರಂತ.

ಎನವೇ… ಅವರ ಸುದ್ದಿಗೋಷ್ಠಿ ಹೀಗಿದೆ ಇತ್ತೀಚೆಗೆ ತುಂಗಭದ್ರ ಕಾರ್ಖಾನೆಯ ಜಾಗದಲ್ಲಿ ರೈತರ ಉಳುಮೆಗೆ ಆತಂಕಕಾರಿಯಾದ ಬೆಳಣಿಗೆ ನಡೆದಿದೆ. ಈ ವಿಚಾರದಲ್ಲಿ ಬಿಜೆಪಿ ಶಿವಮೊಗ್ಗದ ಅಭಿವೃದ್ಧಿಗಾಗಿ ಸರ್ಕಾರ ರೈತರ, ವಸತಿ ನಿರ್ಮಿಸಿಕೊಂಡ ಜನರ ಪರ ನಿಲ್ಲುವಂತೆ ಸಂಸದ ರಾಘವೇಂದ್ರ ಹೇಳಿದರು.

ಫ್ಯಾಕ್ಟರಿ ಜಾಗದಲ್ಲಿ ಕೆಲವರಿಗೆ ಸಾಗುವಳಿ ಚೀಟಿ ಕೊಡಲಾಗಿದೆ. ಕೆಲವರ ಸಾಗುವಳಿ ಅರ್ಜಿ ನ್ಯಾಯಾಲಯದಲ್ಲಿದೆ. 53,58 ರಲ್ಲಿ ಅರ್ಜಿಸಲ್ಲಿಸಿದವರಿಗೆ ಸಕ್ರಮ ಮಾಡಲು ಬಾಕಿ ಇದೆ. ಹಸೂಡು, ಹಕ್ಕಿಪಿಕ್ಕಿ ಫಾರಂ, ಯರಗನಾಳು, ಮಲವಗೊಪ್ಪ ಮೊದಲಾದ ಜಾಗದಲ್ಲಿ ರೈತರಿಗೆ ಜಾಗ ಬಿಡಬೇಕು ಎಂದು ಒತ್ತಾಯಿಸಿದರು.

1950 ರಲ್ಲಿಕಾರ್ಖಾನೆ ಆರಂಭಗೊಂಡು 1984 ರವರೆಗೆ ಯಶಸ್ವಿಯಾಗಿ ನಡೆದುಕೊಂಡು ಹೋಗಿದೆ. 1994 ರಲ್ಲಿ ಕಾರ್ಖಾನೆಯನ್ನ ಚೆನ್ನೈನ ದೇವಿಶುಗರ್ ಗೆ ನೀಡಲಾಗಿತ್ತು. ಎಸ್ ಬಿಐ ನಲ್ಲಿ ಸಾಲ ಮಾಡಿ ತುಂಬಲಾಗದ ಕಾರಣ 1999 ರಲ್ಲಿ ಲಿಕ್ವಿಡೇಷನ್ ಆಗಿರುತ್ತದೆ ಚೆನ್ನೈ ನ್ಯಾಯಾಲಯ. ಈ ವರ್ಷದ ಮೇ ತಿಂಗಳಲ್ಲಿ ಮದ್ರಾಸ್ ಹೈಕೋರ್ಟ್ ಲಿಕ್ವಿಡೇಷನ್ ನ್ನ ರದ್ದು ಮಾಡಿತ್ತು ಎಂದರು.

