ಸ್ಥಳೀಯ ಸುದ್ದಿಗಳು

ಎಕ್ಸಪೋರ್ಟ್ ಕಂಪನಿಯ ವಿರುದ್ಧ ದೂರಿಗೆ ಸ್ಪಂಧಿಸಿದ ಸಚಿವರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಗೆ ಸಂಕಷ್ಟ ಎದುರಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಶಾಹೀ ಗಾರ್ಮೆಂಟ್ಸ್ ವಿರುದ್ದ ನಿಧಿಗೆ ಗ್ರಾಮ ಪಂಚಾಯಿತಿ ನೀಡಿದ ಮನವಿಗೆ ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಸ್ಪಂಧಿಸಿ ಮುಂದಿನ ಕ್ರಮಕ್ಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರಿಂದ ಗ್ರಾಮಸ್ಥರ ಮತ್ತೊಂದು ಸುತ್ತಿನ ಹೋರಾಟಕ್ಕೆ ದಾರಿ ಮಾಡಕೊಟ್ಟಿದೆ.  ಕಾರ್ಖಾನೆಯ ಪಕ್ಕದಲ್ಲಿರುವ ಉಚ್ಚಣಿ ಕೆರೆಗೆ ಕಾರ್ಖಾನೆಯ ಕಲೂಷಿತ ನೀರು ಬಿಡುವುದರಿಂದ ಭದ್ರ ಎಡದಂಡೆಯ ಮೂಲಕ ಅಚ್ಚುಕಟ್ಟು ಪ್ರದೇಶದಲ್ಲಿರುವ ಸುಮಾರು 20 ಕೆರೆಯ ನೀರು ಕಲೂಷಿತಗೊಳ್ಳುತ್ತಿತ್ತು. ಇದರಿಂದ ಮೀನುಗಳು ಸಾವನ್ಬಪ್ಪಿದ್ದವು.

ಜಲಚರ ಪ್ರಾಣಿಗಳು ಕಲೂಷಿತ ನೀರಿನಿಂದ ಸಾವನ್ನಪ್ಪುತ್ತಿವೆ. ಕೆರೆಗಳಿಗೆ ಕಲೂಷಿತ ನೀರು ಹರಿಸದಂತೆ ಅನೇಕ ಬಾರಿ ನಿಧಿಗೆ ಗ್ರಾಮ ಪಂಚಾಯಿತಿ ನೋಟೀಸ್ ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದ ಕಾರ್ಖಾನೆಯ ವಿರುದ್ಧ ಕ್ರಿಮಿನಲ್ ಮೊಕದ್ದೆ ದಾಖಲಿಸುವಂತೆ ಗ್ರಾಮಸ್ಥರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯವರು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಸಚಿವರ ಈಶ್ವರ ಖಂಡ್ರೆಯವರಿಗೆ ಪತ್ರ ರವಾನಿಸಿದ್ದರು. ಈಗ ಸಚಿವರು ಪತ್ರವನ್ನ ಪರಿಸರ ಇಲಾಖೆಯ ಸರ್ಕಾರಿ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮನವಿಯನ್ನ ಪರಿಶೀಲಿಸಿ ನಿಯಮದ ಅಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಪಲ್ಯೂಷನ್ ಬೋರ್ಡ್ ವರಸೆನೇ ಬೇರೆ…

ಈ ಕುರಿತು ಸಮಗ್ರ ವರದಿಗಾಗಿ ಸುದ್ದಿಲೈವ್ ಮಲವಗೊಪ್ಪ ಕೆರೆಯಲ್ಲಿ ಕಲೂಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿದೆ ಎಂಬ ಕೂಗು ಬಂದಾಗ ಕೆರೆಗೆ ಭೇಟಿ ನೀಡಿದ ವೇಳೆ ಪರಿಸರ ಮಾಲಿನ್ಯ ಮಂಡಳಿಯ  ಅಧಿಕಾರಿಯ್ನ ಸಂಪರ್ಕಿಸಲಾಗಿತ್ತು.

ಆಗ ಕೆರೆ ಭೇಟಿ ನೀಡಿರುವ ಬಗ್ಗೆ ಪರಿಸರ ಇಲಾಖೆ ಅಧಿಕಾರಿಗಳು ಕಲೂಷಿತ ನೀರನ್ನ ಸಂಗ್ರಹಿಸಲಾಗಿದೆ. 15 ದಿನಗಳ ಕಾಲ ವರದಿಗಾಗಿ ಕಾಯಬೇಕಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಮೀನುಗಳು ಸಾವನ್ನಪ್ಪಿರುವ ಬಗ್ಗೆ ಕೇಳಿದಾಗ ಅದು ನಮಗೆ ಬರೊಲ್ಲವೆಂದು ನುಣಚಿಕೊಂಡಿದ್ದರು. ಇದರಿಂದ ಜನಪರ ಕಾಳಜಿ ಹೊಂದಬೇಕಿದ್ದ ಮಂಡಳಿ ಜವಬ್ದಾರಿಯಿಂದ ನುಣಚಿಕೊಳ್ಳುತ್ತಿರುವ ಮುನ್ಸೂಚನೆ ಕಂಡು ಬಂದಿದೆ. ಹೋಗಲಿ ಪರಿಸರ ಮಾಲಿನ್ಯ ಇಲಾಖೆ ಇದುವರೆಗೂ ಕೈಗೊಂಡಿರುವ ಕ್ರಮದ ಬಗ್ಗೆನಾದರೂ ಅಂಕಿ ಅಂಶ ನೀಡಿದರೆ ಒಳ್ಳೆಯದು.

