ಸಿಟಿ ಸೆಂಟ್ರಲ್ ಮಾಲ್ ನಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ-ನಾಮಫಲಕ ಬದಲಾಗದಿದ್ದರೆ ಮಸಿ ಬಳಿಯುವ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಶಿವಪ್ಪ ನಾಯಕ ಮಾರ್ಕೆಟ್ ಬ್ಯಾರಿ ಮಾಲ್ ನಲ್ಲಿರುವ ವಿವಿಧ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜುನಾಥ್ ಪಿ ನೇತೃತ್ವದಲ್ಲಿ ಪ್ತಿಭಟನೆ ನಡೆಸಿ ಮ್ಯಾನೇಜೃ ಗೆ ಮನವಿ ಸಲ್ಲಿಸಿತು.
ಗಾಂಧಿ ಬಜಾರ್ ನ ಶಿವಪ್ಪ ನಾಯಕ ಪ್ರತಿಮೆಯಿಂದ ಹೊರಟ ಮೆರವಣಿಗೆ ಮಾಲ್ ತಲುಪಿ ಧರಣಿ ನಡೆಸಲಾಯಿತು. ಕನ್ನಡ ನಾಮಫಲಕ ಬಳಕೆ ಮಾಡದೆ ಇರುವ ಸಂಬಂಧ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಅಂಗಡಿ ಗಳು ಕನ್ನಡ ನಾಮಫಲಕ ಅಳವಡಿಸಲು ಸೂಚಿಸಿದರು ಸಹ ಇದುವರೆಗೂ ಯಾಕೆ ಬದಲಾಯಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು
ಬ್ಯಾರಿಸ್ ಮಾಲ್ ಗೆ ನ.1 ರಂದು ಭೇಟಿ ನೀಡಿ ಕನ್ನಡದಲ್ಲಿಯೆ ನಾಮಫಲಕ ಇರಬೇಕೆಂದು ಮನವಿ ಮಾಡಿಕೊಂಡರೂ ನಿರ್ಲಕ್ಷಿಸಲಾಗಿದೆ. ಪಾಲಿಕೆ ಸಹ ಕನ್ನಡ ಬಳಕೆಯ ನಾಮಫಲಕ ಇಲ್ಲದಿದ್ದರೆ ಪರವಾನಗಿ ರದ್ದು ಪಡಿಸುವುದಾಗಿ ನಿಯಮವಿದ್ದರೂ ಸಹ ಉದ್ಧಟತನ ತೋರಲಾಗಿದೆ ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಬ್ಯಾರಿ ಮಾಲ್ ನ ಮ್ಯಾನೇಜರ್ ಪರವಾಗಿ ಮನವಿ ಸ್ವೀಕರಿಸಿದ ಸಿಬ್ಬಂದಿಗಳು ಬ್ಯಾರಿ ಮಾಲ್ ನಲ್ಲಿ 52 ಅಂಗಡಿಗಳಿದ್ದು 60% ಕನ್ನಡ ನಾಮಫಲಕ ಬದಲಾವಣೆಗೆ ಮುಂದಾಗಿವೆ. ಇನ್ನು 15 ದಿನಗಳಲ್ಲಿ ಎಲ್ಲಾ ಅಂಗಡಿಗಳು ಕನ್ನಡ ನಾಮಫಲಕ ಅಳವಡಿಸಿಕೊಳ್ಳಲಿವೆ ಎಂದು ಭರವಸೆ ನೀಡಿದರು. ಒಂದು ವೇಳೆ ನಾಮ ಫಲಕಗಳು ಕನ್ನಡ ಭಾಷೆಗೆ ಬದಲಾಗದಿದ್ದಲ್ಲಿ ಕರವೇ ಸಂಘಟನೆ ಅಳವಡಿಸಿರುವ ಮಸಿಬಳಿಯುವ ಕಾರ್ಯಕ್ಕೆ ಇಳಿಯಲಿವೆ ಎಂದು ಎಚ್ಚರಿಸಲಾಯಿತು.
ಪ್ರತಿಭಟನೆಯಲ್ಲಿ ಕರವೇಯ ವಿನಯ್, ಧನಂಜಯ್, ಸುನೀಲ್ ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/3216