ಸಾಲವನ್ನ ಸಂದಾಯ ಮಾಡಿದ ನಂತರ ಸರ್ಕಾರಕ್ಕೆ ಕಂದಯ ಬಾಕಿಯನ್ನ ಸಾಲವನ್ನ ಸಂದಾಯ ಮಾಡಬೇಕು. ಆರ್ಟಿಸಿ ಕಾನೂನನಲ್ಲಿ ಸರ್ಕಾರಕ್ಕೆ ಕಂದಾಯಕ್ಕೆ ಕಟ್ಟಲಾಗದ ಕಾರಣ ಸರ್ಕಾರ ಬಣ ಎಂಟ್ರಿ ಅಂತಾಗಿತ್ತು. ನ್ಯಾಯಾಲಯ ಸರ್ಕಾರಿ ಬಣ ಎಂದು ರದ್ದು ಮಾಡಿ ಹಿಂಪಡೆದ ಕಾರಣ ಲಿಕ್ವಿಡೇಷನ್ ರದ್ದು ಪಡಿಸಿ ದೇವಿಶುಗರ್ ಗೆ ಹಸ್ತಾಂತರಕ್ಕೆ ಸೂಚಿಸಿತ್ತು. ನ್ಯಾಯಾಲಯ ತೀರ್ಪು ಬಂದ ನಂತರ 8/06/23 ಕ್ಕೆ

ಯರಗನಾಳ್ ಗ್ರಾಮದಲ್ಲಿ 1387 ಎಕರೆ, ಕಾರ್ಖಾನೆಗೆ ನೀಡಲಾಗಿತ್ತು 250 ಜನ ರೈತರು ಸಾಗುವಳಿ ಮಾಡ್ತಾ ಇದ್ದಾರೆ. 121 ಎಕರೆ ಹರಿಗೆಯಲ್ಲಿ ಕಾರ್ಖಾನೆಗೆ ಸೇರಿತ್ತು398 ವಾಸದ ಮನೆಗಳಿವೆ. ಉಳಿದವು ಕಂಪನಿ ಹೆಸರಿಲ್ಲಿವೆ. ಗೋವಿನಘಟ್ಟ ಗ್ರಾಮದಲ್ಲಿ 51 ಎಕರೆ ಇದೆ. ಮಲವಗೊಪ್ಪದಲ್ಲಿ 26.33 ಎಕರೆ ಸಂಪೂರ್ಣ ಮನೆಗಳಿವೆ. ಪುಷ್ಕರಣಿ, ಕಾಡಾ ಕಚೇರಿ, ಆರ್ಟಿ ಒ ಇದೆ ವಸತಿ ಮನೆಗಳಿವೆ. ನಿದಿಗೆಯಲ್ಲಿರುವ 18 ಎಕರೆ ವಸತಿ ಪ್ರದೇಶವಿದೆ. ಸದಾಶಿವಪುರದಲ್ಲಿ 621 ಎಕರೆಯಿದ್ದು 171 ರೈತರಿದ್ದಾರೆ. ಇವರು ಸಕ್ರಮ ಜಾಗಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.

ಶುಗರ್ ಫ್ಯಾಕ್ಟರಿ ಇದ್ದಾಗಲೇ ವಸತಿಗಳಿದ್ದವು. 2374 ಎಕರೆ ಜಾಗದಲ್ಲಿ 25 ವರ್ಷಕ್ಕಿಂತ ಹೆಚ್ಚು ಜನ ವಸತಿ ಮಾಡಿಕೊಂಡಿದ್ದಾರೆ. ನ್ಯಾಯಾಲಯವು ವಸತಿ ಜಾಗದಲ್ಲಿ ಸಹ 25 ವರ್ಷದಿಂದ ಬದುಕುತ್ತಿದ್ದಾರೆ. ಆ ಜಾಗ ಅವರಿಗೆ ಬಿಡಬೇಕು ಎಂಬ ಆದೇಶವಿದೆ. ತರಗನಾಳು ಗ್ರಾಮ, ನಿದಿಗೆ ಯರಗನಾಳು ಹಸೂಡಿ ಫಾರಂ, ಮಲವಗೊಪ್ಪ ಮೊದಲಾದ ಫ್ಯಾಕ್ಟರಿ ಜಾಗದಲ್ಲಿ ಲೇ ಔಟ್ ಅಪ್ರೂವಲ್ ಇದೆ ಈ ಜಾಗವನ್ನ ಸರ್ಕಾರ ಉಳಿಸಿಕೊಂಡು ಅಭಿವೃದ್ಧಿಗೆ ಜಾಗ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/5433

Related Articles

Leave a Reply

Your email address will not be published. Required fields are marked *

Back to top button