ಗ್ರಾಮಸ್ಥರ ಬೇಡಿಕೆ ಒಂದೆ..

ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಿಸಿರುವ ಶಾಹೀ ಗಾರ್ಮೆಂಟ್ಸ್ ಗೆ ಆರಂಭದಲ್ಲಿ ಪಲ್ಯೂಷನ್ ಬೋರ್ಡ್ ಹಸಿರು ನಿಶಾನೆ ಕೊಟ್ಟಿದ್ದಾದರೂ ಹೇಗೆ? ಕಾರ್ಖಾನೆಯಲ್ಲಿ ಬಹುಪಾಲು ಹೊರ ರಾಜ್ಯದ ನೌಕರರಿಗೆ ಅವಕಾಶ ನೀಡಲಾಗಿದೆ ಸ್ಥಳೀಯರಿಗೆ ಕೆಲಸ ಸಿಗಲಿದೆ ಎಂದು ಹೇಳುವ ರಾಜಕಾರಣಿಗಳಿಂದ ಹುಸಿಯಾದ ಭರವಸೆ ದೊರೆತಿದೆ ಎಂದು ಶಾಪ ಹಾಕಿದ್ದಾರೆ.

20 ಕೆರೆಗಳನ್ನ ಹಾದು ಹೋಗುವ‌ ಭದ್ರ ಎಡ ದಂಡೆ ನಾಲೆಯ ನೀರನ್ನ ಕಲೂಷಿತಗೊಳಿಸುವ ಹಕ್ಕು ಕಾರ್ಖಾನೆಗೆ ಬಂದಿದ್ದಾರೂ ಹೇಗೆ?, ಕಳೆದ 10 ವರ್ಷಗಳಿಂದ ಗಾರ್ಮೆಂಟ್ಸ್ ವಿರುದ್ಧ ಕ್ರಮ ಜರುಗಿಸಿ ಎಂದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೂ ಯಾಕೆ? ನಿಧಿಗೆ ಗ್ರಾಮ ಪಂಚಾಯಿತಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಕಾರ್ಖಾನೆ ಮತ್ತೆ ಅದೇ ಕೆಲಸವನ್ನ ರಿಪೀಟ್ ಮಾಡುತ್ತಿರುವುದೇಕೆ? ಕೆರೆ ನೀರಿಗೆ ಕಾರ್ಖಾನೆಯ ನೀರು ಸೇರ್ಪಡೆ ಗೊಳ್ಳುತ್ತಿರುವುದನ್ನ ನಿಯಂತ್ರಿಸುವವರು ಯಾರು?  ಎಂಬ ಪ್ರಶ್ನೆಗೆ ಉತ್ತರನೇ ಸಿಗುತ್ತಿಲ್ಲ.

ದೂರುಕೊಟ್ಟಾಗ ಅಧಿಕಾರಿಗಳು ಬರ್ತಾರೆ ಹೋಗ್ತಾರೆ ಆದರೆ ಜಲಚರ ಪ್ರಾಣಿಗಳು ಸಾವು ಮುಂದು ವರೆಯಲಿದೆ. ಇದಕ್ಕೆ ಕಾರಣ ಕೇಳಿದರೆ ಕಾರ್ಖಾನೆಯಿಂದಲ್ಲ ಎಂದು ಅಧಿಕಾರಿಗಳು ಹೇಳಿ ಜವಬ್ದಾರಿಯಿಂದ ನುಣಚಿಕೊಳ್ತಾರೆ. ಹೆಚ್ಚುಕಡಿಮೆಯಾದರೆ ಊರನ್ನೇ ಬಿಡುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಗ್ರಾಮಸ್ಥರು‌.

ಮುಂದಾದರೂ ಕ್ರಮ ಆಗಲಿದೆಯಾ?

ಮಲವಗೊಪ್ಪದ ಕೆರೆ ಸಮಿತಿಯವರು ಕಾರ್ಖಾನೆಯ ಕಲೂಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿದ್ದರಿಂದ ಕಾರ್ಖಾನೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮನವಿ ಮಾಡಿಕೊಂಡಿರುವುದರಿಂದ ಸಚಿವ ಈಶ್ವರ್ ಖಂಡ್ರೆಯವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಹೆಚ್ಚಿದೆ.

ಇದನ್ನೂ ಓದಿ-https://suddilive.in/archives/8389

Related Articles

Leave a Reply

Your email address will not be published. Required fields are marked *

Back to top button