ಸ್ಥಳೀಯ ಸುದ್ದಿಗಳು

ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ ಪ್ರಕರಣದಲ್ಲಿ ಮಹಜರು ನಡೆಸದೆ ಪೊಲೀಸರಿಂದ ಕೌಂಟರ್ ಪ್ರಕರಣ ದಾಖಲು-ಬಿವೈಆರ್ ಆರೋಪ

ಸುದ್ದಿಲೈವ್/ಶಿವಮೊಗ್ಗ

ಚನ್ನಗಿರಿ ತಾಲೂಕಿನಲ್ಲಿ ರಾಮನವಮಿ ದಿನ ಪಾನಕ ಹಂಚುವಾಗ ನಡೆದ ಗಲಭೆಯಲ್ಲಿ ಚಾಕು ಇರಿತಕ್ಕೆ ಒಳಗಾದ ಗೋಪಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ಗೋಪಿಯ ಮೇಲೂ 307 ಪ್ರಕರಣ ದಾಖಲಾಗಿದೆ. ಗೋಪಿ ಸಧ್ಯಕ್ಕೆ ಬಂಧನದ ಭೀತಿಯಲ್ಲಿದ್ದಾನೆ. ಪೊಲೀಸರು ಯಾವಾಗ‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡ್ತೀರಿ ಎಂದು ಗೋಪಿ ತಾಯಿಯನ್ನ ಕೇಳುತ್ತಿರುವುದಾಗಿ ತಿಳಿದು ಬಙದಿದೆ. ಈ ವೇಳೆ ಸಂಸದ ರಾಘವೇಂದ್ರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಚನ್ನಗಿರಿಯ ನಲ್ಲೂರಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ದಿನದಂದು ಪಾನಕ ಮತ್ತು ಕೋಸುಂಬರಿ ಹಂಚುವಾಗ ಗೋಪಿ, ಮತ್ತೊಬ್ಬರಿಗೆ ಅನ್ಯಕೋಮಿನ ಐದು ಜನ ಯುವಕರು ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಎದುರು ಮಸೀದಿ ಇರುವುದರಿಂದ ಪಾನಕ ಕೋಸಂಬರಿ ಹಂಚದಂತೆ ಹಲ್ಲೆ ಮಾಡಲು ಬಂದ ಯುವಕರ ಆಗ್ರಹವಾಗಿತ್ತು ಎಂದು ಗೋಪಿ ಹೇಳಿದ್ದಾನೆ. ಹಲ್ಲೆಯಲ್ಲಿ ಗೋಪಿಗೆ ಚಾಕುವಿನಿಂದ ಇರಿದಿದ್ದಾರೆ.

ಚಾಕು ಇರಿತಕ್ಕೆ ಒಳಗಾದ ಗೋಪಿ ಮೆಗ್ಗಾನ್ ಗೆ ದಾಖಲಾಗಿದ್ದಾನೆ. ಇಂದು ಸಂಸದ ರಾಘವೇಂದ್ರ ಮತ್ತು ಶಾಸಕ ಚೆನ್ನಬಸಪ್ಪ ಭೇಟಿ ನೀಡಿದ್ದಾರೆ. ಗೋಪಿ ತಾಯಿ ಹಲ್ಲೆಗೊಳಗಾದ ನನ್ನ ಮಗನ ವಿರುದ್ಧವೇ ದೂರು ಅಖಲಾಗಿದೆ ಎಂದು ಅಂಗಲಾಚಿದ್ದಾರೆ. ಐಜಿಗೆ ಫೊನ್ ಮಾಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ. ಹಲ್ಲೆಗೊಳಗಾದ ಗೋಪಿ ಬಜರಂಗದಳದ ಕಾರ್ಯಕರ್ತನಾಗಿದ್ದಾನೆ.

ನಂತರ ಮಾತನಾಡಿರುವ ಸಂಸದರು, ಗೋಪಿಯ ರಕ್ತದ ಬಟ್ಟೆಗಳನ್ನ ಮೆಗ್ಗಾನ್ ನಲ್ಲಿ ಇಟ್ಟುಕೊಂಡಿದ್ದಾರೆ. ಮಹಜರ್ ಕೆಲಸಗಳೇ ನಡೆದಿಲ್ಲ. ಮತ್ತು ಗೋಪಿಯ ಹೇಳಿಕೆಯನ್ನೂ ಪೊಲೀಸರು ಪಡೆದಿಲ್ಲ. ಆದರೆ ಕೌಂಟರ್ ಪ್ರಕರಣ ದಾಖಲಾಗಿದೆ. ಅಲ್ಪಸಂಖ್ಯಾತರ ತೃಪ್ತಿಪಡಿಸುವ ಕೆಲಸ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದೆ.

ಇಂತಹ ಘಟನೆ ಬಗ್ಗೆ ಕಾಂಗ್ರೆಸ್ ತನ್ನ‌ ಮೃದು ಧೋರಣೆ ಮುಂದುವರೆದರೆ ಜನರೇ ತಕ್ಕ ಪಾಠಕಲಿಸುತ್ತಾರೆ ಎಂದು ದೂರಿದರು.‌ ನಂತರ ನಿನ್ನೆ ಹರಮಘಟ್ಟದಲ್ಲಿ ಸಿಡಿಲಿನಲ್ಲಿ ಕೈಕಾಲು ಕಳೆದುಕೊಂಡ ರುದ್ರೇಶ್ ಅವರ ಆರೋಗ್ಯವನ್ನೂ ಸಂಸದರು ಮತ್ತು‌ ಶಾಸಕರು  ವಿಚಾರಿಸಿದರು.‌

ಇದನ್ನೂ ಓದಿ-https://suddilive.in/archives/13292

Related Articles

Leave a Reply

Your email address will not be published. Required fields are marked *

Back to top button