ಸ್ಥಳೀಯ ಸುದ್ದಿಗಳು

ಬಿಜೆಪಿ ಸರ್ಕಾರ ಹಫ್ತಾ ವಸೂಲಿ ಸರ್ಕಾರ-ಹನುಮಂತಯ್ಯ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ಪ್ರನಾಳಿಕೆ ಬಿಡುಗಡೆಯಾಗಿದೆ. ಎರಡೂ ಪ್ರನಾಳಿಕೆಯನ್ನ ನೋಡಿ ಮತ ಹಾಕುವುದು ಕಷ್ಟವಾದರೂ ಕಾಂಗ್ರೆಸ್ ಬದ್ಧತೆಯಿಂದ ಬಿಡುಗಡೆ ಮಾಡಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹನುಮಂತಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ಘೋಷಿಸಿ ಐದು ಗ್ಯಾರೆಂಟಿಯನ್ನ ಜಾರಿಗೊಳಿಸಿತು. ಇದು ಸಾಧ್ಯವಿಲ್ಲ ಎನ್ನುತ್ತಿದ್ದ ಬಿಜೆಪಿ ನಂತರ ಕೆಲವರಿಗೆ ಗ್ಯಾರೆಂಟಿ ತಲುಪುತ್ತಿಲ್ಲ ಎಂದು ತಗಾದೆ ತೆಗೆದಿದೆ.

ಮಹಾಲಕ್ಷ್ಮಿ ಯೋಜನೆಯಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷ ಎಂದಾಗ ಈಗ 55 ಕೋಟಿಗೆ 55 ಲಕ್ಷ ಕೋಟಿ ಬೇಕು. ಸಾಧ್ಯವಿಲ್ಲ ಎನ್ನುತ್ತಿದೆ ಎಂದು ತಗಾದೆ ತೆಗೆದಿದೆ. ನಗರದ ಉದ್ಯೋಗದ ಭರವಸೆ ನೀಡಿದ್ದೇವೆ. ಮೋದಿ ಅವರ ರೈತ ಬಗ್ಗೆ ಪ್ರತಿ ದಿನ‌ ಜಾಹೀರಾತು ಬಿಡುಗಡೆ ಬರ್ತಾ ಇದೆ. ಎಂಎಸ್ಪಿ ಬೆಲೆ ಕಾನೂನುಗೊಳಿಸುತ್ತಿಲ್ಲ. ಆದರೆ ರೈತರು ಸುಖವಾಗಿದ್ದಾರೆ ಎಂಬ ಜಾಹೀರಾತು ಮಾತ್ರ ಬರ್ತಾ ಇದೆ.

700 ರೈತರು ದೇಶದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಸಂಸತ್ ನಲ್ಲಿ ನಮನ ಮಾಡಲಿಲ್ಲ. ಕ್ರೌರ್ಯದ ರೂಪದಲ್ಲಿ ನಡೆದುಕೊಂಡಿದೆ. ಬಿಜೆಪಿಯ ಪ್ರನಾಳಿಕೆಯಲ್ಲಿ ಜನರ ಜೀವನಕ್ಕೆ ಬೇಕಾದ ಬದ್ಧತೆ ತೋರಿಲ್ಲ. ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕೆಳಮಟ್ಟಕ್ಕೆ ಹೋಗಿ ಮಾತನಾಡುತ್ತಿದ್ದಾರೆ ಎಂದರು.

ವಿಶ್ವದ ದೊಡ್ಡ ಆರ್ಥಿಕ ಶಕ್ತಿ ಮಾಡುವುದಾಗಿ ಹೇಳ್ತಾ ಇದ್ದಾರೆ. ಆದರೆ ಎಲ್ಲಾ ಅರ್ಥ ಶಾಸ್ತ್ರದ ತಜ್ಞರ ಪ್ರಕಾರ 140 ಕೋಟಿ ಬಜೆಟ್ ದೇಶದ ದೊಡ್ಡದ ಆರ್ಥಿಕತೆಯಾಗುತ್ತದೆ. ಇದಕ್ಕೆ ನಮ್ಮ ಕಾಣಿಕೆಯಿದೆ. ಆದರೆ ಮೋದಿ 10 ವರ್ಷದಲ್ಲಿ ಆಗಿದೆ ಎಂದು ದೂರಿದರು. ಶೋಷಿತ ವರ್ಗದ ವಿರೋಧಿ ಸರ್ಕಾರವಾಗಿದೆ.

ಆದಾಯ ಅಸಮಾನತೆ ವರದಿಯಾಗಿದೆ. ದೇಶದ ಜನ 40% ಸಂಪನ್ಮೂಲ ತಮ್ಮದಾಗಿಸಿಕೊಂಡಿದ್ದ ಶೇ.10% ಜನರ ಆಸ್ತಿ 60% ಇದೆ. ಮಿಡ್ಲುಕ್ಲಾಸ್ ಜನ‌ ಮೋದಿ ಮಾತ್ರ ದೇಶದ ಪರವಾಗಿ ನಿಂತಿದ್ದಾರೆ ಎಂದು ನಂಬಿದ್ದಾರೆ. ಆದರೆ ಮೋದಿ ಎಲ್ಲರ ಅಭಿವೃದ್ಧಿಗೆ ಬೆಂಬಲಿತರಾಗುತ್ತಿಲ್ಲ ಎಂದು ದೂರಿದರು. ಬಹುಸಂಖ್ಯಾತರ ಪರವಾಗಿ ಹೇಳಿದ್ದಾರೆ.

ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಒಂದಾಗಿ ನಡೆಯಬೇಕು. ಸಂವಿದಾನದ ಸ್ವಯತ್ತತೆ ಅಂಗವನ್ನ ಒಡೆದುಹಾಕಿದ್ದಾರೆ. ಬಿಜೆಪಿಯ ಎಲೆಕ್ಟ್ರೋಲ್ ಬಾಂಡ್ಸ್ ವಿಶ್ವದ ಹಗರವದು. ಬಿಜೆಪಿಗೆ ಬಂದ ಅನುದಾನದಲ್ಲಿ ಶೇ.10% ಬೇರೆ ಸಂಸ್ಥೆಗೆ ಬಂದಿಲ್ಲ. ಯಾವ ಸಂಸ್ಥಡಗಳ ಮೇಲೆ ದಾಳಿಯಾಗಿವೆ ಅವರೆಲ್ಲ 330 ಕೋಟಿ ಹಣ ಕೊಟ್ಟಿದ್ದಾರೆ. ಯಾರು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ ಅವರೆಲ್ಲ ಬಿಜೆಪಿಗೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣ ಕೊಟ್ಟಿದ್ದಾರೆ. ಇದು ಪರೋಕ್ಷವಾದ ಭ್ರಷ್ಠಾಚಾರ ಎಂದು ದೂರಿದರು.

ಬಿಜೆಪಿ ಹಫ್ತಾ ವಸೂಲಿ ಸರ್ಕಾರವಾಗಿದೆ. ಕಾಂಗ್ರೆಸ್ ನ ಹಣ ಫ್ರೀಜ್ ಆಗಿದೆ. ಮುಖ್ಯಮಂತ್ರಿಗಳು ಭ್ರಷ್ಠಾಚಾರದ ಆರೋಪದ ಅಡಿಯಲ್ಲಿ ಜೈಲಿಗೆ ತಳ್ಳಿ ಚುನಾವಣೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ಮುಕ್ತವಾದ ಆಡಳಿತ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/13263

Related Articles

Leave a Reply

Your email address will not be published. Required fields are marked *

Back to top button