ಬಸ್ ಬರುವ ಹಾಗಿಲ್ಲ ಸೀಟಿಗಾಗಿ ಮುಗಿಬೀಳುತ್ತಿರುವ ಪ್ರಯಾಣಿಕರು

ಸುದ್ದಿಲೈವ್/ಶಿವಮೊಗ್ಗ

ಸಾಲು ಸಾಲು ಹಬ್ಬ, ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಶಕ್ತಿ ಯೋಜನೆ ಮತ್ತು ಹಬ್ಬ ಮುಗಿದ ಮರುದಿನದ ಹಿನ್ನಲೆಯಲ್ಲಿ ಬಸ್ ಗಾಗಿ ಕಾಯುವರ ಸಂಖ್ಯೆ ಅಧಿಕವಾಗಿದೆ. ಬಸ್ ಬರುತ್ತಿದ್ದಂತೆ ಮುಗಿ ಬೀಳಲಾಗುತ್ತಿದೆ. ವೀಕೆಂಡ್ ಮತ್ತು ಆಯುಧಪೂಜ, ವಿಜಯ ದಶಮಿಗೆ ಹಬ್ಬದ ರಜೆ ನೀಡಲಾಗಿದೆ. ಇದರಿಂದ ನಾಲ್ಕು ದಿನಗಳರಜೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬಸ್ ಸ್ಟ್ಯಾಂಡ್ ಫುಲ್ ಆಗಿದೆ.
ಆದರೆ ಈ ಕುರಿತು ಕೆಎಸ್ ಆರ್ ಟಿ ಸಿ ಅಧಿಕಾರಿಗಳ ಪ್ರತಿಕ್ರಿಯೆ ಬೇರೆ ಇದೆ. ಹಬ್ಬ ಮುಗಿದ ದಿನವೇ ಹೆಚ್ಚಿನ ಪ್ರಯಾಣಿಕರು ನಿನ್ನೆನೇ ಪ್ರಯಾಣಿಸಿದ್ದಾರೆ. ನಿನ್ಬೆ 60 ಹೆಚ್ಚುವರಿ ಬಸ್ ಗಳನ್ನ ಬಿಡಲಾಗಿತ್ತು. ಆದರೆ ಇಂದು 30 ಹೆಚ್ಚು ಬಸ್ ಗಳನ್ನ ಇನ್ನೂ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಇಂದು ಅಂತಹ ಪ್ರಯಾಣಿಕರು ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ ಕ್ಯಾಮೆರಾ ವಿಷಲ್ ನಲ್ಲಿ ಪ್ರಯಾಣಿಕರು ಬಸ್ ಗಾಗಿ ಕುಳಿತಿರುವ ದೃಶ್ಯ ಬಸ್ ನಲ್ಲಿ ರಶ್ ನಲ್ಲಿ ಹತ್ತಿತ್ತುರುವ ದೃಶ್ತಗಳು ಲಭ್ಯವಾಗಿದೆ. ಡಾಗ್ ಸ್ಕ್ವಾಡ್ ಸಹ ಇದೇ ವೇಳೆ ಭೇಟಿ ನೀಡಿ ತಪಾಸಣೆ ನಡೆದಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ-https://suddilive.in/archives/1827
