ಸ್ಥಳೀಯ ಸುದ್ದಿಗಳು

ಮುಸ್ಲೀಂ ಓಲೈಕೆ ರಾಜಕಾರಣದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ರಜೆ ಘೋಷಿಸಿಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಮುಸ್ಲೀಂರ ಓಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಅಯೋಧ್ಯಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನಾ ದಿನದಂದು ರಜೆ ಘೋಷಿಸಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೋದಿ ಅವರು ನಾಳೆ ಅರ್ಧ ದಿನ ಕೇಂದ್ರ ಸರಕಾರದ ನೌಕರರರಿಗೆ ರಜೆ ಘೋಷಣೆ ಮಾಡಿದ್ದಾರೆ. ಅನೇಕ ರಾಜ್ಯ ಸರಕಾರಗಳು ರಜೆ ಘೋಷಣೆ ಮಾಡಿವೆ. ನಾಳೆಯ ಆಚರಣೆಯನ್ನು ಸಂಭ್ರಮಪಡುವ ದಿನವಾಗಿದೆ ಎಂದರು.

ಹೀಗಾಗಿಯೇ ಅನೇಕ ರಾಜ್ಯ ಸರಕಾರಗಳು ರಜೆ ಘೋಷಣೆ ಮಾಡಿವೆ. ಸಿದ್ದರಾಮಯ್ಯ ರಜೆ ಘೋಷಣೆ ಮಾಡಲ್ಲ ಅಂದಿದ್ದಾರೆ. ಪ್ರಭು ಶ್ರೀರಾಮ ಚಂದ್ರನ ಪ್ರತಿಷ್ಠಾಪನೆ ದಿನ ಅಜರಾಮರ ದಿನವಾಗಿ ಉಳಿಯುತ್ತದೆ. ಅದೇ ರೀತಿ ಸಿದ್ದರಾಮಯ್ಯ ಹೆಸರು‌ ಕಳಂಕಿತವಾಗಿ ಉಳಿಯುತ್ತದೆ ಎಂದು ಆರೋಪಿಸಿದರು.

ರಾಮ ಭಕ್ತರು ಕೋಟಿ ಕೋಟಿ ಸಂಖ್ಯೆಯಲ್ಲಿ ವೀಕ್ಷಣೆಗೆ ಹೋಗ್ತಿದ್ದಾರೆ. ಅಲ್ಲಿ ಹೋಗಲಾಗದವರು ಟಿವಿಯಲ್ಲಿ ನೋಡ್ತಿದ್ದಾರೆ. ನೌಕರರು ಟಿವಿಯಲ್ಲಿ ನೋಡಲು ಆಗಲ್ಲ. ಈಗಾಗಿ ರಜೆ ಅಪೇಕ್ಷೆ ಪಟ್ಟಿದ್ದರು. ಸಿದ್ದರಾಮಯ್ಯ ಅವರು ರಜೆ ಬಗ್ಗೆ ಯಾವುದೇ ಪತ್ರ ಬಂದಿಲ್ಲ, ಯಾರು ಕೇಳಿಲ್ಲ ಅಂದಿದ್ದರು. ನಾನು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದೆ. ಕೋಟಾ ಶ್ರೀನಿವಾಸ್ ಪೂಜಾರಿ ಪತ್ರ ಬರೆದಿದ್ದರು. ಆದರೂ ರಜೆ ಘೋಷಣೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು.

ಇದು ಹಿಂದು ವಿರೋಧಿ ನೀತಿ. ಇತಿಹಾಸದಲ್ಲಿ ಕಳ ನಾಯಕರಾಗಿ ಸಿದ್ದರಾಮಯ್ಯ ಉಳಿಯುತ್ತಾರೆ. ಹಠಮಾರಿ ಸಿದ್ದರಾಮಯ್ಯ ಅನ್ನುವುದನ್ನು ತಪ್ಪಿಸಿ ನಾನು ಸಹ ಶ್ರೀರಾಮ ಭಕ್ತ ಅಂತಾ ಭಾವಿಸಿ ರಜೆ ಘೋಷಣೆ ಮಾಡಿ. ಮುಸ್ಲಿಂರು ಸಂತೃಪ್ತಿಗೊಳಿಸಲು ನಿಮ್ಮ ಭಾವನೆ ಇದೆ. ಇನ್ನೂ ಸಮಯ ಇದೆ ಈಗಲಾದರೂ ರಜೆ ಘೋಷಣೆ ಮಾಡಿ ಎಂದು ಆಗ್ರಹಿಸಿದರು.

ರಾಮ ಭಕ್ತರ ಶಾಪ ತಟ್ಟಿ ನಿಮ್ಮ ಸರಕಾರ ಹೋಗುತ್ತದೆ. ಮುಂದಿನ ದಿನಗಳಲ್ಲಿ ರಾಮ ಭಕ್ತರ ಶಾಪ ಅನುಭವಿಸುತ್ತೀರಾ. ಮುಸ್ಲಿಂರ ಮತಬ್ಯಾಂಕ್  ಹೋಗುತ್ತದೆ ಎಂಬ ಭಯದಿಂದ ರಜೆ ಘೋಷಣೆ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಅಂತಾ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿದ್ದಾರೆ.

ಲೋಕಸಭೆ ಚುನಾವಣೆ ನಂತರ ಯಾವುದೇ ಕಾರಣಕ್ಕು ಈ ಸರಕಾರ ಇರಲ್ಲ, ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲ್ಲ. ಸಿದ್ದರಾಮಯ್ಯ ಸರಕಾರಕ್ಕೆ ರಾಮನ ಶಾಪ ತಟ್ಟುತ್ತದೆ ಎಂದು ಶಾಪಹಾಕಿದರು.

ಇದನ್ನೂ ಓದಿ-https://suddilive.in/archives/7360

Related Articles

Leave a Reply

Your email address will not be published. Required fields are marked *

Back to top button