ಸ್ಥಳೀಯ ಸುದ್ದಿಗಳು

ದರೋಡೆ ಸೆಕ್ಷನ್ ಹಾಕದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ-ಹಾರನಹಳ್ಳಿ ಗ್ರಾಮಸ್ಥರ ಆರೋಪ

ಸುದ್ದಿಲೈವ್/ಶಿವಮೊಗ್ಗ

ಹಾಗರಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾರನಹಳ್ಳಿಯ ಶ್ರೀ ರಾಮಲಿಂಗೇಶ್ವರ ಮಠದಲ್ಲಿ  ಹಗಲು ದರೋಡೆ ನಡೆದಿದ್ದು ದರೋಡೆ ಪ್ರಕರಣ ದಾಖಲಿಸಲು ಪೊಲೀಸರು ಹಿಙದೇಟು ಹಾಕುತ್ತಿರುಅಗಿ ಜಗದೀಶ್ವರಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ.

ರಾಮಲಿಂಗೇಶ್ವರ ಮಠದಲ್ಲಿ  25/11 ರಂದು ಮಠಕ್ಕೆ ಬಂದವರು ಹಲ್ಲೆ ನಡೆಸಿ ದರೋಡೆ ನಡೆದಿದೆ. ಮಠಕ್ಕೆ ಸೂಕ್ತ ರಕ್ಷಣೆ ನೀಡಿ ಆರೋಪಿಗಳನ್ನ ಬಂಧಿಸಬೇಕು. ಈ ದರೋಡೆ ಮೂರನೇ ಬಾರಿಗೆ ನಡೆದಿದೆ ಎಂದು ದೂರಿದರು.

ಕಾರ್ಯದರ್ಶಿ ಮಾತನಾಡಿ ರುದ್ರೇಶ್ ಎಂ.ಜಿ, ನ. 25 ರಂದು ನಡೆದ  ಹಲ್ಲೆ ಘಟನೆ ನಡೆದಿದ್ದರೂ ಸೂಕ್ತ ಸೆಕ್ಷನ್ ದಾಖಲಾಗಿಲ್ಲ. ಹಗಲೊತ್ತು ಮಠದ ಒಳಗೆ ಪ್ರವೇಶಿಸಿ ಗಾದ್ರೆಜ್ ಬೀರು,  80 ಸಾವಿರ ನಗದು,  800 ಗ್ರಾಂವಚಿನ್ನಾಭರಣ ಹಾಗೂ  ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿ ಲೂಟಿ ಮಾಡಿಕೊಂಡು ಹೋಗಿದ್ದಾರೆ. ಲೂಟಿ ಪ್ರಕರಣ ನಡೆದರೂ ಪೊಲೀಸರು ಲೂಟಿ ಸೆಕ್ಷನ್  ಜಾರಿ ಮಾಡದೆ ಇರುವುದಾಗಿ ಆರೋಪಿಸಿದರು

ಮೂಲಗದ್ದಿಗೆ ಧ್ವಂಸ ಆಗಿದೆ. ರಾಮಲಿಂಗೇಶ್ವರ ದೇವರನ್ನವಿಕೃತ ಗೊಳಿಸಲಾಗಿದೆ. ಶಿವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತ್ರ ಅಸಲಿಸ್ವಾಮಿಗಳಿದ್ದಾರೆ ಇತರೆ 8 ಜನ ನಕಲಿ ಸ್ವಾಮಿಗಳಿದ್ದಾರೆ. ಆಸ್ತಿ ಲಪ್ಟಾಯಿಸಲು ಈ ಕೃತ್ಯ ನಡೆದಿದೆ ಎಂದರು. ಸ್ವಾಮೀಜಿಗಳು ಇರಲಿಲ್ಲ. ಸ್ವಾಮೀಜಿಗಳು ಇದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ರಾಜಕಾರಣಿಗಳ ಕುಮ್ಮಕ್ಕಿದೆ ಎನ್ನಲಾಗದು. ಇದು ಮಠದ ಆಸ್ತಿ ಕಬಳಿಕೆಯವರ ಸಂಚು ಎಂದು ದೂರಿದರು.

ಸುಕ್ತ ಕ್ರಮ ಕೈಗೊಳ್ಳದಿದ್ದರೆ ಹಾರನಹಳ್ಳಿಯಿಂದ ಶಿವಮೊಗ್ಗದ ಎಸ್ಪಿ ಕಚೇರಿಗೆ ಬಂದು ಕಚೇರಿ ಮುತ್ತಿಗೆ ಹಾಕುವುದಾಗಿ ರುದ್ರೇಶ್ ಎಚ್ಚರಿಸಿದರು. ದುಗ್ಗೋಜಿ ರಾವ್ ಗ್ರಾಪಂ ಅಧ್ಯ್ಷ ರಮೇಶ್, ಗ್ರಾಪಂ ಸದಸ್ಯ ನಾಗರಾಜ್, ಮಾಜಿ ಸದಸ್ಯ ಶಿವಕುಮಾರ್, ಮಹೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4242

Related Articles

Leave a Reply

Your email address will not be published. Required fields are marked *

Back to top button