ಸ್ಥಳೀಯ ಸುದ್ದಿಗಳು

ಮರು ಟೆಂಡರ್ ಗೆ ಆಗ್ರಹ

ಸುದ್ದಿಲೈವ್/ತೀರ್ಥಹಳ್ಳಿ

ಪುರಪಂಚಾಯಿತಿ ಹಳೇ ಕಟ್ಟಡವನ್ನ ನೆಲ ಸಮ ಮಾಡಿ ವಸ್ತುಗಳನ್ನ ಪಡೆಯಲು ಟೆಂಡರ್ ಪ್ರಕ್ರಿಯೆ ನಡೆದಿದ್ದು ಈ ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರಿ ಬೊಕ್ಕಸಕ್ಕೆ ದೋಖಾ ಉಂಟಾಗಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

ಪುರಪಂಚಾಯಿತಿಯ  ಸರ್ಕಾರಿ ಕಟ್ಟದದ ಸರ್ಕಾರಿ ಹರಾಜೇ 5 ಲಕ್ಷವಿದ್ದು, ಈ ಟೆಂಡರ್ ಗಳು ಕನಿಷ್ಠವನ್ನ ಮೂರು ಲಕ್ಷದವರೆಗೂ ನಿಲ್ಲಬೇಕಾದ್ದು 1 ಲಕ್ಷದ 5 ಸಾವಿರಕ್ಕೆ ಮಾತ್ರ ನಿಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಮರು ಟೆಂಡರ್ ಆಗಬೇಕೆಂಬುದು ಸ್ಥಳೀಯರ ಆಕ್ಷೇಪಣೆಯಾಗಿದೆ.

ಪುರಪಂಚಾಯಿತಿ ಹಳೇ ಕಟ್ಟಡವನ್ನ‌ ನೆಲ ಸಮ ಮಾಡಲು ಇಷ್ಟು ಕಡಿಮೆ ಟೆಂಡರ್ ಗೆ ನಿಂತಿರುವುದು ರಾಜ್ಯದ ಬೊಕ್ಕಸಕ್ಕೆ ಕನ್ನಹಾಕಿದಂತಾಗಿದೆ. ಇದರ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಈ ಹಿಂದೆ ಬಸ್ ನಿಲ್ದಾಣದ ಕ್ಯಾಂಟೀನ್ ಟೆಂಡರ್ ಸಹ ಹೀಗೆಯಾಗಿ ಸರ್ಕಾರದಬೊಕ್ಕಸಕ್ಕೆ ದೋಖವಾಗಿತ್ತು.

ಅದರಂತೆ ಈ ಬಾರಿಯ ಪುರಪಂಚಾಯಿತಿ ಕಟ್ಟಡದ ಟೆಂಡರ್ ಸಹ ಸರ್ಕಾರಿ ಬೊಕ್ಕಸಕ್ಕೆ ಕೊರತೆಯುಂಟಾಗಿದೆ ಎಂಬುದು ಸ್ಥಳೀಯರ ಅಳಲು. ಆನ್ ಲೈನ್ ಟೆಂಡರ್ ಆಗಿರುವುದರಿಂದ  ಹುಬ್ಬಳ್ಳಿ ಧಾರವಾಡ, ಮೊದಲಾದ ರಾಜ್ಯದ ವಿವಿಧ ಮೂಲೆಗಳಿಂದ 52 ಜನ ಟೆಂಡರ್ ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/1576

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373