ರಾಜಕೀಯ ಸುದ್ದಿಗಳು

ಯುವನಿಧಿ ಕಾರ್ಯಕ್ರಮಕ್ಕೆ ತಯಾರಿ ಜೋರಿದೆ-ಸುಂದರೇಶ್

ಸುದ್ದಿಲೈವ್/ಶಿವಮೊಗ್ಗ

ಯುವನಿಧಿ ಗ್ಯಾರಂಟಿಯನ್ನ ಜ.12 ರಂದು ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಯೋಜನೆಗೆ ಹಣಹಾಕುವ ಕಾರಗಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, 30 ಸಾವಿರ ಪದವೀಧರರು ನೋಂದಣೆಯಾಗಿದ್ದಾರೆ. 6 ತಿಂಗಳು ಹಿಂದೆ ನೋಂದಣಿಯಾಗಿದ್ದಾರೆ. 1 ರಿಂದ 1-50 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದನ್ನ 8 ತಿಂಗಳಲ್ಲಿ ನಾಲ್ಕು ಗ್ಯಾರೆಂಟಿಗೆ ಚಾಲನೆ ನೀಡಲಾಗಿತ್ತು. ನಾಲ್ಕು ಗ್ಯಾರೆಂಟಿಯಲ್ಲಿ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿಯಲ್ಲಿ 3 ಲಕ್ಷದ 55 ಸಾವಿರ 3 ಲಕ್ಷಕ್ಕೂ ಹೆಚ್ಚು ಕೆಎಸ್ ಆರ್ ಟಿಸಿ ಯಲ್ಲಿ ಮಹಿಳೆಯರು ಓಡಾಡುವುದರಿಂದ ಲಾಭದಾಯಕವಾಗಿದೆ ಎಂದರು.

ಬಿಲ್ಕಿಸ್ ಭಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಗುಜರಾತ್ ಸರ್ಕಾರದ ನಿರ್ಣಯವನ್ನ ತಿರಸ್ಕರಿಸಿ ಆರೋಪಿಗಳಿಗೆ ಮತ್ತೆ ಜೈಲ್ ಗೆ ಸೇರುವಂತೆ ತೀರ್ಪು ಮಾಡಿದೆ. ಯುಪಿಯಲ್ಲಿ ನಡೆದ ಅತ್ಯಾಚಾರದಲ್ಲಿ ಬಹುತೇಕರು ಬಿಜೆಪಿ ಶಾಸಕರು ಮತ್ತು ಸಂಸದರು ಭಾಗೊಯಾಗಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಯೋಗೀಶ್ ಅವರು ಕ್ಲಾಸ್ ರೂಂಗೆ ಹೋಗಿ ಕರೆದಿರುವುದನ್ನ ಬಿಜೆಪಿ ಆಕ್ಷೇಪಿಸಿದೆ. ಇದರ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದ ಅಧ್ಯಕ್ಷರು ಮೋದಿಯವರು ವಿಮಾನ ನಿಲ್ದಾಣ ಉದ್ಘಾಟನೆಗೆ ವಿದ್ಯಾರ್ಥಿಗಳನ್ನ ಪಾಲ್ಗೊಂಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು‌.

ಇದನ್ನೂ ಓದಿ-https://suddilive.in/archives/6433

Related Articles

Leave a Reply

Your email address will not be published. Required fields are marked *

Back to top button